ನಾಗರ ಪಂಚಮಿ ಖರೀದಿ ಸಂಭ್ರಮ: ಸ್ವರ್ಣ ಕೇದಗೆಗೆ ಮಹಾರಾಷ್ಟ್ರದ ನೆರೆ ಹೊಡೆತ
ಹೂ, ಬಾಳೆ ಹಣ್ಣು ತುಟ್ಟಿ
Team Udayavani, Aug 4, 2019, 5:19 AM IST
ಉಡುಪಿ: ನಾಗರಪಂಚಮಿ ಸಂಭ್ರಮಕ್ಕೆ ಉಡುಪಿಯಲ್ಲಿ ಶನಿವಾರವೇ ಖರೀದಿ ಆರಂಭ ಗೊಂಡಿತು. ರಥಬೀದಿಯಲ್ಲಿ ಮಹಾರಾಷ್ಟ್ರದ ರತ್ನಗಿರಿ ಯಿಂದ ಬಂದಿರುವ ಸ್ವರ್ಣಕೇದಗೆ ಪರಿಮಳ ಬೀರುತ್ತಿದೆ. ಆದರೆ ಮಹಾರಾಷ್ಟ್ರದಲ್ಲಿ ಉಂಟಾದ ನೆರೆಯಿಂದಾಗಿ ಸ್ವರ್ಣಕೇದಗೆ ಗಿಡಗಳಿಗೂ ಹಾನಿಯಾದ ಪರಿಣಾಮ ದರ ಹೆಚ್ಚಾಗಿದೆ.
‘ಹುಬ್ಬಳ್ಳಿಯಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ರತ್ನಗಿರಿಯಿಂದ ಸ್ವರ್ಣಕೇದಗೆ ತರುತ್ತೇವೆ. ಆದರೆ ಈ ಬಾರಿ ಡ್ಯಾಂ ಒಡೆದು ಎಲ್ಲ ತೊಂದರೆಯಾಗಿದೆ’ ಎನ್ನುತ್ತಾರೆ ಕೇದಗೆ ವ್ಯಾಪಾರಿಗಳಾದ ಇಮ್ತಿಯಾಜ್, ಮಂಜು, ಶೇಖಯ್ಯ ಮತ್ತು ಈರಣ್ಣ.
ಕೆಂದಾಳೆ ಬೊಂಡ ಆಕರ್ಷಣೆ
ಕೆಂದಾಳೆಯ ಎರಡು ಜಾತಿಯ ಬೊಂಡಗಳು ಕೇರಳದಿಂದ ಬಂದಿವೆ. ಬಾರಕೂರು ಹಾಗೂ ಕೆಲವು ಸ್ಥಳೀಯ ಸೀಯಾಳಗಳೂ ಇವೆ. ಕೆಂದಾಳೆ ಬೊಂಡವನ್ನು ರಥಬೀದಿಯಲ್ಲಿ ಶನಿವಾರ 50 ರೂ.ಗಳಿಗೆ ಮಾರಾಟ ಮಾಡಲಾಯಿತು. ಕೆಲವು ಅಂಗಡಿಗಳಲ್ಲಿ ಇದು 40-45 ರೂ.ಗಳಿಗೂ ಮಾರಾಟವಾಗುತ್ತಿತ್ತು. ಇತರೆ ಜಾತಿಯ ಸೀಯಾಳ ದರ 35 ರೂ. ಇತ್ತು.
ಅರಿಸಿನ ಎಳೆಯ ಕಟ್ಟಿಗೂ ಬೇಡಿಕೆ ಕಂಡು ಬಂತು. 25 ಎಲೆಗಳ ಒಂದು ಕಟ್ಟಿಗೆ 40 ರೂ. ದರ ನಿಗದಿಯಾಗಿತ್ತು. ಬಾಳೆ ಹಣ್ಣು ಕೂಡ ದುಬಾರಿ ಎಂಬ ಮಾತು ವ್ಯಾಪಾರಿಗಳಿಂದಲೇ ಕೇಳಿಬಂತು. ಪುಟ್ ಬಾಳೆ ಕೆ.ಜಿಗೆ 80 ಕೆ.ಜಿ ರೂ. ಇತ್ತು. ಮೂಡೆ ಎಲೆಯ ಕೊಟ್ಟೆ, ವಿವಿಧ ರೀತಿಯ ಹೂ, ಹಣ್ಣುಗಳಿಗೆ ಗ್ರಾಹಕರಿಂದ ಬೇಡಿಕೆ ಇತ್ತು. ರಥಬೀದಿಯಲ್ಲದೆ ನಗರದ ಇತರೆ ಅಂಗಡಿಗಳು ಕೂಡ ಬೊಂಡ , ಹೂ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನಿರಿಸಿವೆ. ನಗರದ ಬಟ್ಟೆ, ಆಭರಣ ಅಂಗಡಿಗಳಲ್ಲಿಯೂ ಶನಿವಾರ ಜನಸಂದಣಿ ಕಂಡುಬಂತು.
ಸೇವಂತಿಗೆ ಮೊಳಕ್ಕೆ 40, 60, 50 ಹೀಗೆ ವಿವಿಧ ದರಗಳಲ್ಲಿ ಬಿಕರಿಯಾಯಿತು. ರವಿವಾರ ಮತ್ತಷ್ಟು ಹೂ ಬರುವ ನಿರೀಕ್ಷೆ ಇದೆ. ಆದರೆ ಈ ಬಾರಿ ಬೆಳೆ ಕಡಿಮೆಯಾಗಿ ಬೆಲೆ ಹೆಚ್ಚಾಗಿದೆ ಎಂದು ಹಾಸನದಿಂದ ಬಂದಿದ್ದ ಹೂವಿನ ವ್ಯಾಪಾರಿ ನಾಗರಾಜ್ ಹೇಳಿದರು. ಹಿಂಗಾರ ಒಂದಕ್ಕೆ 150 ರೂ. ದರವಿದೆ.
ಹೂ ದುಬಾರಿ
ಸೇವಂತಿಗೆ ಮೊಳಕ್ಕೆ 40, 60, 50 ಹೀಗೆ ವಿವಿಧ ದರಗಳಲ್ಲಿ ಬಿಕರಿಯಾಯಿತು. ರವಿವಾರ ಮತ್ತಷ್ಟು ಹೂ ಬರುವ ನಿರೀಕ್ಷೆ ಇದೆ. ಆದರೆ ಈ ಬಾರಿ ಬೆಳೆ ಕಡಿಮೆಯಾಗಿ ಬೆಲೆ ಹೆಚ್ಚಾಗಿದೆ ಎಂದು ಹಾಸನದಿಂದ ಬಂದಿದ್ದ ಹೂವಿನ ವ್ಯಾಪಾರಿ ನಾಗರಾಜ್ ಹೇಳಿದರು. ಹಿಂಗಾರ ಒಂದಕ್ಕೆ 150 ರೂ. ದರವಿದೆ.
500 ಕೇದಗೆ ಮಾತ್ರ
ಕಳೆದ ವರ್ಷ 20,000 ಕೇದಗೆ ತಂದಿದ್ದೆವು. ಆದರೆ ಈ ವರ್ಷ ರತ್ನಗಿರಿಯಲ್ಲಿ ಮಳೆಯಿಂದಾಗಿ 500 ಮಾತ್ರ ತರಲು ಸಾಧ್ಯವಾಗಿದೆ. ಹಾಗಾಗಿ ಬೆಲೆಯೂ ಹೆಚ್ಚು ಮಾಡುವುದು ಅನಿವಾರ್ಯವಾಯಿತು. ಕಳೆದ ವರ್ಷ 100ರಿಂದ 150 ರೂ.ಗಳಿಗೆ ಕೇದಗೆ ಮಾರಾಟ ಮಾಡಿದ್ದೆವು.
-ಇಮ್ತಿಯಾಜ್,ಕೇದಗೆ ವ್ಯಾಪಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.