ನಾಗರ ಪಂಚಮಿ ನಾಡಿಗೆ ದೊಡ್ಡದು: ಸಂಭ್ರಮಾಚರಣೆ
Team Udayavani, Jul 28, 2017, 6:10 AM IST
ತೆಕ್ಕಟ್ಟೆ: ನಿಸರ್ಗವನ್ನು ಆರಾಧಿಸುವ ನಿಟ್ಟಿನಿಂದ ಹಿಂದೂಗಳು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗದೇವತೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪೂಜಿಸಿ ಎಲ್ಲ ದುರಿತಗಳನ್ನು ನಿವಾರಿಸಿ ರಕ್ಷಿಸಲೆಂದು ನಾಗದೇವರಿಗೆ ಹಾಲು ಹಣ್ಣು ಅರ್ಪಿಸಿ ಸಂತೃಪ್ತರನ್ನಾಗಿಸುವ ವಿಶೇಷ ಹಬ್ಬ ನಾಗರಪಂಚಮಿ.
ಕುಂದಾಪುರ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಒಂದಾದ ಕೋಣಿ ಆಚಾರ್ ಬೆಟ್ಟು,ಕುಂಭಾಶಿ,ಹಲೂ¤ರು ಹಾಗೂ ತೆಕ್ಕಟ್ಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಮುಂತಾದ ಗ್ರಾಮೀಣ ಭಾಗಗಳಲ್ಲಿ ಗುರುವಾರದಂದು ಸಂಭ್ರಮದಿಂದ ನಡೆಯಿತು.
ಈ ಸಂದರ್ಭದಲ್ಲಿ ನೂರಾರು ಭಕ್ತರು ನಾಗ ಬನಗಳಲ್ಲಿ ತನು ಎರೆದು ನಾಗ ದೇವನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಉಳೂ¤ರು, ಕೆದೂರು, ಬೇಳೂರು, ಮೊಗೆಬೆಟ್ಟು, ಕೊರ್ಗಿ, ಹೊಸಮಠ, ತೆಕ್ಕಟ್ಟೆ ಸೇರಿದಂತೆ ವಿವಿಧೆಡೆಗಳಲ್ಲಿ ನಾಗ ಸಾನ್ನಿಧ್ಯಕ್ಕೆ ಹಾಲು ಹಣ್ಣು ಅರ್ಪಿಸಲಾಯಿತು.
ಭಕ್ತರಲ್ಲಿ ಗೊಂದಲ
ಹಲವೆಡೆಗಳಲ್ಲಿ ನಾಗರಪಂಚಮಿಯ ಬಗ್ಗೆ ಕ್ಯಾಲೆಂಡರ್‌ನಲ್ಲಿ ಉಲ್ಲೇಖೀಸಿದ ದಿನಾಂಕ ಹಾಗೂ ಶಾಸ್ತ್ರದಲ್ಲಿನ ಪಂಚಮಿಯ ಬಗೆಗಿನ ಗೊಂದಲಕರ ಮಾಹಿತಿಯಿಂದಾಗಿ ಅದೆಷ್ಟೋ ಭಕ್ತರು ಗೊಂದಲಕ್ಕೆ ಒಳಗಾದ ಘಟನೆ ಸಂಭವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ರೈಲು ಬಡಿದು ವ್ಯಕ್ತಿ ಸಾವು
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.