ಉಡುಪಿ ತೃತೀಯ, ದ.ಕ. ಜಿಲ್ಲೆಗೆ ಚತುರ್ಥ ಸ್ಥಾನ !
ರಾಷ್ಟ್ರೀಯ ಮಹಿಳಾ ಆಯೋಗ: ಅತ್ಯಧಿಕ ದೌರ್ಜನ್ಯ ದೂರು
Team Udayavani, Nov 14, 2020, 1:32 AM IST
ಸಾಂದರ್ಭಿಕ ಚಿತ್ರ
ಉಡುಪಿ: ರಾಜ್ಯದಲ್ಲಿ ಕಳೆದ 9 ತಿಂಗಳಲ್ಲಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಲ್ಲಿಕೆಯಾದ ಮಹಿಳಾ ದೌರ್ಜನ್ಯ ಪ್ರಕರಣಗಳ ಜಿಲ್ಲಾವಾರು ವರದಿಯ ಪಟ್ಟಿಯಲ್ಲಿ ಉಡುಪಿ ಮೂರನೇ ಮತ್ತು ದ.ಕ. ನಾಲ್ಕನೇ ಸ್ಥಾನ ಪಡೆದುಕೊಳ್ಳುವ ಮೂಲಕ ಮಹಿಳಾ ದೌರ್ಜನ್ಯಅಧಿಕವಿರುವ ಜಿಲ್ಲೆಗಳೆಂದು ಗುರುತಿಸಿಕೊಂಡಿವೆ.
ಬೆಂಗಳೂರು ನಗರ ಮೊದಲ ಸ್ಥಾನ
2020ರ ಜನವರಿಯಿಂದ ಸೆಪ್ಟಂಬರ್ ಅಂತ್ಯದ ವರೆಗೆ ರಾಜ್ಯದಿಂದ ಆಯೋಗಕ್ಕೆ 360 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲಿ 224, ಬೆಂಗಳೂರು ಗ್ರಾಮಾಂತರ ಮತ್ತು ಬೆಳಗಾವಿಯಲ್ಲಿ ತಲಾ 18, ಉಡುಪಿ 14, ದ.ಕ. 9 ಪ್ರಕರಣಗಳು ದಾಖಲಾಗಿವೆ.
ಸೈಬರ್ ಕ್ರೈಂ ಪ್ರಕರಣ!
ಉಡುಪಿ ಹಾಗೂ ದ.ಕ. ಜಿಲ್ಲೆಯಿಂದ ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ 23 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಹೆಚ್ಚಿನವು ಸೈಬರ್ ಕ್ರೈಂ ಸಂಬಂಧಿತ ಮಹಿಳಾ ದೌರ್ಜನ್ಯ ಪ್ರಕರಣಗಳು ಹಾಗೂ ಕೌಟುಂಬಿಕ ದೌರ್ಜನ್ಯ ಪ್ರಕರಣಗಳಾಗಿವೆ. ಇದರಲ್ಲಿ ಲೀವಿಂಗ್ ಟುಗೆದರ್‌ನ ಸಂಬಂಧದಿಂದ ಬೇರೆಯಾದವರಿಂದ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಮಹಿಳೆಯರ ಖಾಸಗಿ ಫೋಟೋ, ವೀಡಿಯೋ ಹಾಗೂ ಇತರ ಮಾಹಿತಿ ಹಿಡಿದುಕೊಂಡು ಬ್ಲಾಕ್ ಮೇಲ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗುತ್ತಿರುವ ಬಗ್ಗೆಯೂ ದೂರುಗಳು ದಾಖಲಾಗಿವೆ.
ಯಾವ ಪ್ರಕರಣ ಎಷ್ಟು?
ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿ ರಾಜ್ಯದಲ್ಲಿ 106 ಪ್ರಕರಣ, ಗೌರವಯುತ ಬದುಕು ನಿರ್ವಹಿಸಲು ತಡೆ ನೀಡಿರುವ ಕುರಿತು 121 ಪ್ರಕರಣ, ಸೈಬರ್ ಕ್ರೈಂ 38, ವರದಕ್ಷಿಣೆ 18, ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳ 7, ಅತ್ಯಾಚಾರ ಹಾಗೂ ಅತ್ಯಾಚಾರ ಯತ್ನ 6 ಪ್ರಕರಣ ಸೇರಿದಂತೆ ವಿವಿಧ ವಿಭಾಗದಲ್ಲಿ ಒಟ್ಟು 360 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 350ರ ವಿಚಾರಣೆ ಮಾಡಿದ್ದು, 59ನ್ನು ಪೂರ್ಣಗೊಳಿಸಲಾಗಿದೆ. 10 ಪ್ರಕರಣಗಳು ಬಾಕಿ ಇವೆ. ಉಳಿದ 301 ಪ್ರಕರಣಗಳು ವಿಚಾರಣೆ ವಿವಿಧ ಹಂತದಲ್ಲಿವೆ.
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮಹಿಳೆಯರ ದೌರ್ಜನ್ಯಕ್ಕೆ ಸಂಬಂಧಿಸಿದ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಅದರ ಹೊರತಾಗಿ ಕೆಲವು ಕೌಟುಂಬಿಕ ಕಲಹಗಳೂ ಇವೆ. ದೂರು ಹಾಗೂ ವಿವರಗಳನ್ನು ಗೌಪ್ಯವಾಗಿ ಇಡಲಾಗುತ್ತದೆ.
– ಶ್ಯಾಮಲಾ ಕುಂದರ್, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.