ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಹಗಲುದರೋಡೆ: ಡಾ| ಶೆಟ್ಟಿ
Team Udayavani, Feb 26, 2017, 12:00 PM IST
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ ಟೋಲ್ ಸಂಗ್ರಹದ ಮೂಲಕ ಜಿಲ್ಲೆಯ ಜನತೆಯ ಹಗಲುದರೋಡೆ ಮಾಡಲಾಗುತ್ತಿದ್ದು, ರಾಜ್ಯ ಸರಕಾರಕ್ಕೆ ತಾವು ಜಿಲ್ಲಾಧಿಕಾರಿಯಾಗಿ ಸಮರ್ಪಕ ವರದಿ ನೀಡುವ ಮೂಲಕ ನ್ಯಾಯ ದೊರಕಿಸಿಕೊಡಿ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರಲ್ಲಿ ಮನವಿ ಮಾಡಿರುವುದಾಗಿ ಪಂಚಾಯತ್ ಪ್ರತಿನಿಧಿಗಳ ರಾಜ್ಯ ಒಕ್ಕೂಟದ ಉಪಾಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಹೆದ್ದಾರಿ ಕಾಮಗಾರಿ ಕುರಿತು ಪಿಡಬುಡಿ ಹಾಗೂ ಎನ್‌ಎಚ್‌ಎಐ ಜಂಟಿ ಸಮೀಕ್ಷಾ ವರದಿ ನೀಡಲು ಜಿಲ್ಲಾ ಉಸ್ತುವಾರಿ ಸಚಿವರಿದ್ದ ಸಭೆಯಲ್ಲಿ ಸೂಚಿಸ ಲಾಗಿತ್ತು. ಆದರೆ ಹಿಂದಿನ ಜಿಲ್ಲಾಧಿಕಾರಿ ಸೆ. 144 ಜಾರಿಗೊಳಿಸಿ ಟೋಲ್ ಸಂಗ್ರಹಕ್ಕೆ ಆದೇಶಿಸಿದ್ದರು. ಅದನ್ನೂ ನಾವು ವಿರೋಧಿಸಿದ್ದೆವು ಎಂದೂ ಡಾ| ಶೆಟ್ಟಿ ಜಿಲ್ಲಾಧಿಕಾರಿ ಅವರಲ್ಲಿ ವಿವರಿಸಿದ್ದಾರೆ.
ಒಂದಕ್ಕೊಂದು ತಾಳೆಯಾಗುತ್ತಿದ್ದಿಲ್ಲ
ಪಿಡಬುಡಿ ವರದಿಯಲ್ಲಿ ವಸ್ತುನಿಷ್ಠವಾಗಿ ಜಿಲ್ಲೆಯಲ್ಲಿನ ಹೆದ್ದಾರಿಯಲ್ಲಿ ಸಾಕಷ್ಟು ಕಾಮಗಾರಿಗಳು ನಡೆದಿಲ್ಲವೆಂಬ ಉಲ್ಲೇಖಗಳಿವೆ. ಹೆದ್ದಾರಿ ಪ್ರಾಧಿಕಾರದ ವರದಿ ನವಯುಗ ನಿರ್ಮಾಣ ಕಂಪೆನಿ ಪರವಾಗಿ ಏಕಪಕ್ಷೀಯ ವಾಗಿ ಇದೆ. ಆದುದರಿಂದ ಲೋಕೋಪಯೋಗಿ ಇಲಾಖೆ ಪರ ವರದಿಯಂತೆ ಸರಕಾರಕ್ಕೆ ವರದಿ ಸಲ್ಲಿಸಬೇಕಿದೆ. ಈ ವರದಿಯಲ್ಲಿ ಹೆದ್ದಾರಿ ಟೋಲ್ ಸಂಗ್ರಹ ಕೇರಳ ಮಾದರಿಯನ್ನು ಉಲ್ಲೇಖೀಸಬೇಕು. ಮುಂಬಯಿ, ಬೆಂಗಳೂರು ಮುಂತಾದೆಡೆ 30 ಕಿ.ಮೀ. ಅಂತರದಲ್ಲಿ ಟೋಲ್‌ಗಳಿದ್ದರೂ ಅಲ್ಲಿ ಏಕಮುಖ ಟೋಲ್ ನೀಡಿಕೆ ವ್ಯವಸ್ಥೆಯಿದೆ. ಒಂದರಲ್ಲಿ ಟೋಲ್ ನೀಡಿದ ಬಳಿಕ ಇನ್ನೊಂದು ಟೋಲ್‌ನಲ್ಲಿ ಆ ಚೀಟಿ ತೋರಿಸಿ ತೆರಳುವ ವ್ಯವಸ್ಥೆಯಿದೆ. ಅದನ್ನು ಇಲ್ಲಿ ಅನುಷ್ಠಾನಿಸುವಂತೆ ಮನವಿ ಮಾಡಲಾಗಿದೆ ಎದವರು ತಿಳಿಸಿದರು.
ಸ್ಥಳೀಯರಿಗೆ ಟೋಲ್ ಸಂಗ್ರಹದಲ್ಲಿ ವಿನಾಯಿತಿ ನೀಡಬೇಕು ಎಂದು ತಾವು ತಿಳಿಸಿರುವುದಾಗಿ ಅವರು ಹೇಳಿದ್ದಾರೆ. ಬಳಿಕ ತಮ್ಮ ನಿಯೋಗ ಸಂಸದೆ ಶೋಭಾ ಕರಂದ್ಲಾಜೆ ಅವರನ್ನೂ ಭೇಟಿಯಾಗಿ ಹೆದ್ದಾರಿ ಟೋಲ್ ವಿರೋಧಿ ನೀತಿ ಕುರಿತು ಚರ್ಚಿಸಿದೆ. ಸಂಸದೆ ಸೂಕ್ತವಾಗಿ ಸ್ಪಂದಿಸಿದ್ದಾರೆ. ಎಂದು ಡಾ| ಶೆಟ್ಟಿ ತಿಳಿಸಿದ್ದಾರೆ. ಕುಂದಾಪುರದ ಸಹಾಯಕ ಕಮಿಷನರ್ ಶಿಲ್ಪಾ ನಾಗ್, ಅಪರ ಜಿಲ್ಲಾಧಿಕಾರಿ ಜಿ. ಅನುರಾಧಾ, ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ, ಜಿಲ್ಲಾ ಉಪ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಕಾಪು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಸಾಸ್ತಾನ ಟೋಲ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಹೆಜಮಾಡಿಯ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಗುಲಾಂ ಮಹಮ್ಮದ್, ವಿಶ್ವಾಸ್ ಅಮೀನ್, ಜಿಲ್ಲಾ ಕಾರು ಚಾಲಕ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಕೋಟ್ಯಾನ್, ಕಾಪು ಪುರಸಭಾ ಸದಸ್ಯ ಇಮ್ರಾನ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.