ನೌಕಾ ಮಾದರಿ ರಚನೆ: ಕಲ್ಲಾಪುವಿನ ಕೆಡೆಟ್ ನಿಸರ್ಗಾಗೆ ಗೌರವ
Team Udayavani, Mar 10, 2018, 6:00 AM IST
ಕಟಪಾಡಿ: ಗಣರಾಜ್ಯೋತ್ಸವ ಸಂದರ್ಭ ಎನ್‌ಸಿಸಿ (ನೇವಿ) ನಡೆಸಿದ ಶಿಪ್ ಮಾಡೆಲರ್ ಆಗಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಉಡುಪಿ, ಕಟಪಾಡಿ ಕಲ್ಲಾಪುವಿನ “ಪೆಟ್ಟಿ ಆಫೀಸರ್ ಕೆಡೆಟ್’ ನಿಸರ್ಗಾ 4ನೇ ಸ್ಥಾನ ಪಡೆದಿದ್ದಾರೆ.
ಇವರು ನಿಟ್ಟೆ ರುಕ್ಮಿಣಿ ಅಡ್ಯಂತಾಯ ಮೆಮೋರಿಯಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2ನೇ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದು, ಉಡುಪಿ ಪೂರ್ಣಪ್ರಜ್ಞ 1 ಕಾಲೇಜಿನಲ್ಲಿ ಮೂರನೇ ವರ್ಷದ ನೇವಿ ಕೆಡೆಟ್ ಆಗಿದ್ದಾರೆ.
17 ಡೈರೆಕ್ಟರೇಟ್‌ಗಳಿಂದ ಆಗಮಿಸಿದ ಸ್ಪರ್ಧಾಳುಗಳ ಮಧ್ಯೆ ಕರ್ನಾಟಕ-ಗೋವಾ ಡೈರೆಕ್ಟರೇಟ್‌ನ ಮೂವರು ಎಸ್.ಡಬ್ಲ್ಯೂ ಕೆಡೆಟ್ಸ್‌ಗಳ ತಂಡವನ್ನು ನಿಸರ್ಗಾ ಅವರು ಮುನ್ನಡೆಸಿದ್ದಾರೆ. ಅವರ ತಂಡ ಶಿಪ್ ಮಾಡೆಲಿಂಗ್ ಇನ್‌ಸ್ಟ್ರಕ್ಟರ್ ಪರಶುರಾಮ್ ಕೆ. ಅವರ ಮಾರ್ಗದರ್ಶನದಲ್ಲಿ ಐಎನ್‌ಎಸ್ ತಬರ್ ನೌಕೆಯ ಮಾದರಿಯನ್ನು ತಯಾರಿಸಿತ್ತು. ಈ ಮಾದರಿ ಕುರಿತ ವಿವರಗಳನ್ನು ಪ್ರದರ್ಶಿನಿಯಲ್ಲಿ ಚೀಫ್ ಆಫ್ ನೇವಲ್ ಸ್ಟಫ್ ಅಡ್ಮಿರಲ್ ಸುನಿಲ್ ಲಾಂಬ ಅವರಿಗೆ ನಿಸರ್ಗಾ ಅವರು ನೀಡಿದ್ದು, ತಂಡಕ್ಕೆ 4ನೇ ಸ್ಥಾನ ಪ್ರಾಪ್ತವಾಗಿದೆ. ಇದರೊಂದಿಗೆ ವಿಜೇತರು ರಾಷ್ಟ್ರಪತಿ, ಪ್ರಧಾನಿ, ರಕ್ಷಣಾಮಂತ್ರಿ ಅವರೊಂದಿಗೆ ಚಹಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಇದರೊಂದಿಗೆ ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು ವಿಜೇತರನ್ನು ಸಮ್ಮಾನಿಸಿದ್ದಾರೆ. ನಿಸರ್ಗಾ ಅವರು ಕಟಪಾಡಿ ಕಲ್ಲಾಪು ನಿವಾಸಿ ಭಾರತಿ ಅವರ ಪುತ್ರಿಯಾಗಿದ್ದಾರೆ.
ಕಠಿನ ತರಬೇತಿ ಬಳಿಕ ನಿಸರ್ಗಾ 52 ತಾಸಿನಲ್ಲಿ ಐ.ಎನ್.ಎಸ್. ತಬರ್ ನೌಕಾ ಮಾದರಿಯನ್ನು ಸಿದ್ಧಪಡಿಸಿದ್ದಾಳೆ. ತಂಡದ ನಾಯಕಿಯಾಗಿ ಆಕೆ ಯಶಸ್ಸು ಸಾಧಿಸಿದ್ದಾಳೆ. ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಎನ್.ಸಿ.ಸಿ. ಕೋಟಾದಡಿ ಮೀಸಲಾತಿಗೂ ಅರ್ಹತೆ ಪಡೆದಿದ್ದಾಳೆ.
– ಪರಶುರಾಮ್ ಕೆ.,
ಶಿಪ್ ಮಾಡೆಲಿಂಗ್ ಇನ್‌ಸ್ಟ್ರಕ್ಟರ್.
– ವಿಜಯ ಆಚಾರ್ಯ, ಉಚ್ಚಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.