ಮಳೆಗಾಲಕ್ಕೂ ಮೊದಲೇ ಅಂದಗೆಟ್ಟ ರಾಷ್ಟ್ರೀಯ ಹೆದ್ದಾರಿ
Team Udayavani, May 21, 2018, 2:30 AM IST
ಕುಂದಾಪುರ: ಇನ್ನೂ ಮಳೆಗಾಲ ಅಧಿಕೃತವಾಗಿ ಆರಂಭವಾಗಿಲ್ಲ. ಆಗೊಂದು ಈಗೊಂದು ಮಳೆಯಾಗುತ್ತಿದೆ. ಅದರಲ್ಲೂ ದ.ಕ. ಜಿಲ್ಲೆಯಾದ್ಯಂತ ಅನೇಕ ಮಳೆ ಸುರಿದು ಉಡುಪಿಯಲ್ಲೂ ಒಂದಷ್ಟು ಮಳೆ ಸುರಿದ ಬಳಿಕ ಕೊನೆಯದಾಗಿ ಕುಂದಾಪುರದಲ್ಲಿ ಮಳೆರಾಯನ ಗುಡುಗಿನ ಸದ್ದು ಮಿಂಚಿನ ಆರ್ಭಟ ಆರಂಭವಾಗಿದೆ. ಹೀಗೆ ಬಂದ ಎರಡೋ ಮೂರೋ ಮಳೆಗೇ ಕುಂದಾಪುರದ ರಾಷ್ಟ್ರೀಯ ಹೆದ್ದಾರಿಯ ಪಕ್ಕ ನಡೆದಾಡುವುದು, ವಾಹನಗಳ ಓಡಾಟ ಕಷ್ಟವಾಗಿದೆ. ಮಳೆ ನೀರು ಸಂಗ್ರಹವಾಗಿದೆ.
ಸಮರ್ಪಕವಾದ ಚರಂಡಿಯಿಲ್ಲ
ಸಂಗಮ್‌ನಿಂದ ಆರಂಭವಾಗಿ ಬಸ್ರೂರು ಮೂರುಕೈ ವರೆಗೂ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಹೆದ್ದಾರಿಯ ಎರಡೂ ಭಾಗದಲ್ಲಿ ಚರಂಡಿ ವ್ಯವಸ್ಥೆಯಿಲ್ಲ. ಇದ್ದ ಚರಂಡಿಗಳೂ ಮುಚ್ಚಿ ಹೋಗಿವೆ. ಕಸಕಡ್ಡಿಗಳಿಂದ ತುಂಬಿದೆ. ಪರಿಣಾಮ ಮಳೆ ಬಂದಾಗ ಒಂದೋ ರಸ್ತೆಯಲ್ಲೇ ನೀರು ನಿಲ್ಲುತ್ತದೆ. ಇಲ್ಲದಿದ್ದರೆ ರಸ್ತೆಯ ಬದಿಯಲ್ಲೇ ನೀರು ಸಂಗ್ರಹವಾಗುತ್ತದೆ. ತತ್‌ಕ್ಷಣ ಹೆದ್ದಾರಿ ಪ್ರಾಧಿಕಾರದವರು ಚರಂಡಿ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರಿಗೆ ಸೂಚಿಸಬೇಕಿದೆ.
ತುರ್ತು ಗಮನಹರಿಸಿ
ಅಪೂರ್ಣವಾದ ಫ್ಲೈ ಓವರ್ ಕಾಮಗಾರಿಯಿಂದಾಗಿ ಸಾಕಷ್ಟು ಕಡೆ ಇಂತಹ ದುಃಸ್ಥಿತಿ ಕಂಡು ಬರುತ್ತಿದೆ. ಪೇಟೆಯಲ್ಲಿ ಹೆದ್ದಾರಿಯಲ್ಲಿ ಇಂತಹ ದುರವಸ್ಥೆ ಇರುವುದು ನಗರ ಸೌಂದರ್ಯಕ್ಕೂ ಮಾರಕವಾಗಿದೆ. ಆದ್ದರಿಂದ ತುರ್ತು ಗಮನ ಹರಿಸದಿದ್ದಲ್ಲಿ ರಸ್ತೆ ಬದಿ ಇನ್ನಷ್ಟು ಗಬ್ಬು ವಾತಾವರಣ ನಿಶ್ಚಯ. ಇದರ ಜತೆಗೆ ಚರಂಡಿಗಳಲ್ಲಿ ಕಸದ ರಾಶಿಯೂ ಇದೆ, ರಸ್ತೆ ಬದಿಯೂ ಕಸದ ರಾಶಿ ಕಂಡು ಬರುತ್ತಿದೆ. ಮಳೆಗಾಲಕ್ಕೆ ಮುನ್ನ ಇಂತಹ ಕಾಮಗಾರಿಗಳ ಕಡೆಗೆ ಗಮನ ಹರಿಸುವುದು ಒಳಿತು.
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.