ಸ್ವರ್ಣೆ ತಟದಲ್ಲಿ ‘ನಾನು ಸನ್ಯಾಸಿಯಾಗಲು ಹೊರಟಿದ್ದೆ’ ಪುಸ್ತಕ ಬಿಡುಗಡೆ
Team Udayavani, Dec 24, 2018, 1:30 AM IST
ಕಾರ್ಕಳ: ಉಡುಪಿ ಎಂ.ಜಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ್ ಕಾಮತ್ ಅವರ ನಾನು ಸನ್ಯಾಸಿಯಾಗಲು ಹೊರಟಿದ್ದೆ ಪುಸ್ತಕ ಡಿ. 22ರಂದು ಸಂಜೆ ತಾಲೂಕಿನ ಬಜಗೋಳಿ ಸಮೀಪದ ಕಡಾರಿಯ ಸ್ವರ್ಣ ನದಿ ತಟದಲ್ಲಿ ವಿಭಿನ್ನ ರೀತಿಯಲ್ಲಿ ಬಿಡುಗಡೆಗೊಂಡಿತು. ಒಂದೂವರೆ ಸಾವಿರ ಹಣತೆಗಳ ಬೆಳಕು, ನಾದ ಮಣಿ ನಾಲ್ಕೂರು ಅವರ ಕತ್ತಲ ಹಾಡು ಹಾಗೂ ಇಬ್ಬರು ಮಂಗಳಮುಖೀಯರಾದ ನಗ್ಮಾ ಹಾಗೂ ಕಾಜಲ್ ಸ್ವರ್ಣ ನದಿಗೆ ಆರತಿ ಬೆಳಗುವುದರೊಂದಿಗೆ ಪುಸ್ತಕ ಬಿಡುಗಡೆ ಮಾಡಲಾಯಿತು.
ಉದ್ಯಮಿ ವಿಶ್ವನಾಥ ಶೆಣೈ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಇದೊಂದು ವಿಚಿತ್ರ, ವಿಭಿನ್ನವಾದ ಕಾರ್ಯಕ್ರಮ. ಪುಸ್ತಕ ಬಿಡುಗಡೆ ಈ ರೀತಿಯಾಗಿ ಎಲ್ಲಿಯೂ ಆಗಿರಲಿಕ್ಕಿಲ್ಲ. ಸಾವಿರಾರು ದೀಪಗಳ ನಡುವೆ ಪುಸ್ತಕ ಬಿಡುಗಡೆಯಾಗುತ್ತಿರುವುದು ಇದೊಂದು ಸಂಭ್ರಮ ಎಂದು ಹೇಳಿದರು.
ಲೇಖಕ ಮಂಜುನಾಥ ಕಾಮತ್ ಮಾತನಾಡಿ, ಪ್ರಸ್ತುತ ನಮಗೆ ನೀರು, ನದಿ ತುಂಬಾ ಮುಖ್ಯ. ಇಲ್ಲಿನ ನದಿಯ ಬಗ್ಗೆ ಪ್ರೀತಿ, ಕಾಳಜಿ ಮೂಡಬೇಕು. ನದಿಯನ್ನು ಹೆಣ್ಣು ಅಂತ ನಾವು ಆರಾಧಿಸುತ್ತೇವೆ. ಕಾಶಿಗೆ ತೆರಳಿದಾಗ ಅಲ್ಲಿ ಕೆಲವು ಸಂದರ್ಭ ಲಕ್ಷಗಟ್ಟಲೆ ಹಣತೆ ಬೆಳಗಿಸಿ ಗಂಗೆಗೆ ಆರತಿ ಬೆಳಗಿಸುವ ಬಗ್ಗೆ ಕೇಳಿ, ಗಮನಿಸಿದ್ದೆ. ಆದರೆ ಅದು ನನಗೆ ನೋಡಲು ಸಾಧ್ಯವಾಗಿಲ್ಲ. ನಮ್ಮೂರಲ್ಲೇ ಅಂತಹ ಕಾರ್ಯಕ್ರಮ ಮಾಡಬೇಕೆಂದು ಯೋಚಿಸಿ, ಆ ರೀತಿ ಪುಸ್ತಕ ಬಿಡುಗಡೆ ಮಾಡಲು ನಿರ್ಧರಿಸಿದ್ದೇನೆ ಎಂದರು. ಆಕೃತಿ ಪಬ್ಲಿಕೇಶನ್‌ನ ಕಲ್ಲೂರು ನಾಗೇಶ್ ಪ್ರಸ್ತಾವನೆಗೈದು, ನಿರೂಪಿಸಿದರು. ನೂರಾರು ಮಂದಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.