ಇಂದಿನಿಂದ ನವರಾತ್ರಿ ಉತ್ಸವ
Team Udayavani, Sep 21, 2017, 10:10 AM IST
ಉಡುಪಿ: ಕರಾವಳಿಯಾದ್ಯಂತ ನವರಾತ್ರಿ ಉತ್ಸವದ ಸಂಭ್ರಮ ಕಳೆಗಟ್ಟಿದೆ. ಸೆ. 21ರಿಂದ 30ರ ವರೆಗೆ ನವರಾತ್ರಿ ಉತ್ಸವ ಜರಗಲಿದೆ. ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಯಾಗ, ಪುನಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ನವರಾತ್ರಿ ಹಿನ್ನೆಲೆಯಲ್ಲಿ ಹೂವು, ಹಣ್ಣು, ತರಕಾರಿ ಬೆಲೆ ತೀವ್ರ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಶಂಕರಪುರ ಮಲ್ಲಿಗೆಯ ಬೆಲೆಯೂ ಏರಿಕೆ ಕಂಡಿದೆ.
ದೇವರ ಅಲಂಕಾರಕ್ಕೆ ಹೆಚ್ಚಿನ ಹೂವುಗಳ ಬೇಡಿಕೆ ಇರುತ್ತದೆ. ಅದರಲ್ಲೂ ಮಲ್ಲಿಗೆಗಂತೂ ಬೇಡಿಕೆ ಹೆಚ್ಚಾಗಿರುತ್ತದೆ. ಮಲ್ಲಿಗೆ ಇಳುವರಿ ಕುಂಠಿತ ಶಂಕರಪುರ ಮಲ್ಲಿಗೆ ಬೆಳೆಗೆ ಈ ಬಾರಿ ಹೆಚ್ಚೇನೂ ಹಾನಿಯಾಗದಿದ್ದರೂ ಮಳೆ ಬಿಟ್ಟು ಬಿಟ್ಟು ಸುರಿಯುತ್ತಲೇ ಇರುವ ಕಾರಣದಿಂದ ಬೆಳೆಯ ಇಳುವರಿ ಅಲ್ಪ ಕುಂಠಿತವಾಗಿದೆ. ಸದ್ಯ ಚಳಿ ಇಲ್ಲದ ಕಾರಣ ಇಳುವರಿಗೆ ಅಂತಹ ಸಮಸ್ಯೆ ಇಲ್ಲ. ಸಾಮಾನ್ಯ ರೋಗಗಳು ಈಗಲೂ ಇವೆ. ಅದಕ್ಕೆ ತಕ್ಕಂತಹ ಕೀಟನಾಶಕ ಮಾರುಕಟ್ಟೆಯಲ್ಲಿರುವ ಕಾರಣ ಈ ಸಮಸ್ಯೆಯೂ ಹೆಚ್ಚಿಲ್ಲ. ನವರಾತ್ರಿ ಸಂದರ್ಭ ಬೇಡಿಕೆ ಹೆಚ್ಚಿರುವ ಕಾರಣ ಮಲ್ಲಿಗೆ ದರ ಏರಿಕೆಯಾಗುವುದು ಸಹಜ ಎಂದು ಮಲ್ಲಿಗೆ ಬೆಳೆಗಾರ ಪಡುಬಿದ್ರಿಯ ಮನೋಹರ ಪೂಜಾರಿ ಹೇಳಿದ್ದಾರೆ.
ಪ್ರಸ್ತುತ ಶಂಕರಪುರ ಮಲ್ಲಿಗೆಗೆ ಚೆಂಡಿಗೆ 180ರಿಂದ 220 ರೂ., ಅಟ್ಟೆಗೆ 700ರಿಂದ 850 ರೂ. ವರೆಗೆ ಇದೆ. ಭಟ್ಕಳ ಮಲ್ಲಿಗೆ ಚೆಂಡಿಗೆ 120 ರೂ. ನಿಂದ 150 ರೂ.ವರೆಗೆ ಇದೆ. ಬೇಡಿಕೆ ಹೆಚ್ಚಾದಂತೆ ದರವೂ ಏರು ಪೇರಾಗುತ್ತದೆ ಎಂದು ಮಾರಾಟಗಾರರು ತಿಳಿಸಿದ್ದಾರೆ.
ಮಲ್ಲಿಗೆಯನ್ನು ಹೆಚ್ಚು ದಿನ ಇಡಲು ಬರುವುದಿಲ್ಲ. ಆದರೂ ಮಾರಾಟಗಾರರು ಫ್ರಿಡ್ಜ್ನಲ್ಲಿ ಇಟ್ಟು ಒಂದೆರಡು ದಿನ ಶೇಖರಿಸಿಡುತ್ತಾರೆ. ಶಂಕರಪುರ ಮಲ್ಲಿಗೆ ಬದಲಿಗೆ ಭಟ್ಕಳ ಮಲ್ಲಿಗೆ, ಜಾಜಿಯನ್ನು ಹೆಚ್ಚಿಗೆ ಮಾರಾಟಗಾರರು ಮಾರಾಟ ಮಾಡು ತ್ತಿದ್ದಾರೆ. ಅನಿವಾರ್ಯವಾಗಿ ಕೆಲವರು ಬೇರೆ ಹೂವುಗಳನ್ನು ಖರೀದಿಸುತ್ತಿದ್ದಾರೆ. ಸೇವಂತಿಗೆ, ಕಾಕಡ, ಗುಲಾಬಿ, ಹಿಂಗಾರ, ಗೊಂಡೆ ಹೂಗಳ ದರವೂ ಹೆಚ್ಚಾಗಿದೆ. ಎಲ್ಲೆಡೆ ಹೂವಿನ ವ್ಯಾಪಾರ ಭರ್ಜರಿಯಾಗಿದೆ.
ತೆಂಗಿನಕಾಯಿ ಬೆಲೆಯೂ ಹೆಚ್ಚಳ
ನವರಾತ್ರಿ ಪೂಜೆ, ಉಪವಾಸ ಆಚರಿಸುವ ಸಮಯ ದಲ್ಲಿ ಹೆಚ್ಚಿನವರು ಸಸ್ಯಾಹಾರ ಸೇವಿಸುವ ಕಾರಣ ಮುಂದಿನ 2 ವಾರ ತರಕಾರಿಗೂ ಬೇಡಿಕೆ ಹೆಚ್ಚಿರುತ್ತದೆ. ಇದರಿಂದಾಗಿ ಕೆಲವು ನಿರ್ದಿಷ್ಟ ತರಕಾರಿಗಳನ್ನು ಹೊರತು ಪಡಿಸಿ ಉಳಿ ದೆಲ್ಲ ರೀತಿಯ ತರಕಾರಿಗಳ ಬೆಲೆ ಯಲ್ಲಿ ಹೆಚ್ಚಳವಾಗತೊಡಗಿದೆ. ಅದರೊಟ್ಟಿಗೆ ತೆಂಗಿನಕಾಯಿ ಬೆಲೆಯೂ ಏರಿದ್ದು, 1 ತೆಂಗಿನ ಕಾಯಿಗೆ 22 ರೂ. ಆಗಿದೆ. ಬೇಡಿಕೆ ಏರಿ, ಸರಬರಾಜು ಕಮ್ಮಿ ಯಾದರೆ 25 ರೂ.ಗೆ ಏರಿದರೂ ಆಶ್ಚರ್ಯ ವಿಲ್ಲ ಎಂದು ಮಾರಾಟಗಾರರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.