ನಗರಸಭೆ: ಪುರಪಿತೃಗಳ ಭವಿಷ್ಯ ಭದ್ರತಾ ಕೊಠಡಿಯಲ್ಲಿ!
Team Udayavani, Sep 2, 2018, 6:00 AM IST
ಉಡುಪಿ: ಉಡುಪಿ ನಗರಸಭೆ ಮತದಾನ ಮುಗಿದಿದ್ದು, ಗೆಲ್ಲುವ ಲೆಕ್ಕಾಚಾರಗಳಲ್ಲಿ ಪ್ರಮುಖ ಪಕ್ಷಗಳು ನಿರತವಾಗಿವೆ. 35 ವಾರ್ಡ್(ಸ್ಥಾನ)ಗಳ ನಗರಸಭೆಯಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದರೆ, ಅಧಿಕಾರ ಮರಳಿ ಪಡೆಯುವ ಆತ್ಮವಿಶ್ವಾಸ ಬಿಜೆಪಿಯದ್ದು.
“ಕಾಂಗ್ರೆಸ್ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ನೀಡಿದ ಉತ್ತಮ ಆಡಳಿತ, ಪ್ರಮೋದ್ ಮಧ್ವರಾಜ್ ಅವರು ಸಚಿವರಾಗಿದ್ದಾಗ ಭಾರೀ ಮೊತ್ತದ ಅನುದಾನವನ್ನು ನಗರಕ್ಕೆ ತಂದುಕೊಟ್ಟಿರುವುದು, ಮೋದಿ ಅಲೆ ಈ ಚುನಾವಣೆಯಲ್ಲಿ ಕೆಲಸ ಮಾಡಿಲ್ಲ’ ಎಂಬ ವಿಶ್ಲೇಷಣೆ ಕೈ ಪಾಳಯದ್ದು.
“26ರಿಂದ 28 ಸ್ಥಾನಗಳಲ್ಲಿ ಕಮಲ ಅರಳುವ ನಿರೀಕ್ಷೆ ಇದೆ. ಕಾಂಗ್ರೆಸ್‌ನ ದುರಾಡಳಿತ, ಶಾಸಕ ರಘುಪತಿ ಭಟ್ ಅವರ ಕ್ರಿಯಾಶೀಲತೆ, ಕಾರ್ಯಕರ್ತರ ಶ್ರಮ, ಮೋದಿ ಅಲೆ, ಈ ಹಿಂದೆ ಬಿಜೆಪಿ ನೀಡಿರುವ ಉತ್ತಮ ಆಡಳಿತ ಇವೆಲ್ಲವೂ ಬಿಜೆಪಿ ಗೆಲುವಿಗೆ ಕಾರಣವಾಗಲಿದೆ’ ಎಂದು ಬಿಜೆಪಿಯ ಪ್ರಮುಖ ನಾಯಕರು ಲೆಕ್ಕಾಚಾರ ಮುಂದಿಡುತ್ತಿದ್ದಾರೆ. ಖಾತೆ ತೆರೆಯುವ ಪೂರ್ಣ ವಿಶ್ವಾಸ ಜೆಡಿಎಸ್‌ನದ್ದು. ಗೆಲ್ಲುವ “ಖಚಿತತೆ’ ಕೆಲವು ಪಕ್ಷೇತರರಲ್ಲಿಯೂ ಇದೆ.
ಮಣಿಪಾಲದಲ್ಲಿ ಕನಿಷ್ಠ ಮತದಾನ
ನಗರಸಭೆಯಲ್ಲಿ ಸರಾಸರಿ ಶೇ. 68.52 ಮತದಾನವಾಗಿದೆ. 47,538 ಪುರುಷ ಮತದಾರರ ಪೈಕಿ 32,659 ಮಂದಿ ಮತ ಚಲಾಯಿಸಿದ್ದಾರೆ. 50,023 ಮಹಿಳಾ ಮತದಾರರ ಪೈಕಿ 34,194 ಮಂದಿ ಮತದಾನ ಮಾಡಿದ್ದಾರೆ. ಪರ್ಕಳ ವಾರ್ಡ್‌ನಲ್ಲಿ ಗರಿಷ್ಠ ಶೇ. 88.25 ಮತದಾನವಾಗಿದೆ. ಮಣಿಪಾಲದಲ್ಲಿ ಕನಿಷ್ಠ ಶೇ. 51.35 ಮತದಾನವಾಗಿದೆ.
ಎಲ್ಲಿ ಎಷ್ಟು ಮತದಾನ?
ಕೊಳ ವಾರ್ಡ್‌ನಲ್ಲಿ 75.78, ವಡಭಾಂಡೇಶ್ವರದಲ್ಲಿ ಶೇ.74.49, ಮಲ್ಪೆ ಸೆಂಟ್ರಲ್‌ನಲ್ಲಿ ಶೇ.64.86, ಕೊಡವೂರಿನಲ್ಲಿ ಶೇ.78.42, ಕಲ್ಮಾಡಿಯಲ್ಲಿ ಶೇ. 79.26, ಮೂಡುಬೆಟ್ಟಿನಲ್ಲಿ ಶೇ. 75.78, ಕೊಡಂಕೂರಿನಲ್ಲಿ ಶೇ .73.96, ನಿಟ್ಟೂರಿನಲ್ಲಿ ಶೇ. 75.63, ಸುಬ್ರಹ್ಮಣ್ಯ ನಗರದಲ್ಲಿ ಶೇ. 72.20, ಗೋಪಾಲಪುರದಲ್ಲಿ ಶೇ. 63.96, ಕಕ್ಕುಂಜೆಯಲ್ಲಿ ಶೇ 67.81, ಕರಂಬಳ್ಳಿಯಲ್ಲಿ ಶೇ. 70.28, ಮೂಡುಪೆರಂಪಳ್ಳಿಯಲ್ಲಿ ಶೇ. 71.05, ಸರಳೇಬೆಟ್ಟಿನಲ್ಲಿ ಶೇ. 77.73, ಸೆಟ್ಟಿಬೆಟ್ಟಿನಲ್ಲಿ ಶೇ. 70.20, ಪರ್ಕಳದಲ್ಲಿ ಶೇ. 68.25, ಈಶ್ವರನಗರದಲ್ಲಿ ಶೇ. 66.46, ಸಗ್ರಿಯಲ್ಲಿ ಶೇ. 66.39, ಇಂದ್ರಾಳಿಯಲ್ಲಿ ಶೇ. 67.33, ಇಂದಿರಾನಗರದಲ್ಲಿ ಶೇ. 74.67, ಬಡಗುಬೆಟ್ಟಿನಲ್ಲಿ ಶೇ . 69.84, ಚಿಟಾ³ಡಿಯಲ್ಲಿ ಶೇ. 69.33, ಕಸ್ತೂರ್ಬಾನಗರದಲ್ಲಿ ಶೇ. 66.33, ಕುಂಜಿ ಬೆಟ್ಟಿನಲ್ಲಿ ಶೇ. 67.57, ಕಡಿಯಾಳಿಯಲ್ಲಿ ಶೇ. 71.01, ಗುಂಡಿಬೈಲಿನಲ್ಲಿ ಶೇ. 68.53, ಬನ್ನಂಜೆಯಲ್ಲಿ ಶೇ. 63.10, ತೆಂಕಪೇಟೆಯಲ್ಲಿ ಶೇ. 55.44, ಒಳಕಾಡಿನಲ್ಲಿ ಶೇ. 59.85, ಬೈಲೂರಿನಲ್ಲಿ ಶೇ. 66.23, ಕಿನ್ನಿಮೂಲ್ಕಿ ಯಲ್ಲಿ ಶೇ. 61.61, ಅಜ್ಜರಕಾಡಿನಲ್ಲಿ ಶೇ 58.24, ಶಿರಿಬೀಡಿನಲ್ಲಿ ಶೇ. 65.06, ಅಂಬಲಪಾಡಿಯಲ್ಲಿ ಶೇ. 64.24 ಮತದಾನವಾಗಿದೆ.
ನಿಷೇಧಾಜ್ಞೆ
ಉಡುಪಿ ನಗರಸಭೆ, ಕುಂದಾಪುರ, ಕಾರ್ಕಳ ಪುರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮತ ಎಣಿಕೆ ಸೆ. 3ರಂದು ಉಡುಪಿ ಕುಂಜಿಬೆಟ್ಟು ಟಿ.ಎ.ಪೈ ಆಂ.ಮಾ.ಶಾಲೆ, ಕುಂದಾಪುರ ಮತ್ತು ಕಾರ್ಕಳ ಮಿನಿ ವಿಧಾನಸೌಧದಲ್ಲಿ ನಡೆಯಲಿದೆ. ಈ ವ್ಯಾಪ್ತಿಯಲ್ಲಿ ಸೆ. 3ರ ಬೆಳಗ್ಗೆ 6ರಿಂದ ಸೆ. 4ರ ಬೆಳಗ್ಗೆ 6ರ ವರೆಗೆ ಸೆಕ್ಷನ್ 144ರಂತೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
8ರಿಂದ ಮತ ಎಣಿಕೆ ಆರಂಭ
ಉಡುಪಿ ನಗರಸಭೆ ಮತ್ತು ಸಾಲಿಗ್ರಾಮ ಪ.ಪಂ.ನ ಮತ ಎಣಿಕೆ ಸೋಮವಾರ ಬೆಳಗ್ಗೆ 8ರಂದ ಕುಂಜಿಬೆಟ್ಟು ಟಿ.ಎಂ.ಎ ಪೈ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಲಿದ್ದು ಮಧ್ಯಾಹ್ನ 12 ಗಂಟೆಯೊಳಗೆ ಫಲಿತಾಂಶ ಪೂರ್ಣ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.