“ನ್ಯಾನೋ ತಂತ್ರಜ್ಞಾನಗಳು ಜೀವನದ ಅಂಗ’
Team Udayavani, Feb 20, 2020, 5:22 AM IST
ಉಡುಪಿ: ವಿಜ್ಞಾನ, ತಂತ್ರಜ್ಞಾನಗಳು ಗಡಿರೇಖೆ ಮೀರಿದ ವಿಷಯಗಳು. ನ್ಯಾನೋ ತಂತ್ರಜ್ಞಾನದ ಚೌಕಟ್ಟು ಇಂದು ಅಗಾಧವಾಗಿದೆ. ಆರೋಗ್ಯ, ವಿದ್ಯುತ್ ಮೊದಲಾದ ಕ್ಷೇತ್ರಗಳ ಎಂಆರ್‌ಐ, ಎಲ್‌ಇಡಿ ಬಲ್ಬ್ ಗಳಲ್ಲಿ ಆಗಿರುವ ಕ್ರಾಂತಿಗಳು ಇದಕ್ಕೆ ಉತ್ತಮ ಉದಾಹರಣೆಗಳು ಎಂದು ಮಾಹೆಯ ಅಟೊಮಿಕ್ ಆ್ಯಂಡ್ ಮೊಲೆಕ್ಯೂಲರ್ ಫಿಸಿಕ್ಸ್‌ನ ಸಹಾಯಕ ಪ್ರಾಧ್ಯಾಪಕ ಸುರೇಶ್ ಕುಲಕರ್ಣಿ ತಿಳಿಸಿದರು.
ಎಂ.ಜಿ.ಎಂಕಾಲೇಜಿನ ರಸಾ ಯನಶಾಸ್ತ್ರ ವಿಭಾಗ ಮತ್ತು ಐ.ಕ್ಯು.ಎ.ಸಿ ಜಂಟಿ ಆಶ್ರಯದಲ್ಲಿ ಹಾಗೂ ಮಂಗಳೂರು ವಿ.ವಿ. ರಸಾಯನಶಾಸ್ತ್ರ ಉಪನ್ಯಾಸಕರ ಸಂಘದ ಸಹಯೋಗದಲ್ಲಿ ಬುಧವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ “ಅಡ್ವಾನ್ಸ್ ಇನ್ ನ್ಯಾನೋ ಟೆಕ್ನಾಲಜಿ ಮತ್ತು ಪರಿಸರ ರಸಾಯನಶಾಸ್ತ್ರದ ಸಮಷ್ಟಿ ಬೆಳವಣಿಗೆ’ ವಿಷಯದ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪ್ರತ್ಯೇಕ ವಿಷಯಗಳನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳಲ್ಲಿ ಎರಡು ವಿಷಯಗಳ ಜ್ಞಾನ ಅಗತ್ಯವಾಗಿ ಬೇಕು. ಇದರಿಂದ ಒಂದಕ್ಕೊಂದು ಇರುವ ಸಂಬಂಧ ತಿಳಿಯಲು ಸಾಧ್ಯವಿದೆ. ಇಂದು ಸುಸ್ಥಿರ ಅಭಿವೃದ್ಧಿ ಮೂಲಕ ಖನಿಜ ಸಂಪನ್ಮೂಲಗಳನ್ನು ಮುಂದಿನ ತಲೆಮಾರಿಗೆ ಕಾಪಾಡುವ ಅಗತ್ಯವಿದೆ. 500ಕ್ಕೂ ಮಿಕ್ಕ ದಿನಬಳಕೆಯ ಗ್ರಾಹಕ ಸಾಮಗ್ರಿಗಳು ಇಂದು ನ್ಯಾನೋ ತಂತ್ರಜ್ಞಾನ ಪಡೆದುಕೊಂಡು ರೂಪುಗೊಂಡಿವೆ. ಈ ಎಲ್ಲ ವಸ್ತುಗಳಲ್ಲಿ ರಾಸಾಯನಿಕಗಳು ಒಂದಲ್ಲ ಒಂದು ರೀತಿಯಲ್ಲಿ ಇವೆ. ಇಂತಹ ವೇದಿಕೆಗಳು ಮುಂದಿನ ದಿನಗಲ್ಲಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ, ನೂತನ ತಂತ್ರಜ್ಞಾನದ ಆವಿಷ್ಕಾರಗಳು ಅನೇಕ ಮಹತ್ತರ ಬದಲಾವಣೆಗಳಿಗೆ ಕಾರಣವಾಗಿದೆ. ಇವುಗಳಲ್ಲಿ ನ್ಯಾನೋ ತಂತ್ರಜ್ಞಾನಗಳು ಒಂದು. ಇಂದು ಪರಿಸರಕ್ಕೆ ಪರಿಸರ ಸ್ನೇಹಿಯಾಗಿ ಆವಿಷ್ಕಾರಗಳು ಆಗತ್ಯವಿದೆ. ಮರುಬಳಕೆಯ ಮೂಲಕ ಖನಿಜ ಸಂಪನ್ಮೂಲಗಳನ್ನು ಸಂರಕ್ಷಿಸಿಡುವ ಅಗತ್ಯವಿದೆ. ಇಂತಹ ಹೊಸ ಪರಿಸರ ಸ್ನೇಹಿ ಆವಿಷ್ಕಾರವನ್ನು ವಿದ್ಯಾರ್ಥಿಗಳು ಕೈಗೊಳ್ಳುವಂತಾಗಲಿ ಎಂದು ಅವರು ಆಶಿಸಿದರು.
ಪ್ರಧಾನ ಅತಿಥಿಗಳಾಗಿ ಮಣಿಪಾಲ ಮಾಹೆಯ ಕುಲಸಚಿವ ಡಾ| ನಾರಾಯಣ ಸಭಾಹಿತ್ ಶುಭ ಕೋರಿದರು. ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಜಿ. ವಿಜಯ ಅಧ್ಯಕ್ಷತೆ ವಹಿಸಿದ್ದರು. ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು.
ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ| ಅರುಣ್ ಕುಮಾರ್ ಬಿ. ಸ್ವಾಗತಿಸಿ, ಪ್ರೊ| ಬಾಸ್ಕರ್ ಆಚಾರ್ಯ ವಂದಿಸಿದರು. ಚೈತ್ರಾ ಪೈ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.