ಪ್ರಕೃತಿ ಸಂರಕ್ಷಣೆಗೆ ಗಂಭೀರ ಚಿಂತನೆ ಅಗತ್ಯ: ಸತ್ಯನಾರಾಯಣ ಹೆಬ್ಟಾರ್
ಕೊಮೆ ಕೊರವಡಿ ವಿ.ಸ.ಸಂಘ : ಪರಿಸರ ದಿನಾಚರಣೆ; ಗಿಡ ವಿತರಣೆ
Team Udayavani, Jun 29, 2019, 5:11 AM IST
ತೆಕ್ಕಟ್ಟೆ : ನಮ್ಮ ಪೂರ್ವಜರಲ್ಲಿದ್ದ ನಿಸರ್ಗದ ಪರಿಕಲ್ಪನೆ ಹಾಗೂ ಆ ಗಿಡಗಳನ್ನು ನೆಟ್ಟು ಆರೈಕೆ ಮಾಡಿ ಪೋಷಿಸಿದ ಫಲವಾಗಿ ಅವರು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದರು. ಆದರೆ ಬದಲಾದ ಕಾಲದಲ್ಲಿ ಪ್ರಕೃತಿಯ ವಿರುದ್ಧದ ಸೆಣಸಾಟದಿಂದಾಗಿ ನಿಸರ್ಗ ತನ್ನ ಸಮತೋಲನ ಕಳೆದುಕೊಂಡಿದೆ. ಈ ನಿಟ್ಟಿನಲ್ಲಿ ಪ್ರಕೃತಿ ಸಂರಕ್ಷಣೆಯ ಬಗ್ಗೆ ಗಂಭೀರ ಚಿಂತನೆ ಅಗತ್ಯವಿದೆ ಎಂದು ಕೊಮೆ ಕೊರವಡಿ ವಿ.ಸ.ಸಂಘ ಇದರ ಅಧ್ಯಕ್ಷ ಟಿ.ಸತ್ಯನಾರಾಯಣ ಹೆಬ್ಟಾರ್ ಹೇಳಿದರು.
ಅವರು ಜೂ.27 ರಂದು ಪರಿಸರ ದಿನಾಚರಣೆಯ ಅಂಗವಾಗಿ ಕೊಮೆ ಕೊರವಡಿ ವಿ.ಸ.ಸಂಘ ನಿ. ಇದರ ಪ್ರಧಾನ ಕಚೆೇರಿಯ ಸಂಸ್ಥಾಪಕ ದಿ| ತೆಕ್ಕಟ್ಟೆ ನಾಗರಾಜ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಗಿಡ ವಿತರಿಸಿ ಮಾತನಾಡಿದರು.
ಕೊಮೆ ಕೊರವಡಿ ವಿ.ಸ.ಸಂಘ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಪೂಜಾರಿ ಮಾತನಾಡಿ, ಪ್ರತಿ ಮನೆ ಮನಗಳಲ್ಲಿ ನಿಸರ್ಗದ ಬಗೆಗೆ ಒಲವು ಹಾಗೂ ಕಾಳಜಿ ಅತೀ ಅಗತ್ಯವಿದೆ. ನಾವು ಪೋಷಿಸಿ ಬೆಳೆಸುವ ಪ್ರತಿ ಗಿಡಗಳು ಕೂಡಾ ನಮ್ಮ ಮುಂದಿನ ಪೀಳಿಗೆಗೆ ನೆರಳಾಗಿ ಆಸರೆಯಾಗಬೇಕು ಎನ್ನುವ ಬಯಕೆ ನಮ್ಮದು. ಪ್ರಕೃತಿಗೂ ನಮ್ಮ ಕೊಡುಗೆ ಬಹಳ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೊಮೆ ಕೊರವಡಿ ವಿ.ಸ.ಸಂಘ ನಿ. ಇದರ ಉಪಾಧ್ಯಕ್ಷ ಕೃಷ್ಣ ಪೂಜಾರಿ ಹಾಗೂ ನಿರ್ದೇಶಕರಾದ ರಾಮ ಕಾಂಚನ್, ಗೋಪಾಲ , ರಾಘವೇಂದ್ರ ಮೊಗವೀರ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ
Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು
Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.