ನಗರಸಭೆಗೆ ಬೇಕಿದೆ ಸುಸಜ್ಜಿತ ಯುಜಿಡಿ ವ್ಯವಸ್ಥೆ 


Team Udayavani, Aug 12, 2021, 3:40 AM IST

ನಗರಸಭೆಗೆ ಬೇಕಿದೆ ಸುಸಜ್ಜಿತ ಯುಜಿಡಿ ವ್ಯವಸ್ಥೆ 

ಉಡುಪಿ: ಪೌರಕಾರ್ಮಿಕರು ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧಿಸುವ ಮೂಲಕ ದೇಶದಲ್ಲಿ ಹೊಸ ಕ್ರಾಂತಿ ತಂದ ಉಡುಪಿ ನಗರಸಭೆಗೆ 86 ವರ್ಷ ತುಂಬಿದೆ. ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದು, ಇದೀಗ ರಾಜ್ಯದ ಸಿಎಂ ಸ್ಥಾನಕ್ಕೇರಿದ ಬಸವರಾಜ್‌ ಬೊಮ್ಮಾಯಿ ಅವಧಿಯಲ್ಲಿ ನಗರಕ್ಕೆ ತುರ್ತು ಅಗತ್ಯವಿರುವ ಸುಸಜ್ಜಿತ ಯುಜಿಡಿ ನಿರ್ಮಾಣಗೊಳ್ಳಬಹುದು ಎನ್ನುವ ನಿರೀಕ್ಷೆ ಜನರಲ್ಲಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರ ಬಜೆಟ್‌ನಲ್ಲಿ 5,000 ಕೋ.ರೂ. ನಗರದ ಯುಜಿಡಿ ವ್ಯವಸ್ಥೆಗೆ ಮೀಸಲಿಟ್ಟಿದ್ದರು. ಇದರಲ್ಲಿ ಯುಜಿಡಿಯನ್ನು ಹೊಸದಾಗಿ ನಿರ್ಮಿಸುವ ಹಾಗೂ ಮೇಲ್ದರ್ಜೆಗೇರಿಸಲು ಮೊದಲ ಆದ್ಯತೆ ನೀಡ ಲಾ ಗಿದೆ. ಪ್ರಸ್ತುತ ಸಿಎಂ ಸ್ಥಾನದಲ್ಲಿರುವ ಬಸವರಾಜ್‌ ಬೊಮ್ಮಾಯಿ ಅವರಿಗೆ ಜಿಲ್ಲೆಯ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಒತ್ತಡ ಹಾಕಿದರೆ ಯುಜಿಡಿಗೆ ಅಗತ್ಯವಿರುವ ಅನುದಾನ ಮಂಜೂರಾಗುವ ಸಾಧ್ಯತೆಗಳಿವೆ.

250 ಕೋ.ರೂ. ಮೊತ್ತ :

ನಗರದೊಳಗಿನ ಒಳಚರಂಡಿ ವ್ಯವಸ್ಥೆ ಮೇಲ್ದರ್ಜೆ ಗೇರಿಸುವ ನಿಟ್ಟಿನಲ್ಲಿ 250 ಕೋ.ರೂ. ವೆಚ್ಚ ವಿಸ್ತೃತ ಯೋಜನ ವರದಿ (ಡಿಪಿಆರ್‌) ಸಿದ್ಧಪಡಿಸಿ, ಮಂಡಳಿಯ ಅನು ಮೋದನೆಗೆ ಕಾಯುತ್ತಿದೆ. ಹೊಸ ಪ್ರಸ್ತಾವನೆಯಲ್ಲಿ ಯುಜಿಡಿ ವ್ಯವಸ್ಥೆಯನ್ನು 148 ಕಿ.ಮೀ. ವಿಸ್ತರಿಸಲಾಗುತ್ತದೆ.

ಪ್ರತೀ 30 ಮೀಟರ್‌ಗೆ ಒಂದರಂತೆ 5,600 ಮ್ಯಾನ್‌ಹೋಲ್‌ಗ‌ಳ ನಿರ್ಮಾಣವಾಗಲಿದೆ. ಹಳೆಯದು 3 ಸೇರಿದಂತೆ ಒಟ್ಟು 5 ವೆಟ್‌ವೆಲ್‌, 11 ಸೆಪ್ಟಿಕ್‌ ಟ್ಯಾಂಕ್‌ ನಿರ್ಮಾಣವಾಗಲಿದೆ.

ಶೇ. 17ರಷ್ಟು ಯುಜಿಡಿ  :

ನಗರಸಭೆ ವ್ಯಾಪ್ತಿಯಲ್ಲಿ ಕೇವಲ ಶೇ. 17ರಷ್ಟು ಯುಜಿಡಿ (ಒಳಚರಂಡಿ) ವ್ಯವಸ್ಥೆ ಇದೆ. ಅದೂ ಉಡುಪಿ ಮುಖ್ಯ ರಸ್ತೆಯಲ್ಲಿ ಮಾತ್ರ. ನಗರ ಬೆಳೆಯುತ್ತಿದ್ದಂತೆ ಕೊಳಚೆ ನೀರು ನಿರ್ವಹಣೆ ಅತೀ ದೊಡ್ಡ ಸಮಸ್ಯೆಯಾಗುತ್ತಿದೆ. ಸೆಪ್ಟಿಕ್‌ ಟ್ಯಾಂಕ್‌ ಮಾಡಲಾಗಿದ್ದರೂ ಮಣ್ಣಿನ ಗುಣಕ್ಕನುಗುಣವಾಗಿ ಪೂರ್ಣವಾಗಿ ನೀರು ಇಂಗುತ್ತಿಲ್ಲ. ಪ್ರಸ್ತುತ ಹೆಚ್ಚುವರಿ ಕೊಳಚೆ ನೀರನ್ನು ಜನರು ಮಳೆ ನೀರಿನ ಚರಂಡಿಗೆ ಬಿಡುತ್ತಿದ್ದು, ಇದರಿಂದ ಕೊಳಚೆ ನೀರು ಮೇಲ್ಮೆ„ಯಲ್ಲಿ ಇಂಗಿ ಸಮೀಪದ ಜಲ ಮೂಲಗಳು ಕಲುಷಿತವಾಗಿದೆ.

ಸ್ವಾತಂತ್ರ್ಯ ಪೂರ್ವದ ಇತಿಹಾಸ :

ಉಡುಪಿ ನಗರಸಭೆಗೆ ಸ್ವಾತಂತ್ರ್ಯ ಪೂರ್ವದ ಇತಿಹಾಸ ವಿದೆ. 1935ರ ಎ.1ರಂದು ಅಂದಿನ ಮದ್ರಾಸ್‌ ಸರಕಾರವು ಪುರಸಭೆಯಾಗಿ ಘೋಷಣೆ ಮಾಡಿತ್ತು. ಆ ಸಂದರ್ಭದಲ್ಲಿ 7 ಹಳ್ಳಿಗಳು ಸೇರಿದ್ದವು. 1969ರಲ್ಲಿ ಪುರಸಭೆಯಾಗಿ ಘೋಷಣೆಯಾಗಿತ್ತು. 1995ರಲ್ಲಿ ಮತ್ತೆ ನಗರಸಭೆಯನ್ನಾಗಿ ಘೋಷಣೆ ಮಾಡಿದ್ದು, ಈ ಸಂದರ್ಭದಲ್ಲಿ 35 ವಾರ್ಡ್‌ಗಳನ್ನು ಒಳಗೊಂಡಿದ್ದು, 17,251 ಜನಸಂಖ್ಯೆ ಇತ್ತು. 1997ರಲ್ಲಿ ನಗರಸಭೆಯು ಜಿಲ್ಲೆಯ ಕೇಂದ್ರ ನಗರವಾಗಿ ಗುರುತಿಸಿಕೊಂಡಿತ್ತು.

2 ಹಂತದಲ್ಲಿ ಅಭಿವೃದ್ಧಿ  : 1988 ಹಾಗೂ 2010ರಲ್ಲಿ ಎರಡು ಹಂತದಲ್ಲಿ ಯುಜಿಡಿ ಅಭಿವೃದ್ಧಿಪಡಿಸಲಾಗಿತ್ತು. ಪ್ರಸ್ತುತ ನಗರದಲ್ಲಿ 93 ಕಿ.ಮೀ. ವ್ಯಾಪ್ತಿಯಲ್ಲಿ ಯುಜಿಡಿ ವ್ಯವಸ್ಥೆ ಹರಡಿಕೊಂಡಿದೆ. ಪೂರ್ಣ ಪ್ರಮಾಣದಲ್ಲಿ 8 ವಾರ್ಡ್‌ಗಳು ಹಾಗೂ 7 ವಾರ್ಡ್‌ಗಳಿಗೆ ಭಾಗಶಃ ಯುಜಿಡಿ ವ್ಯವಸ್ಥೆ ಕಲ್ಪಿಸಲಾಗಿದೆ. 2,800 ಮ್ಯಾನ್‌ಹೋಲ್‌,

4 ವೆಟ್‌ವೆಲ್‌ ಹಾಗೂ ಒಂದು 12ಎಂಎಲ್‌ಡಿ ಎಸ್‌ಟಿಪಿ ಘಟಕವನ್ನು ಹೊಂದಿದೆ ಎಂದು ಮಾಹಿತಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಇತ್ತೀಚೆಗೆ ಸರ್ವೇ ವರದಿಯಲ್ಲಿ ಉಲ್ಲೇಖೀಸಿದೆ.

ನಗರದೊಳಗಿನ ಯುಜಿಡಿ ವ್ಯವಸ್ಥೆಯನ್ನು ಉನ್ನತೀಕರಣಗೊಳಿಸಲು ಈಗಾಗಲೇ 240 ಕೋ.ರೂ. ವೆಚ್ಚದ ಡಿಪಿಆರ್‌ ಸಿದ್ಧಗೊಂಡಿದೆ. ಮಂಡಳಿಯಲ್ಲಿ ಅನುಮೋದನೆಗಾಗಿ ಕಾಯುತ್ತಿದ್ದೇವೆ. ಕೆ.ರಘುಪತಿ ಭಟ್‌ ಶಾಸಕರು

 

-ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POlice

Manipal: ವೇಶ್ಯಾವಾಟಿಕೆ; ನಾಲ್ವರುಪೊಲೀಸರ ವಶಕ್ಕೆ

POLICE-5

Udupi: ಗಾಂಜಾ ಸೇವಿಸಿದ ವ್ಯಕ್ತಿ ಪೊಲೀಸ್‌ ವಶ

6

Manipal: ಅಪಾಯಕಾರಿ ರೀತಿಯಲ್ಲಿ ಬೈಕ್‌ ಚಾಲನೆ; ಪ್ರಕರಣ ದಾಖಲು

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

3-girish

Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

puttige

Udupi;ಗೀತಾರ್ಥ ಚಿಂತನೆ 147:ಪ್ರತ್ಯಕ್ಷ ಪ್ರಮಾಣ ಮಾತ್ರದಿಂದಲೇ ಜಗದ್ವ್ಯವಹಾರ ಅಸಾಧ್ಯ

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.