ಕೊಲೆಯತ್ನ, ದರೋಡೆ: ಜೀವಾವಧಿ ಶಿಕ್ಷೆ
Team Udayavani, Apr 25, 2018, 12:41 PM IST
ಕುಂದಾಪುರ: ತಾಲೂಕಿನ ಕೆದೂರು ಸಮೀಪದ ಕೊರ್ಗಿಯ ಹೊಸ್ಮಠ ಗ್ರಾಮದಲ್ಲಿ ಎರಡೂವರೆ ವರ್ಷಗಳ ಹಿಂದೆ ತನ್ನ ಅಜ್ಜಿ ಮನೆಗೆ ಪ್ರವೇಶಿಸಿ ಕೊಲೆ ಯತ್ನ ನಡೆಸಿ, ದರೋಡೆ ಮಾಡಿದ್ದ ರಂಜಿತ್ ಶೆಟ್ಟಿಗೆ ಮಂಗಳವಾರ ಇಲ್ಲಿನ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾ ಲಯದ ನ್ಯಾಯಾಧೀಶ ಎಂ. ಪ್ರಕಾಶ್ ಖಂಡೇರಿ ಅವರು ತೀರ್ಪು ಪ್ರಕಟಿಸಿದ್ದು ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್‌ಚಂದ್ರ ಶೆಟ್ಟಿ ಸಂತ್ರಸ್ತರ ಪರ ವಾದ ಮಂಡಿಸಿದ್ದರು.
ಘಟನೆ ವಿವರ
ಕೊರ್ಗಿಯ ಹೊಸ್ಮಠc ಗ್ರಾಮದ ಮೆಕ್ಕೆಮನೆ ಕುಷ್ಟಪ್ಪ ಶೆಟ್ಟಿ ಅವರ ಸಂಬಂಧಿಯೇ ಆದ ರಂಜಿತ್ ಶೆಟ್ಟಿ 2016ರ ಜ.4ರಂದು ಮಧ್ಯರಾತ್ರಿ 1.30ರ ವೇಳೆಯಲ್ಲಿ ಕುಷ್ಟಪ್ಪ ಅಲಿಯಾಸ್ ಕೃಷ್ಣಯ್ಯ ಶೆಟ್ಟಿ ಮನೆಗೆ ತೆರಳಿದ್ದ. ಅಲ್ಲಿ ಕುಷ್ಟಪ್ಪ, ಕೊರಗಮ್ಮ ಶೆಡ್ತಿ ಹಾಗೂ ಅವರ ಪುತ್ರಿ ಚಂದ್ರಮತಿ ಶೆಟ್ಟಿ ಇದ್ದರು. ಕುಷ್ಟಪ್ಪ ತಡರಾತ್ರಿ ಮೂತ್ರ ವಿಸರ್ಜನೆಗೆಂದು ಹೊರ ಬಂದಾಗ ರಂಜಿತ್ ಹಿಂದಿನಿಂದ ಬಂದು ತಲೆ ಹಾಗೂ ಬೆನ್ನಿಗೆ ಕತ್ತಿ ಯಿಂದ ಕಡಿದಿದ್ದಾನೆ.
ತಂದೆಯನ್ನು ರಕ್ಷಿಸಲು ಬಂದ ಪುತ್ರಿ ಚಂದ್ರಮತಿ ಶೆಡ್ತಿಗೂ ಕಡಿದು ಅವರಿಬ್ಬರನ್ನು ಐದು ಗಂಟೆಗಳ ಕಾಲ ಕೂಡಿ ಹಾಕಿದ್ದ. ಚಿನ್ನ ಮತ್ತು ಹಣದ ಆಸೆಗಾಗಿ ತನ್ನ ಅಜ್ಜಿ 90ರ ವಯಸ್ಸಿನ ಕೊರಗಮ್ಮ ಶೆಡ್ತಿ ಮೇಲೆ ಎರಗಿ ಕತ್ತಿ ಯಿಂದ ಕಡಿದಿದ್ದ. ಮರುದಿನ ಮುಂಜಾನೆಯಷ್ಟೆ ವಿಷಯ ಹೊರ ಜಗತ್ತಿಗೆ ಗೊತ್ತಾಗಿತ್ತು.
ಕ್ಷಿಪ್ರ ಕಾರ್ಯಾಚರಣೆ
ತನ್ನ ಖರ್ಚಿಗಾಗಿ ಒಡವೆ ಕೇಳಿದ್ದ ರಂಜಿತ್, ಅದು ಈಡೇರದಾಗ ಈ ಕೃತ್ಯವೆಸಗಿದ್ದ. ಅನಂತರ ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಒಡವೆ ಗಳನ್ನು ದೋಚಿ ಪರಾರಿಯಾಗಿದ್ದ. ಅದರಲ್ಲಿ ಆತನ ತಾಯಿಯ ಒಡವೆಗಳೂ ಇದ್ದವು. ಲೂಟಿ ಮಾಡಿದ ಚಿನ್ನವನ್ನು ಕೋಟೇಶ್ವರದ ಚಿನ್ನದ ಅಂಗಡಿ.ಲ್ಲಿ ಮಾರಲು ಯತ್ನಿಸಿದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.
ರಂಜಿತ್‌ನ ತಾಯಿ ಮತ್ತು ಸಹೋದರಿ ಮನೆ ಬಿಟ್ಟು ಬೇರಡೆ ವಾಸವಾಗಿದ್ದರು. ರಂಜಿತ್ ಕೊರಗಮ್ಮ ಶೆಡ್ತಿ ಅವರ ಹಿರಿಯ ಪುತ್ರಿಯ ಮಗ.
ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಸರ್ಕಲ್ ಇನ್ಸ್ ಪೆಕ್ಟರ್ ಪಿ.ಎಂ.ದಿವಾಕರ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಶಿಕ್ಷೆ ವಿವರ
ಕೊಲೆಯತ್ನ ನಡೆಸಿದ್ದಕ್ಕೆ ಜೀವಾವಧಿ ಶಿಕ್ಷೆ ಮತ್ತು 5 ಸಾ. ರೂ. ದಂಡ. ದಂಡ ತೆರಲು ತಪ್ಪಿದರೆ 1 ತಿಂಗಳು ಸಜೆ. ಮನೆಯೊಳಗೆ ಅಕ್ರಮ ಪ್ರವೇಶ ಮಾಡಿದ್ದಕ್ಕೆ 5 ವರ್ಷ ಕಠಿನ ಸಜೆ ಹಾಗೂ 5 ಸಾ. ರೂ. ದಂಡ. ದಂಡ ತೆರಲು ತಪ್ಪಿದರೆ 1 ತಿಂಗಳು ಜೈಲು. ಜೀವ ಬೆದರಿಕೆ ಹಾಕಿದ್ದಕ್ಕೆ 1 ವರ್ಷದ ಶಿಕ್ಷೆ ಮತ್ತು 1 ಸಾ. ರೂ. ದಂಡ. ದಂಡ ತೆರಲು ತಪ್ಪಿದರೆ 10 ದಿನಗಳ ಸಜೆ. ಹಲ್ಲೆ ಮಾಡಿ ಸಾಮಾನ್ಯ ಗಾಯ ಉಂಟು ಮಾಡಿದ್ದಕ್ಕೆ 2 ವರ್ಷದ ಶಿಕ್ಷೆ ಹಾಗೂ 3 ಸಾ. ರೂ. ದಂಡ. ದಂಡ ತೆರಲು ತಪ್ಪಿದರೆ 20 ದಿನಗಳ ಶಿಕ್ಷೆ. ಹಲ್ಲೆ ಮಾಡಿ ತೀವ್ರತರ ಗಾಯಗೊಳಿಸಿದ್ದಕ್ಕೆ 5 ವರ್ಷಗಳ ಶಿಕ್ಷೆ ಹಾಗೂ 5 ಸಾ. ರೂ. ದಂಡ. ದಂಡ ಕೊಡದಿದ್ದರೆ 1 ತಿಂಗಳ ಸಜೆ. ಸುಲಿಗೆ ಮಾಡಿದ್ದಕ್ಕೆ 7 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಗಾಯಾಳುಗಳು ಪರಿಹಾರ ಪಡೆಯಲು ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದೆಂದು ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್’ನಲ್ಲಿ ಪಲಿಮಾರು ಶ್ರೀ ಅಭಿಮತ
Udupi;ಗೀತಾರ್ಥ ಚಿಂತನೆ 146: ಚಾರ್ವಾಕ ಬಿಟ್ಟು ಉಳಿದೆಲ್ಲ ಮತಗಳಲ್ಲಿ ಪುಣ್ಯಪಾಪ ಕಲ್ಪನೆ
Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು
Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.