ನಂದಳಿಕೆಯಲ್ಲಿ ಅಯನೋತ್ಸವ , ರಾತ್ರಿಯ ಸಿರಿ ಜಾತ್ರೆ
Team Udayavani, Mar 23, 2019, 12:30 AM IST
ಬೆಳ್ಮಣ್: ಐತಿಹಾಸಿಕ ನಾಲ್ಕು ಸ್ಥಾನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಅಯನೋತ್ಸವ ಹಾಗೂ ರಾತ್ರಿಯ ಸಿರಿ ಜಾತ್ರೆ ಗುರುವಾರ ಭಾರೀ ಸಂಭ್ರಮದಿಂದ ನಡೆಯಿತು.
ಪರಂಪರೆಯಂತೆ ನಂದಳಿಕೆ ಚಾವಡಿ ಆರಮನೆಯಿಂದ ಶ್ರೀ ಸುಂದರರಾಮ ಹೆಗ್ಡೆಯವರನ್ನು ಮೆರವಣಿಗೆಯೊಂದಿಗೆ ಕರೆತರಲಾಗಿ ಕ್ಷೇತ್ರದಲ್ಲಿ ಅಯನೋತ್ಸವ, ಉತ್ಸವ ಬಲಿ, ಕೆರೆ ದೀಪೋತ್ಸವ, ಬಲ್ಲೇಶ್ವರ ಪೂಜೆ ,ಕಟ್ಟೆಪೂಜೆ ಮಹೋತ್ಸವ ನಡೆದು ಸತ್ಯದ ಸಿರಿಗಳ ಮೂಲಕ್ಷೇತ್ರ ಶ್ರೀ ಆಲಡೆ ಸನ್ನಿ ಧಿಯಲ್ಲಿ ಶ್ರೀ ಸಿರಿ ಕುಮಾರ, ಅಬ್ಬಗ ದಾರಗ ದರ್ಶನಾವೇಶಪೂರ್ವಕ ಸೂರ್ಯೋದಯ ಪರ್ಯಂತ ಸಪ್ತ ಸತ್ಯದ ಸಿರಿಗಳ ವೈಭವದ ಸಿರಿಜಾತ್ರಾ ವಿ ವೈಭವದಿಂದ ನಡೆಯಿತು.
ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ನಂದಳಿಕೆ ಚಾವಡಿ ಅರಮನೆ ಎನ್. ಸುಂದರರಾಮ ಹೆಗ್ಡೆ ಮಾರ್ಗದರ್ಶನದಲ್ಲಿ ನಂದಳಿಕೆ ಚಾವಡಿ ಆರಮನೆ ಸುಹಾಸ್ ಹೆಗ್ಡೆ ನೇತೃತ್ವದಲ್ಲಿ ಸಂಭ್ರಮದ ಸಿರಿಜಾತ್ರಾ ಮಹೋತ್ಸವ ನಡದು ಕ್ಷೇತ್ರದ ಪ್ರಧಾನ ಆರ್ಚಕ ಹರೀಶ್ ತಂತ್ರಿ, ದೇವಳದ ವ್ಯವಸ್ಥಾಪಕ ರವಿರಾಜ ಭಟ್ ಹಾಗೂ ಅಸಂಖ್ಯಾತ ಮಂದಿ ಭಕ್ತಾದಿಗಳು ಬೆಳಗ್ಗಿನವರೆಗೆ ಸಿರಿಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಹೊರ ಜಿಲ್ಲೆಯವರೂ ಭಾಗಿ
ಉಡುಪಿ, ದ.ಕ. ಮಾತ್ರವಲ್ಲದೆ ಚಿಕ್ಕಮಗಳೂರು, ಶಿವಮೊಗ್ಗ, ಸೇರಿದಂತೆ ಮಲೆನಾಡಿನ ಭಾರೀ ಭಕ್ತರು ಈ ಸಿರಿ ಜಾತ್ರೆಯಲ್ಲಿ ಪಾಲ್ಗೊಂಡರು. ಮಧ್ಯಾಹ್ನ ಅನ್ನಸಂತರ್ಪಣೆಯ ಜತೆ ಅಚ್ಚುಕಟ್ಟಿನ ವ್ಯವಸ್ಥೆಗೆ ಹೆಸರಾದ ಸಿರಿ ಜಾತ್ರೆ ರಾತ್ರಿಯೂ ಅಷ್ಟೇ ವ್ಯವಸ್ಥಿತವಾಗಿ ನಡೆದು ಬಾರೀ ಮೆಚ್ಚುಗೆಗೆ ಪಾತ್ರವಾಯಿತು. ಸಿರಿ ಜಾತ್ರೆಯ ಈ ಸೊಬಗಿನಲ್ಲಿ ವಿವಿಧ ಕಲಾ ತಂಡಗಳೂ ಭಾಗವಹಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.