ದೈವಿಕ ಆರಾಧನೆ,ಪ್ರಾಕೃತಿಕ ಸೊಬಗು ಉಳಿಸಲು ಪ್ರೇರಣೆಯಾಗಲಿ ನಾಗರ ಪಂಚಮಿ
Team Udayavani, Jul 27, 2017, 8:20 AM IST
ಕಾಪು: ನಾಗ ಆರಾಧನಾ ಸ್ಥಾನಗಳೇ ನಾಗಬನ. ಇಂದಿನ ಆಧುನಿಕ ಯುಗದಲ್ಲಿ ಮಾನವನ ಕ್ರೌರ್ಯಕ್ಕೆ ಒಳಗಾಗದ ಪುರಾತನ ನಾಗಬನಗಳಲ್ಲಿ ಸುಮಾರು 50-60 ವೃಕ್ಷ, ಗಿಡ, ಬಳ್ಳಿಗಳ ಪ್ರಬೇಧಗಳು ಮತ್ತು 20-30 ಔಷಧೀಯ ಸಸ್ಯಗಳು ಇರುತ್ತವೆ. ಸಾವಿರಾರು ಪಕ್ಷಿಗಳು, ಕ್ರಿಮಿ ಕೀಟಗಳು, ಸರೀಸೃಪಗಳು ನಿರಾಂತಕವಾಗಿ ಆಶ್ರಯ ಪಡೆದಿರುತ್ತವೆ. ಇಲ್ಲಿ ಪ್ರಕೃತಿ ಸಹಜವಾಗಿ ಪಲ್ಲವಿಸುತ್ತಿರುತ್ತವೆ. ಇದು ವನವಾಗಿರುತ್ತದೆ. ಈ ವನವೇ ನಮ್ಮ ನಾಗದೇವರ ವಾಸಸ್ಥಾನ ನಾಗಬನ.
ಆದರೆ ಇತ್ತೀಚಿನ ದಿನಗಳಲ್ಲಿ ನಾಗಬನಗಳ ಮರಗಳನ್ನು ಕಡಿಯಲಾಗುತ್ತಿದೆ. ಗಿಡ – ಬಳ್ಳಿಗಳನ್ನು ನಾಶ ಮಾಡಲಾಗುತ್ತಿದೆ. ಕಾಂಕ್ರೀಟ್ ಬಳಸಿ ನಾಗ ವೇದಿಕೆಯೋ, ನಾಗ ಗುಡಿಯನೋ, ನಾಗ ಮಂದಿರವನೋ ನಿರ್ಮಿಸಲಾಗುತ್ತಿದೆ. ಈ ಅಸಂಗತವನ್ನು ಜೀರ್ಣೋದ್ಧಾರ ಎಂದು ಹೇಳಲಾಗುತ್ತದೆ. ನಮ್ಮ ನಾಗದೇವರು ತಂಪನ್ನು ಬಯಸುವ, ತಂಪಾದ ಪರಿಸರದಲ್ಲಿ ವಾಸಿಸುವ ಸರೀಸೃಪ ತಾನೇ ? ಆದುದರಿಂದಲೇ ನಾಗನಿಗೆ ತನು ಎರೆಯುತೇ¤ವೆ.ನಾವು ತಂಪೆಂದು ಭಾವಿಸಿರುವ ಹಾಲು, ಸೀಯಾಳ ಎರೆಯುತೇ¤ವೆ. ಈ ತನು ಅರ್ಪಣೆಯ ಕ್ರಮ ಈಗಿನದ್ದಲ್ಲ. ಬಹಳಷ್ಟು ಪುರಾತನವಾದುದು. ಇದು ನಾಗಾರಾಧನೆಯ ಮೂಲ ಮತ್ತು ಆಶಯವೂ ಹೌದು. ಈ ಪ್ರಾಚೀನ ಆಶಯದ ಕುರಿತು ಯಾರು ಮುಗ್ಧ ಭಕ್ತರಿಗೆ ಹೇಳಬೇಕೋ ಅಂತಹವರೇ ಇಂದು ಮೌನಿಗಳಾಗುತ್ತಾರೆ. ಒಂದೋ ಇವರಿಗೆ ಈ ಮೂಲ ತಿಳಿದಿಲ್ಲ ಅಥವಾ ಗೊತ್ತಿದ್ದೂ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
ನಮ್ಮ ಮೂಲ ನಾಗಬನಕ್ಕೆ ವರ್ಷಕ್ಕೆ 2-3 ಬಾರಿ ಹೋಗಿ ಒಂದೆರಡು ಗಂಟೆ ಇದ್ದು ಬರುವ ನಮಗೆ ಆರಾಮಬೇಕು. ಆದರೆ ಅಲ್ಲಿ ದಿನಪೂರ್ತಿ, ವರ್ಷವಿಡೀ ವಾಸಿಸುವ ಅನಿವಾರ್ಯತೆ ಇರುವುದು ನಮ್ಮ ನಾಗನಿಗೆ. ಗಿಡಮರಗಳ ನೆರಳಿಲ್ಲ, ಬಿಸಿಲ ಬೇಗೆ, ಕಾಂಕ್ರೀಟಿನ ಬಿಸಿ. ಹೇಗೆ ತಾನೇ ಅದು ನಾಗ ಸನ್ನಿಧಾನ ಸಾಧ್ಯವಾಗುತ್ತದೆ.
ಈ ಪರಿವರ್ತನೆ ಜೀರ್ಣೋದ್ಧಾರದಿಂದ ಆಗಿದೆ. ನಾವು ಆರ್ಥಿಕವಾಗಿ ಸಬಲರಾಗಿದೇªವೆ. ಆದ್ದರಿಂದ ನಾಗಬನ ನವೀಕರಣಕ್ಕೆ ಅನುವಾಗುತ್ತೇವೆ. ಈ ವೇಳೆ ನಾಗದೇವರೇ ಪುರಾತನ ಮರಗಳನ್ನು ಕಡಿಯಲು ಅಪ್ಪಣೆ ಕೊಡುತ್ತಾರೆ. ಈ ಅನುಜ್ಞೆ ವಿಪರ್ಯಾಸ ಅನ್ನಿಸುವುದಿಲ್ಲವೇ ?. ಈ ರೀತಿಯ ವಿಕೃತಿಗಳಿಂದಾಗಿ ನಮ್ಮ ಬನಗಳು ನಾಶವಾಗುತ್ತಿವೆ. ನಾಗ ಆರಾಧನೆಯ ಆಶಯ-ಸ್ವರೂಪ ನೇಪಥ್ಯಕ್ಕೆ ಸರಿಯುತ್ತಿದೆ ಅಥವಾ ಮರೆತು ಹೋಗುತ್ತಿದೆ. ಇದರಿಂದಾಗಿ ನಾಗಬನಗಳು ಅಳಿಯುತ್ತಿವೆ. ತುಳುನಾಡಿನಲ್ಲಿ ಈಗಾಗಲೇ ಸಾವಿರಾರು ಬನಗಳು ನಾಶವಾಗಿವೆ. ಉಳಿದಿರುವ ಸಾವಿರಾರು ಬನಗಳನ್ನಾದರೂ ಉಳಿಸಿಕೊಳ್ಳುವ ಅಗತ್ಯತೆಯಿದೆ.
ನಾಗರಪಂಚಮಿ – ವನಮಹೋತ್ಸವ : ಸಾಮಾನ್ಯವಾಗಿ ತುಳುನಾಡಿನ ಜನರ ಪ್ರಥಮ ಹಬ್ಬ ಎಂದೇ ಕರೆಲ್ಪಡುವ ನಾಗರಪಂಚಮಿ ಮತ್ತು ಸರಕಾರಿ ಪ್ರಾಯೋಜಕತ್ವದೊಂದಿಗೆ ವಿವಿಧ ಸಂಘ-ಸಂಸ್ಥೆಗಳು ನಡೆಸುವ ವನಮಹೋತ್ಸವ ಕಾರ್ಯಕ್ರಮಗಳು ಒಟ್ಟೊಟ್ಟಿಗೇ ಬರುತ್ತದೆ. ಅಳಿದ ಬನಗಳನ್ನು ಮರು ನಿರ್ಮಿಸಲು, ಉಳಿದಿರುವ ನಾಗಬನಗಳನ್ನು ಬೆಳೆಸಲು ನಮಗೊದಗಿಸಿರುವ ಅವಕಾಶವೆಂದು ತಿಳಿದು ನಾವು ಪರಿಸರ ರಕ್ಷಣೆಗೆ ಮುಂದಾಗೋಣ.
ನಾಗರ ಪಂಚಮಿ ಗಿಡಮರಬೆಳೆಸುವ ಆಂದೋಲನಕ್ಕೆ ಪ್ರೇರಣೆ ನೀಡಲಿ : ನಾಗರ ಪಂಚಮಿಯಂದು ಹಾಲು, ಸೀಯಾಳ, ಹೂ – ಹಣ್ಣುಗಳೊಂದಿಗೆ ಒಂದು ಗಿಡವನ್ನು (ಮರವಾಗುವ, ಹೂ ಬಿಡುವ) ನಮ್ಮ ಆದಿ – ಮೂಲಸ್ಥಾನಕ್ಕೆ ಕೊಂಡೊಯ್ಯುವ, ನಾಗಪೂಜೆಯ ಬಳಿಕ ಬನದ ಪರಿಸರದಲ್ಲಿ ಗಿಡನೆಡುವ ಮೂಲಕ ಬನ (ವನ) ನಿರ್ಮಿಸೋಣ. ನಾವಿಷ್ಟು ಮನ ಮಾಡದಿದ್ದರೆ ನಮ್ಮ ಮಕ್ಕಳಿಗೆ ಗಿಡ – ಮರಗಳಿಲ್ಲ ಕಾಂಕ್ರೀಟ್ ವೇದಿಕೆಯನ್ನು, ಗುಡಿಯನ್ನು, ಮಂದಿರವನ್ನು, ನಾಗಬನವೆಂದು ತೋರಿಸುವ ಪ್ರಮೇಯ ಎದುರಾಗುವುದು ಖಂಡಿತ ಎಂಬಂತಾಗಿದೆ.
ನಾಗ – ಭೂಮಿ – ವೃಕ್ಷದ ನಡುವೆ ಅವಿನಾಭಾವ ಸಂಬಂಧ : ನಾಗ ಭೂಮಿಪುತ್ರನೆಂಬುದು ಪುರಾತನ ತಿಳುವಳಿಕೆ. ನಾಗ – ವೃಕ್ಷ ಅವಳಿ ಚೇತನಗಳೆಂಬುದು ಒಂದು ಆದಿಮ ಸ್ವೀಕಾರ. ಆದುದರಿಂದ ಭೂಮಿ – ನಾಗ – ವೃಕ್ಷದ ನಡುವೆ ಅವಿನಾಭಾವ ಸಂಬಂಧವನ್ನು ಕಲ್ಪಿಸಲಾಗಿದೆ. ನಾಗ ಮಾನವನಿಂದ ಮೊತ್ತ ಮೊದಲು ದೈವೀಖರಿಸಲ್ಪಟ್ಟ ಪ್ರಾಣಿ. ಕರಾವಳಿ ತುಳುನಾಡಿನಲ್ಲಿ ನಾಗ ಆದಿ ದೈವ. ಇತ್ಯಾದಿ ವೈವಿಧ್ಯಮಯ ಆರಾಧನಾ ವಿಧಿಗಳು ನಾಗನಿಗೆ ಸಂಬಂಧಪಟ್ಟು ರೂಢಿಯಲ್ಲಿವೆ.
ನಾಗ ನೆಲೆಗಳೇ ಮೂಲಸ್ಥಾನ ಆದಿಸ್ಥಾನಗಳು
ಪುರಾತನ ನಾಗ ನೆಲೆಗಳು ಇಂದು ನಮ್ಮ ಆದಿಸ್ಥಾನ – ಮೂಲಸ್ಥಾನಗಳಾಗಿವೆ. ಈ ಸ್ಥಾನಗಳ ಜೀರ್ಣೋದ್ಧಾರ ನಮಗೆ ಅಪ್ಯಾಯತೆಯನ್ನು, ಧನ್ಯತೆಯನ್ನು ಒದಗಿಸುತ್ತದೆ. ನಮ್ಮ ಮೂಲಸ್ಥಾನಕ್ಕೆ ವರ್ಷದಲ್ಲಿ ಎರಡು ಮೂರು ಬಾರಿ ಸಂದರ್ಶಿಸುವ ವೇಳೆ ಆರಾಮವಾಗಿ ಸಂದರ್ಶನ ಸಾಧ್ಯವಾಗುತ್ತದೆ. ಗಿಡ ಮರಗಳಿಲ್ಲ ನಾಗದರ್ಶನ ನಿರಾಳ. ನಮ್ಮ ನಾಗ ಬನ ಭವ್ಯವಾಗಿದೆ ಎಂಬ ಸಂತಸ.
– ಕೆ. ಎಲ್. ಕುಂಡಂತಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್
Manipal: ಮಣ್ಣಪಳ್ಳ ಕೆರೆಯಲ್ಲಿ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!
Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
MUST WATCH
ಹೊಸ ಸೇರ್ಪಡೆ
Kasaragod: ಯುವತಿ ನಾಪತ್ತೆ; ದೂರು ದಾಖಲು
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
Mangaluru: ಜ.11, 12ರಂದು ಮಂಗಳೂರು ಲಿಟ್ ಫೆಸ್ಟ್… ಕಲೆ, ಸಾಹಿತ್ಯ, ಜಾನಪದಗಳ ಸಂಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.