ಉಪಯೋಗಕ್ಕೆ ಬಾರದ ನಂದಿಕೋಣ ಚಮ್ಮಕುದ್ರು ಕಿಂಡಿ ಅಣೆಕಟ್ಟು
Team Udayavani, Apr 1, 2017, 3:33 PM IST
ಕುಂದಾಪುರ: ಸುಮಾರು 1.14 ಕೋಟಿ ರೂ. ವೆಚ್ಚದಲ್ಲಿ ಬೆಳ್ವೆ ಹಾಗೂ ನಾಲ್ಕೂರು ಗ್ರಾ.ಪಂ. ಗಡಿಭಾಗದಲ್ಲಿ ಸೀತಾನದಿಗೆ ಅಡ್ಡಲಾಗಿ ನಂದಿಕೋಣ ಚಮ್ಮಕುದ್ರು ಬಳಿ ನಿರ್ಮಿಸಲಾಗಿದ್ದ ಕಿಂಡಿ ಅಣೆಕಟ್ಟು ನಿರ್ವಹಣೆಯ ಕೊರತೆಯಿಂದಾಗಿ ನೀರು ಸೋರಿಕೆಯಾಗಿ ಜನೋಪಯೋಗಕ್ಕೆ ಬಾರದೇ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ಕುಡಿಯುವ ನೀರು, ಕೃಷಿ ಕಾರ್ಯಗಳಿಗೆ ನೀರು ಪೂರೈಕೆಯಾಗಬೇಕು ಹಾಗೂ ಸ್ಥಳೀಯವಾಗಿ ದೊರಕುವ ನೀರಿನ ಮೂಲಗಳನ್ನು ಪೋಲು ಆಗದಂತೆ ಆದಷ್ಟು ಎಚ್ಚರ ವಹಿಸಿ ಜನೋಪಯೋಗಕ್ಕೆ ಒದಗಿಸುವಂತಾಗಬೇಕು ಎನ್ನುವ ಸರಕಾರದ ಚಿಂತನೆಗೆ ಇಲ್ಲಿನ ಬಹಳಷ್ಟು ಕಿಂಡಿ ಅಣೆಕಟ್ಟುಗಳು ಹಾಗೂ ಚೆಕ್ ಡ್ಯಾಂಗಳ ನಿರ್ವಹಣೆ ಕೊರತೆಯನ್ನು ಕಂಡುಕೊಳ್ಳುತ್ತಿವೆ. ಸೀತಾನದಿಯಲ್ಲಿ ಸಾಕಷ್ಟು ನೀರು ಹರಿಯುತ್ತಿದ್ದರೂ ವೆಂಟೆಡ್ ಡ್ಯಾಂಗಳ ವೈಫಲ್ಯದಿಂದ ಕೋಟ್ಯಂತರ ರೂ. ನೀರುಪಾಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ನಂದಿಕೋಣ ಚಮ್ಮಕುದ್ರು ಕಿಂಡಿ ಅಣೆಕಟ್ಟು ಒಂದು ಉದಾಹರಣೆಯಾಗಿದೆ.
ಸೋರಿಕೆಯಾದ ನೀರು: ಬೆಳ್ವೆ ಹಾಗೂ ನಾಲ್ಕೂರು ಗ್ರಾ.ಪಂ. ಗಡಿಭಾಗದಲ್ಲಿ ಬೆಳ್ವೆ ಗ್ರಾಮದ ಸೂರೊYàಳಿ, ಗುಮ್ಮೊಲ, ಅಲಾºಡಿ ಮೊದಲಾದ ಗ್ರಾಮಗಳಿಗೆ ಹಾಗೂ ನಾಲ್ಕೂರು ಗ್ರಾ.ಪಂ. ವ್ಯಾಪ್ತಿಯ ಅರ್ಬಿ, ಕಜೆR, ಮದ್ದೂರು ಪರಿಸರದ
ಸುಮಾರು 25 ಕಿ.ಮೀ. ವ್ಯಾಪ್ತಿಯ ಸಾವಿರಾರು ಜನರಿಗೆ ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ನಂದಿಕೋಣ- ಚಮ್ಮಕುದ್ರು ಬಳಿ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಸೂಕ್ತ ಹಲಗೆ ಹಾಕುವಲ್ಲಿ ವಿಫಲತೆಯನ್ನು ಕಂಡುಕೊಂಡು ಸೋರಿಕೆಯನ್ನು ಕಂಡುಕೊಂಡಿದೆ. ಕಿಂಡಿ ಅಣೆಕಟ್ಟು ನಿರ್ಮಾಣವಾಗಿ ಎರಡು ವರ್ಷ ಕಳೆಯುವುದರೊಳಗೆ ಅಣೆಕಟ್ಟಿಗೆ ಅಳವಡಿಸಲಾದ ಹಲಗೆಗಳು ಉಪಯೋಗಕ್ಕೆ ಬಾರದ ಸ್ಥಿತಿಗೆ ಹೋಗಿವೆ. ಕಿಂಡಿ ಅಣೆಕಟ್ಟಿಗೆ ದೀರ್ಘ ಕಾಲ ಬಾಳಿಕೆ ಬಾರದ ಹಲಗೆ ಯನ್ನು ಅಳವಡಿಸಿದ್ದರಿಂದ ಈ ನೀರು ಸೋರಿಕೆಯಾ ಗಿದೆ ಎನ್ನುವುದು ಸ್ಥಳೀಯರ ಆರೋಪ. ಇಲ್ಲಿ ಸಾಕಷ್ಟು ನೀರು ಸಂಗ್ರಹವಾದಲ್ಲಿ ಪರಿಸರದ ಬಾವಿ, ಕೆರೆ, ಮದಗಗಳಲ್ಲಿ ಅಂತರ್ಜಲ ಮಟ್ಟ ಏರಿಕೆ ಯನ್ನು ಕಂಡುಕೊಂಡು ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ಉಪಯೋಗ ವಾಗುವ ಸಾಧ್ಯತೆ ಇತ್ತು. ಈ ಬಾರಿ ಮಳೆ ಕಡಿಮೆಯಾಗಿರುವುದರಿಂದ ಜಲಮಟ್ಟ ಕುಸಿದು ಹೋಗಿರುವುದರಿಂದ ಈ ಅಣೆ ಕಟ್ಟಿನಲ್ಲಿ ನೀರಿನ ಮಟ್ಟವನ್ನು ಕುಸಿಯುವಂತೆ ಮಾಡಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಅಣೆಕಟ್ಟು ಸುಮಾರು ನಾಲ್ಕು ಮೀ. ಎತ್ತರವಿದ್ದರೂ ಕೇವಲ 2 ಮೀ. ತನಕ ಹಲಗೆ ಹಾಕಲಾಗಿದೆ. ಗುಣಮಟ್ಟವಿಲ್ಲದ ಹಲಗೆಯನ್ನು ಅಳವಡಿಸಿ ಮಣ್ಣು ಹಾಕಿದ್ದರಿಂದ ಇಲ್ಲಿ ನೀರು ಸೋರಿಕೆಯು ಕಂಡು ಬಂದಿದೆ. ಹಲಗೆಯ ನಡುವಿನ ಕಿಂಡಿಗಳಲ್ಲಿ ಮಣ್ಣು ಕೊಚ್ಚಿಹೋಗಿ ನೀರು ಸೋರಿಕೆಯಾಗಿದೆ. ಸಣ್ಣ ನೀರಾವರಿ ಇಲಾಖೆೆಯಿಂದ ಕಾಮಗಾರಿ ನಡೆದಿದ್ದರೂ ಇದರ ನಿರ್ವಹಣೆಯನ್ನು ಮಾತ್ರ ಯಾರಿಗೂ ಹಸ್ತಾಂತರಿಸದೇ ಇರುವುದು ಈ ವಿಫಲತೆಗೆ ಕಾರಣ ಎನ್ನಬಹುದಾಗಿದೆ.
ಈ ಕಿಂಡಿ ಅಣೆಕಟ್ಟು ಬೆಳ್ವೆ ಹಾಗೂ ನಾಲ್ಕೂರು ಗ್ರಾ.ಪಂ. ನ ಸುಮಾರು 25 ಕಿ.ಮೀ.ವ್ಯಾಪ್ತಿಯ ಜನರ ಕುಡಿಯುವ ನೀರು, ಕೃಷಿ ಚಟುವಟಿಕೆಗೆ ಅನುಕೂಲವಾಗುವಂತೆ ಸುಮಾರು 1.14 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಬೆಳ್ವೆ ಗ್ರಾ.ಪಂ. ವ್ಯಾಪ್ತಿಯ ಬೆಳ್ವೆ ಗ್ರಾಮದ ಸೂರೊYàಳಿ, ಗುಮ್ಮೊಲ, ಅಲಾºಡಿ ಮೊದಲಾದ ಗ್ರಾಮಗಳಿಗೆ ಹಾಗೂ ನಾಲ್ಕೂರು ಗ್ರಾ.ಪಂ. ವ್ಯಾಪ್ತಿಯ ಅರ್ಬಿ, ಕಜೆR, ಮದ್ದೂರು ಗ್ರಾಮಗಳಿಗೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗುವಂತೆ ಈ ಅಣೆಕಟ್ಟು ನಿರ್ಮಾಣವಾಗಿದ್ದರೂ ಇದರ ಉಪಯೋಗವನ್ನು ಪಡೆಯುವಲ್ಲಿ ಈ ಪರಿಸರದ ಜನರಿಗೆ ಇನ್ನೂ ಸಂಪೂರ್ಣವಾಗಿ ಪ್ರಯೋಜನ ಆಗಿಲ್ಲ.
ಕಳಪೆ ಗುಣಮಟ್ಟದ ಹಲಗೆಗಳನ್ನು ಈ ಕಿಂಡಿ ಅಣೆಕಟ್ಟಿಗೆ ಉಪಯೋಗಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಹಲಗೆಯನ್ನು ಹಾಕದೇ ಇರುವುದರಿಂದ ಮತ್ತು ಪೂರ್ತಿ ಕಿಂಡಿಗೆ ಹಲಗೆ ಹಾಕದೇ ಇರುವುದರಿಂದ ನೀರು ಸೋರಿಕೆಯಾಗಿದೆ. ಇಲ್ಲಿನ ನಾಲ್ಕು ಮೀಟರ್ ಎತ್ತರದಲ್ಲಿ ನೀರು ಸಂಗ್ರಹವಾದಲ್ಲಿ ಸುತ್ತುಮುತ್ತಲಿನ ಭಾಗಗಳಲ್ಲಿ ನೀರಿನ ಅಂತರ್‌ಜಲ ಮಟ್ಟ ಏರಿಕೆಯಾಗಿ ಜನರಿಗೆ ಬಹೂಪಯೋಗಿಯಾಗುತ್ತಿತ್ತು. ಆದರೆ ಕೇವಲ ಎರಡು ಮೀಟರ್ ತನಕ ಹಲಗೆ ಹಾಕಿರುವುದರಿಂದ ನೀರು ಸಾಕಷ್ಟು ಸಂಗ್ರಹವಾಗದೇ ಪೋಲಾಗುತ್ತಿದೆ.
– ಬಿ. ಉದಯ ಪೂಜಾರಿ ಬೆಳ್ವೆ, ಮಾಜಿ ಅಧ್ಯಕ್ಷರು ಬೆಳ್ವೆ ಗ್ರಾ.ಪಂ.
– ಉದಯ ಆಚಾರ್ ಸಾಸ್ತಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ವೈದ್ಯಕೀಯ ಸೀಟ್ ಕೊಡಿಸುವುದಾಗಿ ನಂಬಿಸಿ ವಂಚನೆ
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.