“ನರ್ಮ್ ಬಸ್‌ಗಳ ಪರವಾನಿಗೆ ರದ್ದುಗೊಳಿಸಿದರೆ ಬೃಹತ್ ಹೋರಾಟ’
Team Udayavani, Jul 8, 2017, 3:25 AM IST
ಪಡುಬಿದ್ರಿ: ಉಡುಪಿ ನಗರ ಹಾಗೂ ಗ್ರಾಮೀಣಾ ಪ್ರದೇಶದಲ್ಲಿ ಸಂಚರಿಸುವ ಕೆ.ಎಸ್.ಆರ್.ಟಿ.ಸಿ (ನರ್ಮ್) ಬಸ್‌ಗಳ ಪರವಾನಿಗೆರದ್ದುಗೊಳಿಸಿದಲ್ಲಿ ಅದರ ವಿರುದ್ಧ ಬೃಹತ್ ಹೋರಾಟವನ್ನು ಸಂಘಟಿಸಲಾಗುವುದೆಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್ ಎಚ್ಚರಿಸಿದ್ದಾರೆ.
ಈ ಬಸ್ಸುಗಳಿಗೆ ಪರವಾನಿಗೆಗಳನ್ನು ಸಾರ್ವಜನಿಕರ ಹಿತಾಸಕ್ತಿಗೋಸ್ಕರ ನೀಡಲಾಗಿದೆ. ಖಾಸಗಿ ಬಸ್ ಮಾಲಕರ ಸಂಘವು ಮಾನ್ಯ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ತಡೆ ಆದೇಶ ತಂದಿರಬಹುದು. ಈ ಬಗ್ಗೆ ನ್ಯಾಯಾಲಯಕ್ಕೆ ಸರಕಾರ ಸೂಕ್ತ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೆ ಸರಕಾರಿ ಬಸ್ ಸೇವೆಗಳನ್ನು ಕಡಿತಗೊಳಿಸಬಾರದು. ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳುವಂತೆ ಕೆ. ಎಸ್. ಆರ್. ಟಿ. ಸಿ. ನಿಗಮದ ಅಧ್ಯಕ್ಷ ಗೋಪಾಲ ಪೂಜಾರಿಯವನ್ನು ವಿಶ್ವಾಸ್ ವಿ.ಅಮೀನ್ ಒತ್ತಾಯಿಸಿದ್ದಾರೆ.
ಸರಕಾರಿ – ಖಾಸಗಿ
ಸೇವೆ ಮುಂದುವರಿಯಲಿ
ನಮ್ಮ ಜಿಲ್ಲೆಯಲ್ಲಿ ಆನೇಕ ವರ್ಷಗಳಿಂದ ಖಾಸಗಿ ಬಸ್‌ಗಳ ಸೇವೆ ಭಾಗ್ಯ ಜನತೆಗೆ ದೊರೆತಿದೆ.ಇದು ಮುಂದುವರಿಯಲಿ. ಇದಕ್ಕೆ ನಮ್ಮ ವಿರೋಧ ಇಲ್ಲ. ಇದು ಪೈಪೋಟಿಯ ಯುಗವಾಗಿದ್ದು ಖಾಸಗಿ ಬಸ್ಸಿನವರು ಸರಕಾರಿ ಬಸ್ಸುಗಿಂತ ಇನ್ನಷ್ಟು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡುವತ್ತ ಗಮನಹರಿಸಲಿ. ಅದರೆ ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ಅಂಗವಿಕಲರ ಸಹಿತ ಹಲವಾರು ಸರಕಾರಿ ಸೌಲಭ್ಯಗಳನ್ನು ಒದಗಿಸುವ ಸದುದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತ್ರತ್ವದ ಕಾಂಗ್ರೆಸ್ ಸರಕಾರ ಬಡವರ ಪರವಾಗಿ ಈ ಯೋಜನೆ ಜಾರಿಗೆ ತಂದಿದೆ.
ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಅದ್ಯತೆ ನೀಡುತ್ತಿದೆ. ಪ್ರಯಾಣ ದರವನ್ನೂ ಬಹಳಷ್ಟು ಕಡಿತವಿರುವುದರಿಂದ ಜನ ಸಾಮಾನ್ಯರಿಗೆ ಹೆಚ್ಚಿನ ಅನುಕೂಲತೆಗಳಿರುವುದರಿಂದ ನರ್ಮ್ ಬಸ್‌ಗಳ ಸೇವೆಯನ್ನು ಸ್ಥಗಿತಗೊಳಿಸಲು ಅವಕಾಶ ನೀಡಬಾರದೆಂದು ವಿಶ್ವಾಸ್ ತಿಳಿಸಿದ್ದಾರೆ.
ಉಸ್ತುವರಿ ಸಚಿವರ ದಿಟ್ಟ ನಿರ್ಧಾರ
ಉಡುಪಿ ಜಿಲ್ಲಾ ಉಸ್ತುವರಿ ಸಚಿವ ಪ್ರಮೋದ್ ಮದ್ವರಾಜ್ ಅವರು ಖಾಸಗಿ ಬಸ್ಸು ಮಾಲಕರ ಯಾವುದೇ ಲಾಭಿ ಮಣಿಯದೆ ಉಡುಪಿ ಜಿಲ್ಲಾಯಾದ್ಯಂತ ನರ್ಮ್ ಬಸ್ಸುಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು ಜನಪರವಾದಂತಹ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದಾರೆ. ಖಾಸಗಿ ಬಸ್ ಮಾಲಕರು ಸರಕಾರಿ ಬಸ್ಸುಗಳ ಒಡಾಟವನ್ನು ಬಲಾತ್ಕಾರದಿಂದ ತಡೆಯಲು ಮುಂದಾದರೆ ಜಿಲ್ಲಾಯಾದ್ಯಂತ ಯುವಕರನ್ನು, ವಿದ್ಯಾರ್ಥಿ ಸಂಘಟನೆ ಗಳನ್ನು ಒಳಗೊಂಡಂತೆ ನ್ಯಾಯೋಜಿತ ಹೋರಾಟ ನಡೆಸುವುದು ಅನಿವಾರ್ಯ ವಾಗಬಹುದೆಂದು ವಿಶ್ವಾಸ್ ವಿ.ಅಮೀನ್ ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.