ದುಡ್ಡಿಲ್ಲದ ರಾಜಕಾರಣಿ ಎಂಬ ಹೆಸರೇ ನನ್ನ ಆಸ್ತಿ
Team Udayavani, Apr 4, 2018, 7:30 AM IST
ಕುಂದಾಪುರ, ಬೈಂದೂರು ಕ್ಷೇತ್ರಗಳಲ್ಲಿ ಒಟ್ಟು ಐದು ಬಾರಿ ಸ್ಪರ್ಧಿಸಿ ಐದು ಬಾರಿಯೂ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟವರು ನೀವು.
ಸೋಲಿನ ಅನುಭವ…?
ದುಃಸ್ವಪ್ನ, ಸೋಲು, ಕೆಟ್ಟದನ್ನು ಮರೆಯಬೇಕಂತೆ. ಹಾಗಾಗಿ ನಾನು ಅದರಲ್ಲಿ ಕಂಡ ಸಿಹಿಯ ಅನುಭವವನ್ನು ಆಸ್ವಾದಿಸುತ್ತಿದ್ದೇನೆ. ನಾನೆಂದೂ ಟಿಕೆಟ್‌ಗಾಗಿ ದಿಲ್ಲಿ, ಬೆಂಗಳೂರು ಅಲೆದವನಲ್ಲ. 1978ರಲ್ಲಿ ದೇವರಾಜ ಅರಸು ಅವಕಾಶ ಕೊಟ್ಟರು. ಒಕ್ಕಲುತನ ಹೋಗಿ ಗೇಣಿದಾರರು ಭೂಮಾಲಕರಾದ ಸಂದರ್ಭ. ಗೇಣಿದಾರನ ಮಗನೊಬ್ಬ 28ರ ಹರೆಯದಲ್ಲಿ ವಿಧಾನಸಭೆಗೆ ಸ್ಪರ್ಧಿಸುವಂತಾಯ್ತು.
ಹಾಗಿದ್ದರೂ ಸೋಲೇಕಾಯ್ತು?
ಭೂಮಾಲಕರು ನನ್ನನ್ನು ಜೀವಂತ ಬಿಟ್ಟದ್ದೇ ದೊಡ್ಡದು. ಜನ ಅವರ ಮತವನ್ನು ಅವರೇ ಹಾಕಿದ್ದರೆ ನಾನು ಗೆಲ್ಲುತ್ತಿದ್ದೆ. ತೆಕ್ಕಟ್ಟೆಯಿಂದ ಗಂಗೊಳ್ಳಿ ವರೆಗೆ ನಾನು ಮತಗಳಿಕೆಯಲ್ಲಿ ಮುಂದಿದ್ದೆ. ಅನಂತರ ಭೂಮಾಲಕರ ಪ್ರಾಬಲ್ಯದ ಕ್ಷೇತ್ರ.
ಎರಡನೆ ಸೋಲು?
1983ರಲ್ಲಿ ಅರಸು – ಇಂದಿರಾ ಜಟಾಪಟಿಯಿಂದ ಪಕ್ಷ ಇಬ್ಭಾಗವಾಗಿ ನಾನು ಅರಸು ಪರ ನಿಲ್ಲಬೇಕಾಯ್ತು. ಅಬ್ದುಲ್ ನಜೀರ್ ಸಾಬ್ ನೇತೃತ್ವದ ಕ್ರಾಂತಿರಂಗ ಅಸ್ತಿತ್ವಕ್ಕೆ ಬಂದು ಅನಂತರ ಬಂಗಾರಪ್ಪ ಸೇರ್ಪಡೆಯಾಗಿ ಜನತಾ ರಂಗವಾಯ್ತು. ಅದು ಜನತಾ ಪಕ್ಷದ ಜತೆ ವಿಲೀನವಾಯ್ತು. ನಾನು ಅಭ್ಯರ್ಥಿಯಾಗಿ ಭೂಮಾಲಕರ ದೆಸೆಯಿಂದ ಸೋಲು ಕಟ್ಟಿಕೊಂಡೆ. ಕುಂದಾಪುರ ಕ್ಷೇತ್ರ ಸಾಕೆನಿಸಿತು.
ವಲಸೆಯಲ್ಲೂ ಗೆಲುವಾಗಲಿಲ್ಲ?
1985ರಲ್ಲಿ ಬೈಂದೂರಿನಲ್ಲಿ ಸ್ಪರ್ಧಿಸಿದೆ. ಜನ ಪ್ರೀತಿ ಕೊಟ್ಟರು. ಚುನಾವಣಾ ಖರ್ಚಿಗೆ ಅವರಾಗಿ ಹಣ ಕೊಟ್ಟರು. ಆದರೆ ಕೇವಲ 414 ಮತಗಳಿಂದ ಪರಾಜಿತನಾದೆ. 1989ರಲ್ಲಿ ಜನತಾದಳದಿಂದ ಸ್ಪರ್ಧಿಸಿದೆ. ಆ ಬಾರಿ ಲೋಕಸಭಾ, ವಿಧಾನಸಭಾ ಚುನಾವಣೆ ಒಟ್ಟಿಗೆ ಬಂತು. ಜನತಾದಳ ಹಾಗೂ ಸಂಯುಕ್ತ ಜನತಾದಳದ ಚಿಹ್ನೆಯ ಗೊಂದಲದಿಂದ 519 ಮತಗಳಿಂದ ನನಗೆ ಸೋಲಾಯ್ತು.
ಸ್ಪರ್ಧಿಸುವ ಛಲ ಮುಂದುವರಿಸಿದಿರಿ?
ಜನತಾದಳ ಕ್ಷೀಣವಾದ ಕಾರಣ ಕಾಂಗ್ರೆಸ್ ಸೇರಿ 1994ರಲ್ಲಿ ಸ್ಪರ್ಧಿಸಿದೆ. ಬಿಜೆಪಿಯವರು ನಮ್ಮ ಪಕ್ಷದ ಅಲೊ#àನ್ಸ್ ಲೋಬೋರನ್ನು ಬಂಡಾಯ ಅಭ್ಯರ್ಥಿಯಾಗಿಸಿ, ಕೆಸಿಪಿಯಿಂದ ಗೋಪಾಲ ಪೂಜಾರಿ ಅಭ್ಯರ್ಥಿಯಾಗಿ ಇಬ್ಬರೂ 17,000ದಷ್ಟು ಮತಗಳನ್ನು ಪಡೆದ ಕಾರಣ ನಾನು 11,000 ಮತಗಳಿಂದ ಸೋಲಬೇಕಾಯ್ತು.
ಎಂಬಲ್ಲಿಗೆ ಸಾಕಾಯ್ತಾ?
ನನ್ನಂತಹವನಿಗೆ ಸ್ಪರ್ಧೆ ಅಸಾಧ್ಯ ಎಂದು ಸ್ಪರ್ಧೆಯಿಂದ ದೂರ ಉಳಿದೆ. ಆದರೆ ಇಂದಿಗೂ ಬೈಂದೂರು ಕ್ಷೇತ್ರದ ಜನರ ಪ್ರೀತಿಯ ಋಣ ನನ್ನ ಮೇಲಿದೆ. ಜನ ನನ್ನನ್ನು ದುಡ್ಡಿಲ್ಲದ ರಾಜಕಾರಣಿ ಎಂದೇ ಗುರುತಿಸು ತ್ತಾರೆ. ಅದೇ ನನ್ನ ಆಸ್ತಿ.
ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.