ಹೇರೂರಿನಲ್ಲಿ ಗುಂಡಿಗಳಾದರೆ ಬ್ರಹ್ಮಾವರ ಜಂಕ್ಷನ್‌ನಲ್ಲಿ ಗೊಂದಲಗಳ ಸರಮಾಲೆ!
ಸಾರ್ವಜನಿಕರ ಬೇಡಿಕೆಗಳಿಗೆ ಕಿವಿಗೊಡದ ಹೆದ್ದಾರಿ ಇಲಾಖೆ
Team Udayavani, Sep 24, 2019, 5:00 AM IST
ಉಡುಪಿ: ಹೊಂಡಗಳಲ್ಲಿರುವ ವೈವಿಧ್ಯವನ್ನು ನೋಡಲು ಸಂತೆಕಟ್ಟೆಯಿಂದ ಮುಂದಕ್ಕೆ ಅದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೇರೂರಿಗೆ ಬರಬೇಕು. ಅಲ್ಲಿಗೆ ಬರುವಷ್ಟರಲ್ಲೇ ಒಂದಿಷ್ಟು ಹೊಂಡಗಳು ಸಿಗುತ್ತವೆ. ಉದಾಹರಣೆಗೆ, ಸಂತೆಕಟ್ಟೆಯಿಂದ 500 ಮೀಟರ್ ದಾಟಿದ ಕೂಡಲೇ ಸೇತುವೆಯ ಮೊದಲೇ ಡಾಮರು ಎಲ್ಲ ಎದ್ದು ಹೋಗಿ ಗುಂಡಿ ಬಿದ್ದದ್ದು ಕಾಣುತ್ತದೆ. ಹಾಗೆಯೇ ಮತ್ತೂಂದು ಸೇತುವೆ ದಾಟಿದರೆ ಹೇರೂರು ಸಿಗುತ್ತದೆ. ಅಷ್ಟರಲ್ಲೇ ಗುಂಡಿಗಳ ದರ್ಶನ ಆರಂಭವಾಗುತ್ತದೆ.
ಸೇತುವೆ ದಾಟಿದ ಕೂಡಲೇ ಸಿಗುವ ಗುಂಡಿಗಳು ಹೇಗಿವೆಯೆಂದರೆ, ಯಾವುದೇ ವಾಹನಗಳಿದ್ದರೂ ಅಲ್ಲಿ ನಿಧಾನಗೊಳಿಸಲೇಬೇಕು. ಇತ್ತೀಚೆಗಷ್ಟೇ ಲೋಡು ತುಂಬಿಕೊಂಡಿದ್ದ ಲಾರಿಯೊಂದು ಆಯ ತಪ್ಪಿ ಬೀಳುವ ಸ್ಥಿತಿಯಲ್ಲಿತ್ತು. ಮೂರು ದಿನ ಲಾರಿ ಅಲ್ಲೇ. ಆಗಲಂತೂ ಗುಂಡಿಯನ್ನು ತಪ್ಪಿಸುವಂತೆಯೇ ಇಲ್ಲ. ಎಲ್ಲ ವಾಹನಗಳೂ ಗುಂಡಿ ಹಾದುಕೊಂಡೇ ಹೋಗಬೇಕಿತ್ತು. ಸೋಮವಾರ (ಸೆ. 23) ದಂದು ತೇಪೆ ಕಾಮಗಾರಿ ಆರಂಭವಾಗಿತ್ತು. ಆ ಗುಂಡಿಗಳು ಅಲ್ಲಷ್ಟೇ ಇಲ್ಲ. ಅನಂತರ ಎಸ್‌ಎಂಎಸ್ ವರೆಗೂ ಗುಂಡಿಗಳೂ ಸಿಕ್ಕೇ ಸಿಗುತ್ತವೆ. ಅವುಗಳನ್ನು ದಾಟಿಕೊಂಡೇ ಸಾಗಬೇಕು. ಮಾನಸ ಹೊಟೇಲ್ ಎದುರು ಗುಂಡಿಗಳನ್ನು ತಪ್ಪಿಸಲು ಪ್ರಯತ್ನ ಪಡುವ ವಾಹನ ಸವಾರರು ಪಲ್ಟಿ ಹೊಡೆಯುವುದಂತೂ ಖಚಿತ. ಹಾಗಿದ್ದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಾಗಲೀ ಅಥವಾ ಕಾಮಗಾರಿ ನಿರ್ವಹಿಸಿದ ಕಂಪೆನಿಯವರಾಗಲೀ ನೋಡಿದ್ದೇ ಕಡಿಮೆ. ಇಲ್ಲಿಯೂ ಅಪಘಾತದ ಸಾಧ್ಯತೆ ದಿನೇದಿನೇ ಹೆಚ್ಚುತ್ತಿದೆ.
ಹೇರೂರು ಗುಂಡಿಗಳನ್ನು ದಾಟಿ ನೀವು ತಲುಪುವುದು ಬ್ರಹ್ಮಾವರ ಜಂಕ್ಷನ್ ಅನ್ನು. ಇಲ್ಲಿ ಅತ್ತ ಇತ್ತ ನೋಡಿಕೊಂಡೇ ಸಾಗಬೇಕು. ನಾಲ್ಕೂ ಬದಿಯಿಂದ ಮತ್ತು ಎರಡೂ ಬದಿಯ ಸರ್ವಿಸ್ ರಸ್ತೆಯಿಂದ ಬರುವ ಹಾಗೂ ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳು ಸಾಗುವುದಕ್ಕೆ ಸರಿಯಾದ ವ್ಯವಸ್ಥೆ ಇಲ್ಲ. ಪೇಟೆ ಮುಗಿದ ಬಳಿಕ ಫ್ಲೈಓವರ್ ನಿರ್ಮಿಸಲಾಗಿದೆ. ಇದರಿಂದ ಟ್ರಾಫಿಕ್ ಒತ್ತಡ, ಅಪಘಾತದ ಸಾಧ್ಯತೆ ತಪ್ಪಲಿಲ್ಲ. ಪೇಟೆಭಾಗದಲ್ಲಿ ಫ್ಲೈ ಓವರ್ ನಿರ್ಮಿಸುವಂತೆ ಸಾರ್ವಜನಿಕರು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಪರಿಣಾಮವಾಗಿ ವಾಹನ ಚಾಲಕರು, ಸಾರ್ವಜನಿಕರಂತೂ ನಿತ್ಯ ಸಂಚಾರ ಸಂಕಟ ಅನುಭವಿಸುವಂತಾಗಿದೆ.
ಜನರ ಬೇಡಿಕೆಯನ್ನು ಕಣ್ಣೆತ್ತಿಯೂ ನೋಡದ ಹೆದ್ದಾರಿ ಇಲಾಖೆ ಫ್ಲೈ ಓವರ್ ನಿರ್ಮಿಸುವ ಗೋಜಿಗೆ ಹೋಗಿಲ್ಲ. ಉಡುಪಿ ಕಡೆಯಿಂದ ಕುಂದಾಪುರದತ್ತ ಹೋಗುವ ಬಸ್‌ಗಳು ಕೂಡ ಹೆದ್ದಾರಿ ದಾಟಿ ಬ್ರಹ್ಮಾವರ ಬಸ್ ನಿಲ್ದಾಣಕ್ಕೆ ಬಂದು ಹೋಗುವುದರಿಂದ ಇಲ್ಲಿ ಭಾರೀ ಸಮಸ್ಯೆ ಉಂಟಾಗುತ್ತಿದೆ. ಮುಂಬಯಿ, ಪುಣೆ, ಬೆಳಗಾವಿ, ಹುಬ್ಬಳ್ಳಿ ಮೊದಲಾದೆಡೆ ಹೋಗುವ ಬಸ್‌ಗಳು ಕೂಡ ಸರ್ವೀಸ್ ರಸ್ತೆಯ ಬದಲು ಹೆದ್ದಾರಿಯಲ್ಲೇ ನಿಲ್ಲುವುದರಿಂದ ಸಮಸ್ಯೆ ಉಲ್ಬಣಿಸಿದೆ. ಆದರೂ ಯಾರೂ ಗಮನಿಸುತ್ತಿಲ್ಲ ಎಂಬುದು ಸಾರ್ವಜನಿಕರ ಬೇಸರದ ಮಾತುಗಳು.
ಹೊಂಡ ನೋಡಲು ಹೇರೂರಿಗೆ ಬನ್ನಿ
ಉಡುಪಿ: ಅಂಬಾಗಿಲು ಜಂಕ್ಷನ್‌ನಿಂದ ಪಾರಾಗಿ ಬಂದೆವೆಂದುಕೊಳ್ಳೋಣ. ಅನತಿ ದೂರದಲ್ಲೇ ಇರುವ ಸಂತೆಕಟ್ಟೆ ಸರ್ಕಲ್ ಬ್ಯಾರಿಕೇಡ್‌ಗಳಿಂದಲೇ ನಿಮ್ಮನ್ನು ಸ್ವಾಗತಿಸುತ್ತದೆ. ಆ ಬ್ಯಾರಿಕೇಡ್ ಮಧ್ಯೆ ಕಸರತ್ತು ಮಾಡಿಕೊಂಡು ದಾಟುವಾಗ ಎಚ್ಚರ ತಪ್ಪಿದರೆ ಮತ್ತೂಂದು ಬದಿಯಿಂದ ವಾಹನ ಬಂದು ಢಿಕ್ಕಿ ಹೊಡೆಯುವ ಸಂಭವವೇ ಹೆಚ್ಚು.
ಯಾಕೆಂದರೆ ಇಲ್ಲಿ ಹೆದ್ದಾರಿಯ ಬದಿಯಲ್ಲೇ ಎರಡೂ ಬದಿಯಿಂದ (ಬಲ ಮತ್ತು ಎಡ) ಸರ್ವಿಸ್ ರಸ್ತೆಯಲ್ಲಿ ವಾಹನಗಳು ಬಂದು ಇದೇ ಸರ್ಕಲ್ಲಿನಲ್ಲಿ ಸೇರುತ್ತವೆ. ಕುಂದಾಪುರದ ಕಡೆಯಿಂದ ಬರುವ ವಾಹನಗಳು ಒಂದೆಡೆಯಾದರೆ, ಕೆಮ್ಮಣ್ಣು ಮತ್ತಿತರ ಕಡೆಯಿಂದ ಉಡುಪಿ ಕಡೆಗೆ ಬರುವ ವಾಹನಗಳೂ ಸಂಧಿಸುವುದು ಇಲ್ಲಿಯೇ. ಇವೆಲ್ಲದರ ಕಾರಣದಿಂದ ಈ ಸರ್ಕಲ್ ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ಆಗಾಗ್ಗೆ ಆಗುವ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರು ಕಾಣ ಸಿಗುವುದು ಕಡಿಮೆ.
ರವಿವಾರದ ಸಂತೆಯ ದಿನದಂದು ಹೇಳುವಂತಿಲ್ಲ. ಸರ್ವಿಸ್ ರಸ್ತೆ ಎರಡೂ ಸೇರಿದಂತೆ ಹೆದ್ದಾರಿಯಲ್ಲೂ ಬೆಳಗಿನ ಹೊತ್ತಿನಲ್ಲಿ ವಾಹನಗಳು ನಿಂತಿರುತ್ತವೆ. ಅದರ ಮಧ್ಯೆ ಹೆದ್ದಾರಿಯಲ್ಲಿ ಬರುವ ವಾಹನಗಳು ಜಾಗ ಮಾಡಿಕೊಂಡು ಸಾಗಬೇಕು. ಒಮ್ಮೊಮ್ಮೆ ಪೊಲೀಸರು ಇರುತ್ತಾರೆ. ಬಹಳಷ್ಟು ಬಾರಿ ಯಾರೂ ಇರುವುದಿಲ್ಲ. ಸದಾ ವಾಹನಗಳ ಒತ್ತಡದಿಂದ ಬಳಲುತ್ತಿರುವ ಸಂತೆಕಟ್ಟೆ ಸರ್ಕಲ್‌ಗೆ ಯಾವ ರೀತಿಯ ಪರ್ಯಾಯ ವ್ಯವಸ್ಥೆ ಮಾಡಬಹುದೆಂಬುದನ್ನು ಕಾಮಗಾರಿ ನಿರ್ವಹಿಸಿದ ಕಂಪೆನಿ ಗಮನಿಸಿಯೇ ಇಲ್ಲ.
ಕಲ್ಯಾಣಪುರ ಸಂತೆಕಟ್ಟೆ ಸೇತುವೆಯಿಂದ ತೆಕ್ಕಟ್ಟೆ ವರೆಗೆ ಸಂಭವಿಸಿರುವ ಅಪಘಾತಗಳ ವಿವರ
ಉದಯವಾಣಿ: ವಾಸ್ತವ ವರದಿ: ಉಡುಪಿ ಟೀಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.