ನಂದಳಿಕೆ ಹೆಗ್ಡೆಯವರ ಮರದ ಬೊಂಬೆಗಳಿಗೆ ಬಣ್ಣ
Team Udayavani, Mar 21, 2019, 1:00 AM IST
ಬೆಳ್ಮಣ್: ಐತಿಹಾಸಿಕ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಮಾ. 21 ಸಿರಿಜಾತ್ರಾ ವೈಭವ. ಅದರಂತೆ ಶಾ.ಶ. 1450ರಲ್ಲಿ ನಂದಳಿಕೆ ಚಾವಡಿಯಲ್ಲಿ ಅರಸರಾಗಿ ಆಳ್ವಿಕೆ ನಡೆಸಿದ್ದ ಹೂವಯ್ಯ ಹೆಗ್ಡೆ, ಮಂಜಯ್ಯ ಹೆಗ್ಡೆ, 2ನೇ ಮಂಜಯ್ಯ ಹೆಗ್ಡೆ ಹಾಗೂ ಹೆಗ್ಡೆಯವರ ಮಂತ್ರಿಗಳು, ಅಂಗರಕ್ಷಕರು, ದಾಸಿಯರು ಹಾಗೂ ನರ್ತಕಿಯರ ಸಹಿತ ಒಟ್ಟಾರೆ 21 ಮರದ ಮೂರ್ತಿಗಳಿಗೆ ಬಣ್ಣ ಬಳಿದು ದೇಗುಲದ ಮುಂಭಾಗದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಪೈಕಿ ಒಂದು ಮೂರ್ತಿಯ ಕೈ ಕಡಿದ ಸ್ಥಿತಿಯಲ್ಲಿದೆ.
ದೇಗುಲದಿಂದಲೇ ನಿರ್ವಹಣೆ
ಈ ಎಲ್ಲಾ 21 ಮೂರ್ತಿಗಳ ನಿರ್ವಹಣೆ ದೇಗುಲದಿಂದಲೇ ನಡೆಯುತ್ತಿದ್ದು ನಂದಳಿಕೆ ಚಾವಡಿಯ ಪರಂಪರೆಯ ಹೆಗ್ಡೆಯವರನ್ನು ನೆನಪಿಸುವ ಕಾರ್ಯವಾಗುತ್ತಿದೆ. ಎಲ್ಲಾ ಮೂರ್ತಿಗಳೂ ಆಕರ್ಷಣೀಯವಾಗಿವೆ.
ಮೂರ್ತಿಗಳಿಗೆ ಪಿಂಡ ಪ್ರದಾನವೂ ಇದೆ
ಈ ಮರದ ಮೂರ್ತಿಗಳಿಗೆ ಮಹಾಲಯ ಅಮವಾಸ್ಯೆಯ ದಿನ ದೇಗುಲದ ನೈವೇದ್ಯದಿಂದ ಪಿಂಡ ಪ್ರದಾನ ಮಾಡಲಾಗುತ್ತದೆ 21 ಮೂರ್ತಿಗಳಿಗೂ ಒಂದೇ ಹರಿವಾಣದಲ್ಲಿ ಪಿಂಡ ಪ್ರದಾನ ಮಾಡಲಾಗುವುದೆಂದು ದೇಗುಲದ ಪ್ರಬಂಧಕ ರವಿರಾಜ್ ಭಟ್ ತಿಳಿಸಿದ್ದಾರೆ.
ಸಿರಿ ಜಾತ್ರೆಯ ಮೂಲಕ ನಂದಳಿಕೆ ಹೆಸರುವಾಸಿಯಾದರೆ ಜಾತ್ರೆಯ ರೂವಾರಿಗಳಾದ ಹೆಗ್ಗಡೆ ಮನೆತನದವರ ಸೂಚ್ಯವನ್ನು ಬೊಂಬೆಗಳ ಮೂಲಕ ತಿಳಿಯಪಡಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.