Udupi ಜನವರಿಯಲ್ಲಿ “ನಾರೀ ಶಕ್ತಿ ಪ್ರಸಂಗ ಲೋಕಾರ್ಪಣೆ
Team Udayavani, Nov 2, 2023, 12:26 AM IST
ಉಡುಪಿ: 1947-48ರ ಸ್ವರಾಜ್ಯ ವಿಜಯ, ಹೈದರಾಬಾದ್ ವಿಜಯ, 2023ರ ಕಾಶ್ಮೀರ ವಿಜಯದಂತಹ ಐತಿಹಾಸಿಕ ರಾಷ್ಟ್ರ ಪ್ರಜ್ಞೆ ಯ ಪ್ರಸಂಗಗಳನ್ನು ಪ್ರಸ್ತುತಪಡಿಸಿದ ಉಡುಪಿಯ ಸುಶಾಸನ “ನಾರೀ ಶಕ್ತಿ-ಮಾನಿನಿ ಮನ್ವಂತರ’ ಎಂಬ ವಿನೂತನ ಪ್ರಾಯೋಗಿಕ ಯಕ್ಷಗಾನ ಪ್ರಸಂಗದ ತಾಳಮದ್ದಳೆ 2024 ಜನವರಿಯಲ್ಲಿ ಉಡುಪಿಯಲ್ಲಿ ಲೋಕಾರ್ಪಣೆಯಾಗಲಿದೆ.
ಸ್ವಾತಂತ್ರ್ಯೋತ್ಸವದ ತಾಳಮದ್ದಳೆಯ ರೂವಾರಿ ಉಡುಪಿಯ ಸುಧಾಕರ ಆಚಾರ್ಯರ ಸಂಕಲ್ಪದಂತೆ ಪ್ರಸಿದ್ಧ ಪ್ರಸಂಗಕರ್ತ ತಾಳಮದ್ದಳೆ ಅರ್ಥಧಾರಿ ಪ್ರೊ| ಪವನ್ ಕಿರಣಕೆರೆ ಪರಿಕಲ್ಪನೆಯಲ್ಲಿ ಈ ಪ್ರಸಂಗ ಮೂಡಿ ಬರಲಿದೆ. ನವರಾತ್ರಿಯಂದು ಶ್ರೀಕ್ಷೇತ್ರ ಕಟೀಲಿನಲ್ಲಿ ಶ್ರೀ ಶೀರೂರು ಶ್ರೀಪಾದರು, ಅರ್ಚಕರಾದ ಆಸ್ರಣ್ಣರು, ನವ ಕನ್ನಿಕಾ ಮುತ್ತೈದೆಯರ ಉಪಸ್ಥಿತಿಯಲ್ಲಿ ವೀಳ್ಯ ಪ್ರದಾನ ಪೂರೈಸಿ, ಪ್ರಸಂಗ ರಚನೆಗೆ ಸಿದ್ಧತೆ ನಡೆಸಿದೆ.
ಭಾರತೀಯ ಸಂಸ್ಕೃತಿ ಹೆಣ್ಣಿಗೆ ನೀಡಿದ ಸ್ಥಾನಮಾನ, ಐತಿಹಾಸಿಕ ಸ್ಥಿತ್ಯಂತರಗಳು, ಪ್ರಸ್ತುತ ಸಮಾಜದಲ್ಲಿನ ಸ್ತ್ರೀ ಸಂವೇದನೆ, ಸ್ತ್ರೀ ಶಕ್ತಿಯ ಪ್ರಾಬಲ್ಯದ ಅನಾವರಣವೇ ಮುಂತಾದ ಮಹತ್ವಪೂರ್ಣ ವಿಷಯಗಳ ನೆಲೆಗಟ್ಟಿನಲ್ಲಿ ಸಿದ್ಧವಾಗಲಿರುವ ನಾರೀ ಶಕ್ತಿ ಪ್ರಸಂಗವು ಈಗಾಗಲೇ ಚಾಲ್ತಿಯಲ್ಲಿರುವ ಪೌರಾಣಿಕ ಪ್ರಸಂಗಗಳಿಗಿಂತ ಭಿನ್ನವಾಗಿದ್ದು ಪುರಾಣ ಪಾತ್ರಗಳ ಜತೆಗೆ ಇತಿಹಾಸವನ್ನು ಮಥಿಸಿ ಪ್ರಸ್ತುತ ಸಮಾಜಕ್ಕೊಂದು ಸಂದೇಶ ನೀಡುವ ಉದ್ದೇಶ ಇರಿಸಿಕೊಂಡಿದೆ ಎಂದು ಪ್ರಸಂಗಕರ್ತರು ತಿಳಿಸಿದ್ದಾರೆ.
ಸುಶಾಸನ ಉಡುಪಿ
ಸಮಾಜಮುಖಿ ಕಾರ್ಯಕ್ರಮ ಗಳನ್ನು ಸಂಘಟಿಸುವ ಮುನ್ನೋಟವನ್ನು ಇರಿಸಿಕೊಂಡು ಹುಟ್ಟಿದ ಉಡುಪಿಯ “ಸುಶಾಸನ’ ಸತ್ವಪೂರ್ಣ ಸಂದೇಶಗಳಿಂದ ಸಮಾಜವನ್ನು ನೇರ್ಪುಗೊಳಿಸಲು ವಾš¾ಯ ಲೋಕದ ಪ್ರಬಲ ಹಾಗೂ ಪರಿಣಾಮಕಾರಿ ಕಲಾಮಾಧ್ಯಮವಾದ ತಾಳಮದ್ದಳೆಯನ್ನು ಆಯ್ದುಕೊಂಡಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರಸ್ತುತಗೊಂಡ ಪ್ರೊ| ಕಿರಣಕೆರೆ ಪರಿಕಲ್ಪಿತ ಕಾಶ್ಮೀರ ವಿಜಯದ ಯಶಸ್ಸೇ ನಾರೀ ಶಕ್ತಿಯ ಸಂಕಲ್ಪಕ್ಕೆ ಕಾರಣವಾಯಿತು ಎಂದು ಸಂಯೋಜಕ ಸುಧಾಕರ ಆಚಾರ್ಯ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.