ಮಣಿಪಾಲ ವಿವಿ: ಮಿದುಳಿನ ಕ್ಯಾನ್ಸರಿಗೆ ನ್ಯಾನೋ ತಂತ್ರಜ್ಞಾನ ಚಿಕಿತ್ಸೆ
Team Udayavani, Sep 3, 2017, 8:40 AM IST
ಉಡುಪಿ: ಮಣಿಪಾಲ ವಿಶ್ವ ವಿದ್ಯಾಲಯ ವಿಜ್ಞಾನಿಗಳ ತಂಡವು ಮಿದುಳಿನ ಕ್ಯಾನ್ಸರಿಗೆ ನ್ಯಾನೊ ತಂತ್ರಜ್ಞಾನ ಆಧಾರಿತ ಔಷಧೀಯ ಚಿಕಿತ್ಸೆಯ ಆವಿಷ್ಕಾರ ಮಾಡಿದೆ.
ಮಣಿಪಾಲದ ಸ್ಕೂಲ್ ಆಫ್ ಲೈಫ್ ಸೈನ್ಸಸ್‌ನ ಡಿಪಾರ್ಟ್ ಮೆಂಟ್ ಆಫ್ರೆàಡಿಯೇಶನ್ ಬಯಾಲಜಿ, ಟಾಕ್ಸಿಕಾಲೊಜಿ ವಿಭಾಗದ ಪ್ರಾಧ್ಯಾಪಕ ಡಾ| ಬಿ.ಎಸ್. ಸತೀಶ್ ರಾವ್ ಅವರ ನೇತೃತ್ವದಲ್ಲಿ ಡಾಕ್ಟರೇಟ್ ವಿದ್ಯಾರ್ಥಿನಿ ಡಾ| ಸುಮಾ ಪ್ರಭು, ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸೂಟಿಕಲ್ ಸೈನ್ಸ್‌ನ ಡಾ| ಎನ್. ಉಡುಪ, ಡಾ| ಶ್ರೀನಿವಾಸ ಮುತಾಲಿಕ್, ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಮಹಾ ವಿದ್ಯಾಲಯದ ಡಾ| ಶಾರದಾ ರೈ ಮತ್ತು ಮುಂಬಯಿಯ ಟಾಟಾ ಮೆಮೋರಿಯಲ್ಸೆಂಟರ್ನ್ ಅಡ್ವಾನ್ಸ್ ಡೆಂಟರ್ಫಾಟ್ರೀಟೆ¾ಂಟ್, ರಿಸರ್ಚ್ ಆ್ಯಂಡ್ ಎಜುಕೇಶನ್ ವಿಭಾಗದ ಡಾ| ಜಯಂತ್ ಶಾಸಿŒ ಗೋಡಾ, ಡಾ| ಪ್ರದೀಪ್ ಚೌಧರಿ ಮತ್ತು ಭವಾನಿ ಶಂಕರ್ ಮೊಹಾಂತಿ ಅವ ರನ್ನು ಒಳಗೊಂಡ ತಂಡವು ನ್ಯಾನೋ ಮೆಡಿಸಿನ್ ಕ್ಷೇತ್ರದಲ್ಲಿ ಆಸಕ್ತಿದಾಯಕ ಸಂಶೋಧನೆಯನ್ನು ನಡೆಸಿದೆ.
ಈ ತಂಡವು ಮೆದುಳಿನ ಕ್ಯಾನ್ಸರ್ ಗೆಡ್ಡೆಯನ್ನು ಗುರಿಯಾಗಿಸಿ ಪ್ರತಿ ರೋಧಕ ಟೆಮೊಜೋಲಾಮೈಡ್ ಔಷಧವನ್ನು ಸಾಗಿಸುವ ಬಹು ಕ್ರಿಯಾತ್ಮಕ ನ್ಯಾನೋ ಕಾಂಪಾಸಿಟ್ ಅನ್ನು ವಿನ್ಯಾಸಗೊಳಿಸಿದೆ. ಈ ಸೂಪರ್ ಪ್ಯಾರಾಮ್ಯಾಗ್ನೆಟಿಕ್ ಐರನ್ ಆಕ್ಸೆ„ಡ್ ನ್ಯಾನೊಪಾರ್ಟಿಕಲ್ಸ್ ಅನ್ನು “ಟ್ರಾನ್ಸ್‌ಫೆರಿನ್’ ಪ್ರೋಟೀನ್‌ನಂತಹ ಟ್ಯಾಗಿಂಗ್ ಲಿಗಂಡ್ ಮೂಲಕ ಕಾರ್ಯಗತಗೊಳಿಸಲಾಯಿತು.
ಈ ಟ್ರಾನ್ಸ್‌ಫೆರಿನ್ ಮಿದುಳಿನ ರಕ್ತದ ತಡೆಗೋಡೆಯನ್ನು ಸರಾಗ ವಾಗಿ ದಾಟಲು ಸಹಾಯ ಮಾಡು ತ್ತದೆ. ಇನ್ನೊಂದು ಪ್ರೋಟೀನ್ “ನೆಸ್ಟಿನ್’ ಕ್ಯಾನ್ಸರಿನ ಜೀವಕೋಶಗಳಿಗೆ ಔಷಧವನ್ನು ಗುರಿ ತಲುಪಿಸ ಬಲ್ಲುದಾಗಿದೆ. ಈ ನ್ಯಾನೋ ಆಧಾರಿತ ತಂತ್ರಜ್ಞಾನವು ಮಿದುಳಿನ ತಡೆಗೋಡೆಗಳನ್ನು ಸುಲಭವಾಗಿ ದಾಟಲು ಸಹಾಯ ಮಾಡಿ ಕ್ಯಾನ್ಸರ್ ಗೆಡ್ಡೆಯ ಜೀವಕೋಶಗಳನ್ನು ಕೇಂದ್ರೀಕರಿಸಿ ನಿರ್ಜೀವ ಗೊಳಿಸಬಲ್ಲುದು. ಸುತ್ತುವರಿದಿರುವ ಇತರ ಆರೋಗ್ಯಕರ ಅಂಗಾಂಶಗಳಿಗೆ ಯಾವುದೇ ಹಾನಿಯನ್ನು ಉಂಟು ಮಾಡಲಾರದು ಎಂದು ಸ್ಪೆಕ್ಟ್ ಸಿಟಿಯ ವಿಶ್ಲೇಷಣೆಯಲ್ಲಿ ದೃಢೀಕರಿಸಲಾಗಿದೆ. ಈ ಸಂಶೋಧನೆಯನ್ನು ಇಲಿಗಳ ಮೇಲೆ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ.
ಈ ಪುರಾವೆ ಮತ್ತು ತಣ್ತೀ ಸಂಶೋಧನೆಯನ್ನು ಇಂಗ್ಲಂಡಿನ ಪ್ರತಿಷ್ಠಿತ ಜರ್ನಲ್ ನ್ಯಾನೋಸ್ಕೇಲ್‌ನ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. ಈ ಸಂಶೋಧನಾ ಕಾರ್ಯಕ್ಕೆ ಡಾ| ಬಿ.ಎಸ್. ಸತೀಶ್ ರಾವ್ ಅವರ ನೇತೃತ್ವದಲ್ಲಿ ಡಾ| ಸುಮಾ ಪ್ರಭು ಅವರಿಗೆ ಒಂದು ರಚನಾತ್ಮಕ ಪಿಎಚ್‌ಡಿ ಫೆಲೋಷಿಪ್ ರೂಪದಲ್ಲಿ ಮಣಿಪಾಲ ಸ್ಕೂಲ್ ಆಫ್ ಲೈಫ್ ಸೈನ್ಸಸ್ ಮತ್ತು ಮಣಿಪಾಲ ವಿಶ್ವವಿದ್ಯಾನಿಲಯವು ಆರ್ಥಿಕ ಬಲವನ್ನು ಒದಗಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi: ರೈಲು ಬಡಿದು ವ್ಯಕ್ತಿ ಸಾವು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.