ಪ್ರಶಾಂತ್ ಬಸ್ರೂರು ಹತ್ಯೆ ಕಾರಣ ನಿಗೂಢ!
ಜರ್ಮನಿಯಲ್ಲಿ ಬಸ್ರೂರು ವ್ಯಕ್ತಿ ಕೊಲೆ ಪ್ರಕರಣ
Team Udayavani, Apr 1, 2019, 6:30 AM IST
ಕುಂದಾಪುರ/ಸಿದ್ದಾಪುರ: ಜರ್ಮನಿಯ ಮ್ಯೂನಿಚ್‌ನಲ್ಲಿ ದುಷ್ಕರ್ಮಿಯಿಂದ ಕೊಲೆಯಾದ ಪ್ರಶಾಂತ್ ಬಸ್ರೂರು ಅವರ ಹತ್ಯೆಗೆ ಕಾರಣ ಇನ್ನೂ ನಿಗೂಢವಾಗಿದೆ.
ಜರ್ಮನಿಯ ಮಾಧ್ಯಮಗಳಲ್ಲಿ ಕೂಡ ಈ ಕುರಿತು ವರದಿ ಪ್ರಕಟವಾಗಿದ್ದು ಜರ್ಮನರ ಪಾಲಿಗೆ ಪವಿತ್ರ ಶುಕ್ರವಾರ ಎಂದು ಪರಿಗಣಿಸಲ್ಪಟ್ಟ ದಿನ ಮುಂಜಾನೆ 7.15ರ ಸುಮಾರಿಗೆ ನಡೆದ ಈ ಘಟನೆ ಕುರಿತು ದಿಗ್ಭ್ರಮೆ ವ್ಯಕ್ತವಾಗಿದೆ. 33 ವರ್ಷದ ಪಶ್ಚಿಮ ಆಫ್ರಿಕಾ ಮೂಲದ ಆರೋಪಿ ಯುವಕ ಪ್ರಶಾಂತ್ -ಸ್ಮಿತಾ ದಂಪತಿ ಮೇಲೆ ಅಡುಗೆ ಚಾಕುವಿನಿಂದ ಹಲವಾರು ಬಾರಿ ಇರಿದಿದ್ದ. ಈ ಮೂವರೂ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ಅನೇಕ ವರ್ಷಗಳಿಂದ ವಾಸವಿದ್ದರು. ಪ್ರಶಾಂತ್ ದಂಪತಿ ಯಾರ ತಂಟೆಗೂ ಹೋದವರಲ್ಲ. ಅಪಾರ್ಟ್‌ಮೆಂಟ್‌ನ ಎಲ್ಲರೂ ಅವರ ಕುರಿತು ಸದಭಿಪ್ರಾಯವನ್ನೇ ಹೊಂದಿದ್ದಾರೆ. ಆದರೂ ಆರೋಪಿಗೆ ಇವರೊಂದಿಗೆ ಏನು ಮನಸ್ತಾಪ ಇತ್ತು ಎನ್ನುವುದು ಯಾರಿಗೂ ಗೊತ್ತಿಲ್ಲ.
ತತ್‌ಕ್ಷಣ ಪೊಲೀಸ್‌ಗೆ ಮಾಹಿತಿ
ಆತ ಮೊದಲು ಸ್ಮಿತಾ ಮೇಲೆ ಹಲ್ಲೆ ಮಾಡಿದ. ಅನಂತರ ಪ್ರಶಾಂತ್ ಅವರ ಮೇಲೂ ಹಲ್ಲೆಗೈದು ಮೊದಲೇ ಸಿದ್ಧಪಡಿಸಿ ಇಟ್ಟುಕೊಂಡಿದ್ದ ಅಡುಗೆ ಚಾಕುವಿನಿಂದ ಇಬ್ಬರಿಗೂ ಹಲವಾರು ಬಾರಿ ಇರಿದ. ನೆಲದಲ್ಲಿ ಬಿದ್ದ ಪ್ರಶಾಂತ್ ಅವರ ತಲೆಬದಿಯೇ ಚಾಕುವನ್ನು ಎಸೆದಿದ್ದ. ಅಪಾರ್ಟ್‌ಮೆಂಟ್‌ನ ಮೇಲಿನ ಮಹಡಿಯಲ್ಲಿದ್ದವರಿಗೆ ಆರೋಪಿಯ ಕೃತ್ಯ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅವರು ತತ್‌ಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಗಂಭೀರ ಗಾಯಗೊಂಡವರನ್ನು ಆ್ಯಂಬುಲೆನ್ಸ್ ಮೂಲಕ ಆಕ್ಸ್‌ಬರ್ಗ್ ವಿಶ್ವವಿದ್ಯಾಲಯ ಆಸ್ಪತ್ರೆಗೆ ಕೊಂಡೊಯ್ಯಲಾಯತು. ಅಲ್ಲಿ ಪ್ರಶಾಂತ್ ಅಪರಾಹ್ನ ಬಳಿಕ ಮೃತಪಟ್ಟರೆ ಸ್ಮಿತಾ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಲ್ಲಿನ ಪೊಲೀಸರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಜರ್ಮನಿಗೆ ತೆರಳಲು ಸಿದ್ಧತೆ
ಜರ್ಮನಿಯಲ್ಲಿ ಹತ್ಯೆಗೀಡಾಗಿರುವ ಪ್ರಶಾಂತ ಬಸ್ರೂರು ಅವರ ಹಲ್ಲೆಗೊಳಗಾಗಿರುವ ಪತ್ನಿ ಸ್ಮಿತಾ ಬಸ್ರೂರು ಅವರ ಮನೆಯವರು ಜರ್ಮನಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಜರ್ಮನ್ ದೇಶದ ಕಾನೂನಿನ ಅನುಸಾರ ತೀರ್ಮಾನ ಕೈಗೊಳ್ಳ ಬೇಕಾಗಿರುವುದರಿಂದ ಅಲ್ಲಿನ ಭಾರತೀಯ ರಾಯಭಾರ ಕಚೇರಿಯಿಂದ ಬರುವ ಸಂದೇಶಕ್ಕಾಗಿ ದಂಪತಿಯ ಸಂಬಂಧಿಕರು ಕಾಯುತ್ತಿದ್ದಾರೆ.
ಈಗಾಗಲೇ ಸ್ಮಿತಾ ಅವರ ತಂದೆ ಡಾ| ಚಂದ್ರಮೌಳಿ, ತಾಯಿ ವಿದ್ಯಾದಾಯಿನಿ, ಸಹೋದರ ಸುಜಯ್ ಹಾಗೂ ಅವರ ಪತ್ನಿ ರವಿವಾರ ಸಿದ್ದಾಪುರದಿಂದ ಬೆಂಗಳೂರಿಗೆ ತೆರಳಿದ್ದು, ಕೇಂದ್ರ ವಿದೇಶಾಂಗ ಇಲಾಖೆಯ ಅಧಿಕೃತ ಸೂಚನೆಗಾಗಿ ಕಾಯುತ್ತಿದ್ದಾರೆ. ರಾಯಭಾರ ಕಚೇರಿಯಿಂದ ಸಂದೇಶ ಬಂದ ಬಳಿಕ ಜರ್ಮನಿಗೆ ಯಾರು ತೆರಳಬೇಕು ಎನ್ನುವ ನಿರ್ಧಾರ ಕೈಗೊಳ್ಳಲಿದ್ದಾರೆ. ಮೂಲಗಳ ಪ್ರಕಾರ ಸ್ಮಿತಾ ತಂದೆ ಹಾಗೂ ತಾಯಿ ಜರ್ಮನಿಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.
ಬಂಧುಗಳಿಂದ ಸಾಂತ್ವನ
ಸಿದ್ದಾಪುರದಲ್ಲಿ ಬಹಳಷ್ಟು ವರ್ಷಗಳಿಂದ ಆಯುರ್ವೇದ ವೈದ್ಯರಾಗಿರುವ ಚಂದ್ರಮೌಳಿ ಅವರ ಮನೆಗೆ ರವಿವಾರವೂ ಬಂಧುಗಳು, ಸಂಬಂಧಿಕರು, ಸ್ನೇಹಿತರು ಬಂದು ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ಬಳಿಕ ಮನೆಯವರೆಲ್ಲ ಬೆಂಗಳೂರಿಗೆ ತೆರಳಿದ್ದು, ಸಿದ್ದಾಪುರದ ಮನೆ ಪರಿಸರದಲ್ಲಿ ನೀರವ ಮೌನ ಆವರಿಸಿದೆ.
ಇನ್ನು ದಿ| ವೆಂಕಟರಮಣ ಅವರ ಪುತ್ರ ಪ್ರಶಾಂತ ಬಸ್ರೂರು ಅವರ ಕುಂದಾಪುರದ ಕುಂದೇಶ್ವರ ದೇವಸ್ಥಾನದ ಹಿಂಬದಿಯಿರುವ ಮನೆಯಲ್ಲಿದ್ದ ಅವರ ತಾಯಿ ವಿನಯಾ (ಬೇಬಿ) ಅವರು ಈಗಾಗಲೇ ಬೆಂಗಳೂರಿಗೆ ತೆರಳಿರುವುದರಿಂದ ಆ ಮನೆಯಲ್ಲಿಯೂ ಪ್ರಸ್ತುತ ಯಾರೂ ಇಲ್ಲ.
ಪ್ರಶಾಂತ ಅವರ ತಾಯಿ ವಿನಯ ಅವರ ಪಾಸ್‌ಪೋರ್ಟ್ ಅವಧಿ ಮುಗಿದಿದ್ದು, ಜರ್ಮನಿಗೆ ತೆರಳಲು ಅನುಕೂಲವಾಗುವಂತೆ ನವೀಕರಣ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಪ್ರಶಾಂತ್ ತಾಯಿ, ಸಹೋದರ ಪ್ರಭಾತ್ ಅವರೂ ಜರ್ಮನಿಗೆ ತೆರಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಸ್ಮಿತಾ ಅವರು 1993-94ರಲ್ಲಿ ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನ ಪ್ರಥಮ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಕಾಲೇಜಿನ “ಪಿಯುಸಿ’ ಎನ್ನುವ ವಾಟ್ಸ್ ಆ್ಯಪ್ ಗ್ರೂಪ್ ಮಾಡಿಕೊಂಡಿದ್ದು, ಪ್ರತಿನಿತ್ಯ ಸಂದೇಶ ಕಳುಹಿಸುತ್ತಿದ್ದರು. ಈ ಘಟನೆಯಿಂದ ಅವರ ಸಹಪಾಠಿಗಳಿಗೆಲ್ಲ ದುಃಖವಾಗಿದೆ. ಅವರು ಆದಷ್ಟು ಬೇಗ ಗುಣಮುಖರಾಗಿ ಸ್ವದೇಶಕ್ಕೆ ಹಿಂದಿರುಗಲಿ. ಭಾರತ ಸರಕಾರ ಕೂಡ ಅವರನ್ನು ಆದಷ್ಟು ಬೇಗ ಸ್ವದೇಶಕ್ಕೆ ಕರೆತರುವಂತಾಗಲಿ.
– ರವೀಂದ್ರ ಆಚಾರ್ಯ ಕುಂದಾಪುರ, ಪಿಯುಸಿ ಸಹಪಾಠಿ, ಭಂಡಾರ್‌ಕಾರ್ ಕಾಲೇಜು
ಕೊಲೆ ಆರೋಪಿ ಸೆರೆ; 20 ಅಧಿಕಾರಿಗಳಿಂದ ತನಿಖೆ
ಆರೋಪಿಯನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ. 20 ಅಧಿಕಾರಿಗಳು ತನಿಖೆಗೆ ನಿಯೋಜನೆಗೊಂಡಿದ್ದಾರೆ. ಚೂರಿ ಹಾಕುವ ಸಂದರ್ಭ
ಆತ ಧರ್ಮ ವೊಂದರ ಶಬ್ದಗಳನ್ನು ಹೇಳಿದ್ದರೂ ಬಂಧಿತನಿಗೂ ಆ ವಾಕ್ಯಕ್ಕೂ
ಸಂಬಂಧವಿಲ್ಲ. ಗೊಂದಲ ಮೂಡಿಸುವ ಸಲುವಾಗಿ ಇದನ್ನು ಹೇಳಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಕೊಲೆಗೆೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ. ಮಕ್ಕಳಿಬ್ಬರನ್ನೂ ಅಲ್ಲಿನ ಇಲಾಖೆ ರಕ್ಷಿಸುತ್ತಿದೆ. 2017ರಿಂದ ಈ ಭಾಗದಲ್ಲಿ ಪಶ್ಚಿಮ ಆಫ್ರಿಕಾದವರಿಂದ ಇಂತಹ ಘಟನೆಗಳು ಆಗಾಗ ನಡೆಯುತ್ತಿವೆ ಎನ್ನಲಾಗಿದೆ.
“ತಾಯಿಗಾದರೂ ಮುಖ ತೋರಿಸಲು ವ್ಯವಸ್ಥೆ ಮಾಡಿ’
ಉಡುಪಿ: “ನಮ್ಮ ತಾಯಿ ಮಗನ ಮುಖ ನೋಡಬೇಕೆಂದು ಅಳುತ್ತಿದ್ದಾರೆ. ಅವರು ಜರ್ಮನಿಗೆ ಹೋಗಲು ಸಿದ್ಧರಿದ್ದಾರೆ. ಅವರಿಗೆ ಒಮ್ಮೆ ಮಗನ ಮುಖ ತೋರಿಸಲು ವ್ಯವಸ್ಥೆ ಮಾಡಿ’ ಎಂದು ಜರ್ಮನಿಯಲ್ಲಿ ಚೂರಿ ಇರಿತದಿಂದ ಹತ್ಯೆಗೀಡಾದ ಪ್ರಶಾಂತ್ ಅವರ ಅಕ್ಕ ಸಾಧನಾ ಮನವಿ ಮಾಡಿದ್ದಾರೆ.
ಉಡುಪಿಯ ಅಂಬಲಪಾಡಿ ಯಲ್ಲಿರುವ ತನ್ನ ಮನೆಯಲ್ಲಿ ರವಿವಾರ
ದುಃಖತಪ್ತರಾಗಿದ್ದ ಸಾಧನಾ, ಪತಿ ಶ್ರೀನಿವಾಸ್ ಹಾಗೂ ಸಂಬಂಧಿಕರು “ಮೊದಲು ಪ್ರಶಾಂತ್‌ನ ತಾಯಿಗೆ ಅಲ್ಲಿಗೆ ಹೋಗಲು ವ್ಯವಸ್ಥೆಯಾಗಬೇಕು. ಬಳಿಕ ಪ್ರಶಾಂತ್‌ನ ಮೃತದೇಹವನ್ನು ಊರಿಗೆ ತರುವ ವ್ಯವಸ್ಥೆಯೂ ಆಗಬೇಕು’ ಎಂದು ಮಾಧ್ಯಮದ ಎದುರು ಕೋರಿಕೊಂಡರು.
ಶಾಂತ ಸ್ವಭಾವ, ದೈವ ಭಕ್ತ
“ಪ್ರಶಾಂತ ತುಂಬಾ ಶಾಂತ ಸ್ವಭಾವದವ. ಊರಿಗೆ ಬಂದಾಗಲೆಲ್ಲಾ ನಮ್ಮ ಮನೆಯಲ್ಲಿಯೇ ಕುಟುಂಬ ಸಮೇತ ಹಲವು ದಿನಗಳ ಕಾಲ ಇರುತ್ತಿದ್ದ. ಇಲ್ಲಿ ಪೂಜೆ, ದೇವಸ್ಥಾನಗಳ ದರ್ಶನದಲ್ಲೇ ಕಾಲ ಕಳೆಯುತ್ತಿದ್ದ. ಅನೇಕ ದೇವಸ್ಥಾನಗಳಿಗೆ ದೇಣಿಗೆ ನೀಡಿದ್ದಾನೆ. ಪ್ರತೀ ತಿಂಗಳು ಪ್ರಸಾದ ಕೂಡ ಬರುತ್ತಿದೆ. ಅವನಿಗೆ ಏನಾಯಿತು? ಏಕೆ ಹೀಗಾಯಿತು? ಎಂಬುದು ತಿಳಿಯಬೇಕು. ನಮಗೆ ಸತ್ಯ ತಿಳಿಯಬೇಕು. ಸರಿಯಾದ ತನಿಖೆಯಾಗಬೇಕು’ ಎಂದು ಸಾಧನಾ ಮತ್ತು ಶ್ರೀನಿವಾಸ ಹೇಳಿದರು.
ಶನಿವಾರ ಕೊನೆಯ ಕರೆ
ಅಮ್ಮನಿಗೆ ಮೊನ್ನೆ ಶನಿವಾರ (ಮಾ. 23) ಪ್ರಶಾಂತ ಕರೆ ಮಾಡಿದ್ದ. ಅದೇ ಕೊನೆಯ ಕರೆ. ಎಪ್ರಿಲ್‌ನಲ್ಲಿ ರಜೆ ಸಿಕ್ಕಿದ ಕೂಡಲೇ ಊರಿಗೆ ಬರಲು ತೀರ್ಮಾನಿಸಿದ್ದ ಎಂದು ಸಾಧನಾ ಗದ್ಗದಿತರಾದರು. ಮೂವರು ಮಕ್ಕಳಲ್ಲಿ ಸಾಧನಾ ದೊಡ್ಡವರು. ಪ್ರಶಾಂತ್ ಕೊನೆಯವರು. ಪ್ರಶಾಂತ್ ಅಣ್ಣ ಪ್ರಭಾತ್ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಅಮ್ಮ ಫಿಟ್ ಇದ್ದಾರೆ
ಅಮ್ಮ (ವಿನಯಾ ವೆಂಕಟರಾಮ್) 7 ವರ್ಷಗಳ ಹಿಂದೆ ಜರ್ಮನಿಗೆ ಮಗನಲ್ಲಿಗೆ
ಹೋಗಿ ಬಂದಿದ್ದಾರೆ. ಆದರೆ ಈಗ ಮಗನ ಮುಖ ನೋಡಲೇಬೇಕೆಂದು ಅಳುತ್ತಿದ್ದಾರೆ. ಅವರಿಗೆ 73 ವರ್ಷ ವಯಸ್ಸಾದರೂ ಕೂಡ ಅಲ್ಲಿಗೆ ಹೋಗಲು ಶಕ್ತರಿದ್ದಾರೆ. ವಯಸ್ಸು ಅಡ್ಡಿಯಾಗದು ಎಂದರು ಸಾಧನಾ.
ಪ್ರಶಾಂತ್ ಜರ್ಮನಿಗೆ ತೆರಳಿ ಆರಂಭದ 10 ವರ್ಷಗಳ ಕಾಲ ಸತ್ಯಂ ಕಂಪ್ಯೂಟರ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಅಲ್ಲಿಯೇ ಉನ್ನತ ತಾಂತ್ರಿಕ ಶಿಕ್ಷಣ ಪಡೆದು ಜರ್ಮನಿ ಕಂಪೆನಿಯಲ್ಲಿ ಉದ್ಯೋಗ ಪಡೆದಿದ್ದರು. ಕಳೆದ ಒಂದು ವರ್ಷದಿಂದ ಪತ್ನಿ ಸ್ಮಿತಾ ಕೂಡ ನೌಕರಿ ಮಾಡುತ್ತಿದ್ದರು.
ಸ್ವಂತ ಮನೆಯ ಕನಸು
ಜರ್ಮನಿಯಲ್ಲಿ ಸ್ವಂತ ಮನೆ ಕಟ್ಟಿ ಒಮ್ಮೆ ತಾಯಿಯನ್ನು ಕರೆದುಕೊಂಡು ಹೋಗಲು ಪ್ರಶಾಂತ್ ಇಚ್ಛಿಸಿದ್ದರು. 2013ರಲ್ಲಿ ಪ್ರಶಾಂತ್ ಕುಂದೇಶ್ವರದಲ್ಲಿ ಅಮ್ಮನಿಗಾಗಿ ಮನೆ ಕಟ್ಟಿ ಕೊಟ್ಟಿದ್ದಾರೆ ಎಂದು ಶ್ರೀನಿವಾಸ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ಭೇಟಿ
Kundapura: ಬಾವಿಗೆ ಬಿದ್ದು ಯುವತಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.