ರಾಷ್ಟ್ರೀಯ ಹೆದ್ದಾರಿ,ಅಪಘಾತದ ರಹದಾರಿ 


Team Udayavani, May 11, 2018, 6:40 AM IST

0705kota5e.jpg

ಕೋಟ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಬಳಿಕ ಅಪಘಾತಗಳ ಸಂಖ್ಯೆ ಹೆಚ್ಚಿದ್ದು, ಸಾವಿನ ರಹದಾರಿಯಾಗಿದೆ. 

2016 ಜನವರಿಯಿಂದ, 2018 ಮಾರ್ಚ್‌ 30ರ ತನಕ ಕೋಟ ಪೊಲೀಸ್‌ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸಿವೆ. ಇದರಲ್ಲಿ ಮಾಬುಕಳದಿಂದ-ತೆಕ್ಕಟ್ಟೆ ಕೊರವಾಡಿ ತನಕ ಒಟ್ಟು 51 ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದು ಜಿಲ್ಲೆಯಲ್ಲೇ ದಾಖಲಾದ ಅತಿ ದೊಡ್ಡ ಸಾವಿನ ಸಂಖ್ಯೆಯಾಗಿದೆ.

ಪ್ರಮುಖ ಅಪಘಾತ ವಲಯಗಳು 
ಮಾಬುಕಳ,  ಸಾಸ್ತಾನ ಬಸ್‌ ನಿಲ್ದಾಣ, ಗುಂಡ್ಮಿ ಬಸ್‌ ನಿಲ್ದಾಣ ಹಾಗೂ ಸಾಲಿಗ್ರಾಮದ ಡಿವೈಡರ್‌, ಸಾಲಿಗ್ರಾಮ ಬಸ್ಸು ನಿಲ್ದಾಣದ ಆಸು-ಪಾಸು, ಕೋಟ ಮೂಕೈ ವೃತ್ತ, ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನದ ಎದುರು, ಕೋಟ ಡಿವೈಡರ್‌,  ಫ್ಲೈಓವರ್‌ ಅಂತ್ಯದಿಂದ ಮಣೂರು, ಬಾಳೆಬೆಟ್ಟು, ಕರಿಕಲ್‌ಕಟ್ಟೆ, ತೆಕ್ಕಟ್ಟೆ ಪೇಟೆ ಆಸುಪಾಸು ಖಾಯಂ ಅಪಘಾತ ತಾಣಗಳಾಗಿದೆ.

ಸರ್ವೀಸ್‌ ರಸ್ತೆಯ ಕೊರತೆ  
ಸಾಲಿಗ್ರಾಮ ಬಸ್ಸು ನಿಲ್ದಾಣ ಹಾಗೂ ಡಿವೈಡರ್‌ ಸಮೀಪ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಕಾರ್ಕಡ ಗ್ರಾಮಾಂತರ ರಸ್ತೆಯಿಂದ ಮುಖ್ಯ ಪೇಟೆಗೆ ಬರುವವರಿಗೆ ಸರ್ವೀಸ್‌ ರಸ್ತೆ ಇಲ್ಲದಿರುವುದರಿಂದ ವಿರುದ್ಧ ದಿಕ್ಕಿನಲ್ಲೇ ಸಂಚರಿಸುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಸಾಸ್ತಾನದಲ್ಲಿ  ಕೂಡ ಇದೇ ಸಮಸ್ಯೆ ಇದೆ.

ಡಿವೈಡರ್‌ ಸಮೀಪ ಬ್ಯಾರಿಕೇಡ್‌ ಅಳವಡಿಕೆ, ವಿರುದ್ಧ ದಿಕ್ಕಿನಲ್ಲಿ ಸಂಚರಿಸುವವರಿಗೆ ದಂಡ ವಿಧಿಸುವುದು ಮುಂತಾದ ಕ್ರಮಗಳ  ಮೂಲಕ ಅಪಘಾತ ತಡೆಗೆ ಪೊಲೀಸ್‌ ಇಲಾಖೆ ಮುಂದಾಗಿದೆ. ಅದೇ ರೀತಿ  ಅಗತ್ಯ ಕಡೆಗಳಲ್ಲಿ ಸರ್ವಿಸ್‌ ರಸ್ತೆ ನಿರ್ಮಾಣ, ಅಸಮರ್ಪಕ ಡಿವೈಡರ್‌ಗಳ ಸ್ಥಳಾಂತರ ಮುಂತಾದ ಕ್ರಮಗಳನ್ನು ಸಂಬಂಧಪಟ್ಟ ಹೆದ್ದಾರಿ ಇಲಾಖೆ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಬೇಡಿಕೆಯಾಗಿದೆ.

ಕೋಟಕ್ಕೆ ಪ್ರಥಮ ಸ್ಥಾನ  
2016ರಲ್ಲಿ ಕೋಟ ಠಾಣೆ ವ್ಯಾಪ್ತಿಯಲ್ಲಿ 75 ಅಪಘಾತಗಳು ಸಂಭವಿಸಿದ್ದು  22ಮಂದಿ ಸಾವನ್ನಪ್ಪಿದ್ದಾರೆ. ಆ ಸಾಲಿನಲ್ಲಿ ಕಾಪುವಿನಲ್ಲಿ 64 ಅಪಘಾತಗಳು ನಡೆದು 24ಮಂದಿ ಸಾವನ್ನಪ್ಪಿದ್ದಾರೆ.  2017ರಲ್ಲಿ ಕೋಟದಲ್ಲಿ  75 ಅಪಘಾತಗಳು ಸಂಭವಿಸಿದ್ದು  26 ಮಂದಿ ಸಾವನ್ನಪ್ಪಿದ್ದಾರೆ. ಕಾಪು ಎರಡನೇ ಸ್ಥಾನದಲ್ಲಿದ್ದು 63 ಅಪಘಾತಗಳು ನಡೆದು 17ಮಂದಿ ಸತ್ತಿದ್ದಾರೆ. 2018 ಮಾ.30ರ ವರೆಗೆ ಮೂರೇ ತಿಂಗಳಲ್ಲಿ  ಕೋಟದಲ್ಲಿ 24 ಅಪಘಾತಗಳು ಸಂಭವಿಸಿದ್ದು 3 ಮಂದಿ ಸತ್ತಿದ್ದಾರೆ.  ಹೀಗೆ 2016ರಿಂದ- 2018 ಮಾಚ್‌ ವರೆಗೆ ಕೋಟದಲ್ಲಿ 174 ಅಪಘಾತಗಳು ನಡೆದು 51 ಮಂದಿ 
ಸಾವನ್ನಪಿದ್ದಾರೆ, 154 ಮಂದಿ ಗಾಯಗೊಂಡಿದ್ದಾರೆ.  ಎರಡನೇ ಸ್ಥಾನದಲ್ಲಿ ಕಾಪು ಇದ್ದು   ಇಲ್ಲಿ 138 ಅಪಘಾತಗಳು ನಡೆದಿದ್ದು  44 ಮಂದಿ ಸಾವನ್ನಪ್ಪಿದ್ದಾರೆ.  ಇದೆಲ್ಲವೂ  ಕೇಸು ದಾಖಲಾದ ಪ್ರಕರಣಗಳಾದರೆ ರಾಜಿಯಲ್ಲಿ ಇತ್ಯರ್ಥಗೊಂಡವುಗಳ ಸಂಖ್ಯೆ ಬಹಳಷ್ಟಿದೆ.

ವರದಿ ನೀಡಿದ್ದೇವೆ
ಪೊಲೀಸ್‌ ಇಲಾಖೆ ಹಾಗೂ ಮಣಿಪಾಲ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ವತಿಯಿಂದ ತೆಕ್ಕಟ್ಟೆಯಿಂದ  ಪಡುಬಿದ್ರೆಯ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಅಪಾಯಕಾರಿ ಜಂಕ್ಷನ್‌ಗಳ ಕುರಿತು ಸರ್ವೆ ನಡೆಸಿ ವರದಿ ಸಿದ್ಧಪಡಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಒಪ್ಪಿಸಿದ್ದೇವೆ. ಪ್ರಸ್ತಾವಿತ ಸುಧಾರಣೆಗಳನ್ನು  ಕೈಗೊಂಡರೆ ಅಪಘಾತ ತಡೆ ಸಾಧ್ಯವಿದೆ. ಪೊಲೀಸ್‌ ಇಲಾಖೆಯಿಂದ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ.
– ಲಕ್ಷ್ಮಣ ನಿಂಬರ್ಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಉಡುಪಿ

ಅಸಮರ್ಪಕ ಕಾಮಗಾರಿ 
ಅಗತ್ಯ ಕಡೆಗಳಲ್ಲಿ ಸರ್ವಿಸ್‌ ರಸ್ತೆ ನಿರ್ಮಿಸದಿರುವುದು, ಪರಿಹಾರ ನೀಡಿದ ಜಾಗವನ್ನು ಹೆದ್ದಾರಿ ಇಲಾಖೆ ವಶಪಡಿಸಿಕೊಳ್ಳದಿರುವುದು, ಅಸಮರ್ಪಕ ಡಿವೈಡರ್‌ಗಳು ಅಪಘಾತ ಹೆಚ್ಚಳಕ್ಕೆ ಕಾರಣವಾಗಿವೆ. ಸಂಬಂಧಪಟ್ಟ ಇಲಾಖೆ ಈ ನ್ಯೂನತೆಗಳನ್ನು ಸರಿಪಡಿಸಬೇಕು. ಈ ಕುರಿತು ಕಾನೂನು ಹೋರಾಟದ ಸಿದ್ಧತೆಯಲ್ಲಿದ್ದೇವೆ.
– ಕೇಶವ ಆಚಾರ್ಯ ಕೋಟ,
ಅಧ್ಯಕ್ಷರು, ಜೇಸಿಐ ಸಾಸ್ತಾನ ವೈಬ್ರೆಂಟ್‌

– ರಾಜೇಶ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

puttige-6-

Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ

5

Udupi: ತಂಡಗಳ ನಡುವೆ ಹಲ್ಲೆ; ಪ್ರಕರಣ ದಾಖಲು

4

Malpe: ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ravi

Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್‌ ಭಟ್‌

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.