ನಾಡ ದೋಣಿಯವರಿಂದ ಉಪನಿರ್ದೇಶಕ ಕಚೇರಿಗೆ ಮುತ್ತಿಗೆ
ಟ್ರಾಲ್ ಬೋಟ್ ಕಾನೂನು ವಿರುದ್ಧ ಮೀನುಗಾರಿಗೆ
Team Udayavani, Oct 5, 2019, 5:47 AM IST
ಮಲ್ಪೆ: ರಾಜ್ಯ ಮತ್ತು ಕೇಂದ್ರ ಸರಕಾರ ಅವೈಜ್ಞಾನಿಕ ಮೀನುಗಾರಿಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರೂ ಮಲ್ಪೆ ತ್ರಿಸೆವೆಂಟಿ ಟ್ರಾಲ್‌ದೋಣಿ ಮೀನುಗಾರರು ಕಾನೂನಿಗೆ ವಿರುದ್ಧವಾಗಿ ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದರೆ. ತತ್‌ಕ್ಷಣ ಅದನ್ನು ನಿಲ್ಲಿಸಿ ಇಂತವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಮಲ್ಪೆ ಬೇಸಗೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಶುಕ್ರವಾರ ಮಲ್ಪೆ ಮೀನುಗಾರಿಕಾ ಉಪನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿದರು.
ಮಲ್ಪೆ ಬೇಸಗೆ ನಾಡದೋಣಿ ಮೀನುಗಾರ ಸಂಘದ ಅಧ್ಯಕ್ಷ ಚಂದ್ರಕಾಂತ್ ಕರ್ಕೇರ ಮಾತನಾಡಿ ಗುರುವಾರ ಸಮುದ್ರ ತೀರ ಪ್ರದೇಶದಲ್ಲಿ ಎರಡು ತ್ರಿಸೆವೆಂಟಿ ಟ್ರಾಲ್‌ಬೋಟ್ ಅಕ್ರಮವಾಗಿ ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತ್ತಿರುವಲ್ಲಿಗೆ ಮೀನಗಾರಿಕೆ ಇಲಾಖಾಧಿಕಾರಿ, ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಸೀ³ಡ್ ಬೋಟಿನ ಮೂಲಕ ಸಮುದ್ರದಲ್ಲಿ ಕಾರ್ಯಚರಣೆ ನಡೆಸಿ ಪತ್ತೆ ಹಚ್ಚಿದ್ದರೂ ಅವರ ವಿರುದ್ಧ ಇದುವರೆಗೂ ಯಾವುದೇ ಕಾನೂನು ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ. ಬುಲ್‌ಟ್ರಾಲ್ ಮೀನುಗಾರಿಕೆ ನಡೆಯುತ್ತಿರುವುದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಶಾಸಕರು, ಮೀನುಗಾರಿಕೆ ಸಚಿವರಲ್ಲಿಯೂ ಮನವಿಯನ್ನು ಮಾಡಲಾಗಿತ್ತು. ಅವರು ಕ್ರಮ ತೆಗೆದುಕೊಳ್ಳುವ ಬಗ್ಗೆ ಭರವಸೆಯನ್ನು ನೀಡಿದ್ದರು. ಆದರೂ ನಿರಂತರವಾಗಿ ಬುಲ್‌ಟ್ರಾಲ್ ಮೀನುಗಾರಿಕೆ ನಡೆಯುತ್ತಾ ಇದೆ ಎಂದರು.
ಗಮನಕ್ಕೆ ಬಂದಿದೆ
ಮಲ್ಪೆಯಲ್ಲಿ ಬುಲ್‌ಟ್ರಾಲ್ ಮೀನುಗಾರಿಕೆ ಮಾಡುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ದಾಳಿ ನಡೆಸಿದ ವೇಳೆ ಎರಡು ಬೋಟಿನಲ್ಲಿ ಒಂದು ತಿರುಮಲ ಎಂದು ತಿಳಿದು ಬಂದಿದೆ. ಇನ್ನೊಂದು ಕತ್ತಲಲ್ಲಿ ನಾಪತ್ತೆಯಾಗಿದೆ. ಅಕ್ರಮ ಮೀನುಗಾರಿಕೆ ನಡೆಸಿರುವ ಬೋಟುಗಳಿಗೆ ನೋಟಿಸು ನೀಡಿ ಮುಂದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತೇ¤ವೆ.
-ಗಣೇಶ್ ಕೆ., ಉಪ ನಿರ್ದೇಶಕರು
ಮೀನುಗಾರಿಕೆ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.