ಸ್ವಚ್ಚ ನಾಗರಪಂಚಮಿ ಅಭಿಯಾನಕ್ಕೆ ಮುಂದಾಗೋಣ
Team Udayavani, Aug 14, 2018, 6:00 AM IST
ಪೂಜಾ ಸ್ಥಾನದ ಅಧಿಕಾರಕ್ಕಿಂತ ಪರಿಸರ ಕಾಳಜಿ, ಸ್ವಚ್ಚತಾ ಅಭಿಯಾನದಂತಹ ಕಣ್ಣಿಗೆ ಕಾಣದ ಸಣ್ಣ ಸಣ್ಣ ಕೊಡುಗೆಗಳು ವಿಶ್ವಶಕ್ತಿಯ ದೃಷ್ಟಿಯಲ್ಲಿ ಬಹಳ ಮುಖ್ಯ.
ಉಡುಪಿ: ಕಳೆದ ಕೆಲವು ವರ್ಷಗಳಿಂದ ಎಲ್ಲೆಲ್ಲೂ ಸ್ವಚ್ಚ ಭಾರತದ ಸದ್ದು ಕೇಳಿಸುತ್ತಿದೆ. ಎಲ್ಲೆಲ್ಲೂ ಕಲ್ಮಶ ತುಂಬಿಕೊಂಡು ಪರಿಸ್ಥಿತಿ ಬಿಗಡಾಯಿಸುತ್ತಿದೆ ಎನ್ನುವಾಗ ಸ್ವಚ್ಚತೆಯ ಅರಿವಾಯಿತು. 40-50 ವರ್ಷಗಳ ಹಿಂದೆ ಬಡತನವಿದ್ದಿರಬಹುದು, ಇಷ್ಟು ನಾಗಮಂಡಲ, ಬ್ರಹ್ಮಕಲಶೋತ್ಸವಗಳು ನಡೆಯದೆ ಇದ್ದಿರಬಹುದು, ಆದರೆ ಇಷ್ಟು ಪರಿಸರ ಮಾಲಿನ್ಯವೂ ನಡೆದಿರಲಿಲ್ಲ.
ಹಬ್ಬಗಳ ಸಾಲಿನಲ್ಲಿ ಆರಂಭಗೊಳ್ಳುವ ನಾಗರಪಂಚಮಿ ದಿನವೇ ಸ್ವಾತಂತ್ರ್ಯೋತ್ಸವವೂ ಬಂದಿದ್ದು ಇದೇ ದಿನ (ಆ. 15) ನಾವು ಸ್ವತ್ಛತೆ ಕಾಪಾಡಲು ಪಣ ತೊಡಬೇಕಾದ ಸ್ಥಿತಿ ಬಂದೊದಗಿದೆ. ವಾಸ್ತವದಲ್ಲಿ ನಾಗನಕಟ್ಟೆ ಪ್ರಕೃತಿಯ ಮಡಿಲಲ್ಲಿ ಇದ್ದ ಕಾರಣ ಇಲ್ಲಿ ಸ್ವಚ್ಚತೆಯ ಅಗತ್ಯ ಇರಲಿಲ್ಲ. ಈಗ ಹಾಗಲ್ಲ, ನಾಗನಕಟ್ಟೆಯೂ ಕಾಂಕ್ರೀಟ್ ಕಟ್ಟೆಯಾಗಿ ಭಕ್ತರೂ, ಆಡಳಿತೆದಾರರು, ಅರ್ಚಕರೂ ಒಂದೇ ಕಡೆಗೆ ಓಡುತ್ತಿದ್ದಾರೆ. ಈಗಿನ ಅರ್ತ್ ಡೇ, ಪರಿಸರ ದಿನ, ವನಮಹೋತ್ಸವ ಸಪ್ತಾಹ ಇತ್ಯಾದಿ ಶಬ್ದಗಳ ಭಂಡಾರಕ್ಕೆ ಮುನ್ನವೇ ನಾಗರಪಂಚಮಿಯಂತಹ ಹಬ್ಬಗಳ ಮೂಲಕ ನಾವು ಪರಿಸರ ದಿನಾಚರಣೆ ಮಾಡುತ್ತಿದ್ದೆವು, ನಾವದನ್ನು ಮರೆತೆವು.
ಇಲ್ಲಿರುವ ಚಿತ್ರವನ್ನು ನೋಡಿ. ಶಿರ್ವದ ನಡಿಬೆಟ್ಟಿನ ನಾಗನ ಕಟ್ಟೆಯ ದೃಶ್ಯವಿದು. ಇಲ್ಲಿ ಗಿಡಮರಗಳನ್ನು ಹಾಗೇ ಉಳಿಸಿಕೊಂಡು ಧಾರ್ಮಿಕ ಆಚರಣೆಯನ್ನು ಮುಂದುವರಿಸುತ್ತಿದ್ದಾರೆ.
ನಿಜ ನಾಗನ ಉಳಿವಿಗೆ ನಾವೇನು ಮಾಡಬಹುದು?
– ಈಗ ಅಳಿದುಳಿದ ನಾಗನ ಬನಗಳನ್ನು ಕೆಡಿಸದೆ ಉಳಿಸಿಕೊಂಡು ಬರುವುದು ನಿಜ ನಾಗನಿಗೂ, ಮಾನವಪ್ರಪಂಚಕ್ಕೂ ಅತೀ ಅಗತ್ಯ.
– ಈಗಾಗಲೇ ಕೆಡಿಸಿಟ್ಟ ನಾಗನಬನಗಳ ಸುತ್ತ ರೆಂಜ, ಸುರಿಗೆಯಂತಹ ಗಿಡಮರಗಳನ್ನು ಬೆಳೆಸುವುದು ಮುಂದಿನ ನಾಗನ ಸಂತತಿಗೂ, ಮಾನವ ಸಂತತಿಗೂ ಅತೀ ಅಗತ್ಯ.
– ನಾಗನಕಟ್ಟೆಗೆ ಪೂಜೆಗೆಂದು ಹೋಗುವಾಗ ಸಾಧ್ಯವಾದಷ್ಟು ಪ್ಲಾಸ್ಟಿಕ್ ಸಾಮಗ್ರಿಗಳನ್ನು ಬಿಟ್ಟು ಹೋಗಿ. ಕೆಲವು ಸಾಮಗ್ರಿಗಳನ್ನು ಕಾಗದದಲ್ಲಿ ಕಟ್ಟಬಹುದು, ಕೆಲವು ಸಾಮಗ್ರಿಗಳಿಗೆ ಮನೆಯಲ್ಲಿರುವ ಚೀಲಗಳನ್ನು ಬಳಸಬಹುದು, ಅಗರ್‌ಬತ್ತಿಯಂತಹ ವಸ್ತುಗಳನ್ನು ಕೊಂಡೊಯ್ಯದಿದ್ದರೂ ದೊಡ್ಡ ಉಪಕಾರವೇ.
– ಎಳನೀರು ಚಿಪ್ಪನ್ನು ಒಡೆದು ತೆಂಗಿನ ಕಟ್ಟೆಗೆ ಹಾಕಬಹುದು ಅಥವಾ ಒಣಗಿಸಿ ಉರುವಲಾಗಿ ಬಳಸಬಹುದು. ಇದು ನಾಗರಪಂಚಮಿಗೆ ಮಾತ್ರವಲ್ಲ, ಎಲ್ಲ ಸಂದರ್ಭಗಳಲ್ಲಿಯೂ ಅತಿ ಅಗತ್ಯ. ಇಲ್ಲವಾದರೆ ಸೊಳ್ಳೆ ತನ್ಮೂಲಕ ಮಲೇರಿಯ ಉತ್ಪಾದನ ಕೇಂದ್ರವಾಗುತ್ತದೆ.
– ಇಷ್ಟೆಲ್ಲ ಹೇಳಿದ ಮೇಲೂ ಒಂದಿಷ್ಟು ಜನರಿಂದ ಉಂಟಾಗುವ ತ್ಯಾಜ್ಯಗಳನ್ನು ಸಂಘಟಕರು ಸಂಗ್ರಹಿಸಿ ವಿಲೇವಾರಿ ಮಾಡುವುದು ದೊಡ್ಡ ಪುಣ್ಯದ ಕೆಲಸ, ದೇವರು ಎನ್ನಬಹುದಾದ ಪ್ರಕೃತಿಗೆ ಮಾಡುವ ಪೂಜೆ ಇದು.
– ನಾಗರಪಂಚಮಿ ಮರುದಿನ ನಾಗಸ್ಥಾನದಲ್ಲಿ ಪೂಜೆ ಸಲ್ಲಿಸುವ ಕ್ರಮವಿತ್ತು. ಪ್ರಾಯಃ ಇದು ಹಿಂದಿನ ದಿನದ ತ್ಯಾಜ್ಯ ವಿಲೇವಾರಿಗೆಂದು ನಿರ್ಮಾಣಗೊಂಡ ವ್ಯವಸ್ಥೆಯಾಗಿರಬಹುದು. ಮರುದಿನ ನಾವು ಸ್ವತ್ಛ ನಾಗನಕಟ್ಟೆ ಅಭಿಯಾನವನ್ನು ಕೈಗೊಳ್ಳಬಹುದು.
– ಪ್ರಿವೆನ್ಶನ್ ಈಸ್ ಬೆಟರ್ ದ್ಯಾನ್ ಕ್ಯೂರ್ ಎಂಬ ಗಾದೆಯನ್ನು ಇಲ್ಲಿಗೂ ಅನ್ವಯಿಸುವುದಾದರೆ ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಮುನ್ನ ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡುವುದು ಅಗತ್ಯ.
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.