“ನಾಗಾರಾಧನೆಯಿಂದ ಸುಖ ಸಮೃದ್ಧಿ’
Team Udayavani, Feb 23, 2017, 11:48 AM IST
ಹೆಬ್ರಿ: ಆಡಂಬರ ರಹಿತ ಭಕ್ತಿಯಿಂದ ನಾಗ ದೇವರ ಆರಾಧನೆ ಹಾಗೂ ಮೂಲಸ್ಥಾನ ಅಭಿವೃದ್ಧಿಯಿಂದ ಸಂತಾನ, ಸಂತತಿ, ಸಂಪತ್ತು, ಆರೋಗ್ಯ, ಸುಖ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಬಹಳ ಪುರತಾನ ಇತಿಹಾಸ ವಿರುವ ದಬುìಜೆ ಮಠದಲ್ಲಿ ಬೆಳಿರಾಯ ಕುಟುಂಬಸ್ಥರು ಗ್ರಾಮಸ್ಥರ ಸಹಕಾರದಿಂದ ಆರಾಧಿಸಿಕೊಂಡು ಬಂದ ಶ್ರೀ ಕ್ಷೇತ್ರ ವಿಶೇಷ ಸಾನ್ನಿಧ್ಯವನ್ನು ಹೊಂದಿದೆ ಎಂದು ಜಗದ್ಗುರು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಫೆ. 20ರಂದು ಕಾರ್ಕಳ ತಾಲೂಕು ಕಡ್ತಲ ದಬುìಜೆ ವಿಷ್ಣುಮೂರ್ತಿ ಗೋಪಾಲಕೃಷ್ಣ ಮಠದ ನಾಗಬ್ರಹ್ಮಸ್ಥಾನದಲ್ಲಿ ನಡೆದ ಢಕ್ಕೆಬಲಿ ಸೇವೆಯ ಪೂರ್ವಭಾವಿಯಾಗಿ ದಾನಿಗಳನ್ನು ಸಮ್ಮಾನಿಸಿ ಆಶೀರ್ವಚನ ನೀಡಿದರು.
ನಾಗದೇವರು ಪ್ರತ್ಯಕ್ಷ
ಕ್ಷೇತ್ರದಲ್ಲಿರುವ ನಾಗಬ್ರಹ್ಮಸ್ಥಾನ ದಲ್ಲಿ ನಾಗದೇವರಿಗೆ ತನು ಎರೆಯುವ ಸಂದರ್ಭ ಹುತ್ತದಿಂದ ನಾಗದೇವರು ಪ್ರತ್ಯಕ್ಷಗೊಂಡಿರುವ ವಿಚಾರ ಕ್ಷೇತ್ರದ ಮಹಾತೆ¾ ಹಾಗೂ ಭಕ್ತಿಗೆ ಭಗವಂತನು ಒಲಿದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಶ್ರೀಪಾದರು ಹೇಳಿದರು.
ಕ್ಷೇತ್ರದ ಪುರೋಹಿತ ಗೋಪಾಲಕೃಷ್ಣ ಜೋಯಿಸ್ ಮಾತನಾಡಿ ಬೆಳಿರಾಯ ಕುಟುಂಬದ ಭಕ್ತಿ ಹಾಗೂ ಗ್ರಾಮಸ್ಥರ ಸಹಕಾರದಿಂದ ದೇವರ ಬ್ರಹ್ಮಕಲಶ ಹಾಗೂ ನಾಗದೇವರಿಗೆ ಢಕ್ಕೆಬಲಿ ಸೇವೆ ನಡೆದಿದ್ದು ಪ್ರತಿಯೊಬ್ಬರು ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಢಕ್ಕೆಬಲಿ ಉತ್ಸವಕ್ಕೆ ದೇಣಿಗೆ ನೀಡಿದವರನ್ನು ಸಮ್ಮಾನಿಸಲಾಯಿತು.
ಸಭೆಯಲ್ಲಿ ಕೆ.ವಿ ಬೆಳಿರಾಯ, ಕೃಷ್ಣಮೂರ್ತಿ ಬೆಳಿರಾಯ, ಪ್ರಭಾಕರ ಬೆಳಿರಾಯ, ಸುಧಾಕರ ಬೆಳಿರಾಯ, ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ, ದೇವಸ್ಥಾನ ಆಡಳಿತ ಮೊಕ್ತೇಸರ ಪ್ರಶಾಂತ ಬೆಳಿರಾಯ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಾಧ್ಯಕ್ಷ ಸುಧಾಕರ ಬೆಳಿರಾಯ ಸ್ವಾಗತಿಸಿ, ಕಾರ್ಯದರ್ಶಿ ಜನಾರ್ದನ ಬೆಳಿರಾಯ ಕಾರ್ಯಕ್ರಮ ನಿರೂಪಿಸಿ, ಮುಖ್ಯಪ್ರಾಣ ಉಪಾಧ್ಯಾಯ ವಂದಿಸಿದರು. ಧಾರ್ಮಿಕ ಸಭೆಯ ಅನಂತರ ಕಲ್ಲಂಗಳ ರಾಮಚಂದ್ರ ಕುಂಜಿತ್ತಾಯ ಮತ್ತು ಬಾಲಕೃಷ್ಣ ವೈದ್ಯ ಬಳಗದಿಂದ ಬ್ರಹ್ಮಸ್ಥಾನದಲ್ಲಿ ಸಾಂಪ್ರದಾಯಿಕ ಢಕ್ಕೆಬಲಿ ಸೇವೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!
Mangalore: ಪ್ರಯಾಣಿಕರಿಗಾಗಿ ಸಿಗ್ನಲ್ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.