ಹೈನುಗಾರರ ಏಳ್ಗೆಯನ್ನೇ ಗುರಿಯಾಗಿಸಿಕೊಂಡ ಸಂಸ್ಥೆ


Team Udayavani, Feb 16, 2020, 5:19 AM IST

1302UPPE5

ಗ್ರಾಮದಲ್ಲಿ ಹಾಲು ಉತ್ಪಾದನೆ ಹೆಚ್ಚಳದ ಉದ್ದೇಶದೊಂದಿಗೆ ಹೈನುಗಾರರಿಗೂ ಬೆನ್ನೆಲುಬಾಗಿ ನಿಂತು ಸ್ಥಳೀಯ ಆರ್ಥಿಕತೆಯನ್ನು ಪ್ರೋತ್ಸಾಹಿಸಿದ ಹಿರಿಮೆ ನಾವುಂದ ಹಾಲು ಉತ್ಪಾದಕರ ಸಂಘದ್ದು.

ಉಪ್ಪುಂದ: ಹೈನುಗಾರರ ಏಳ್ಗೆಯನ್ನೇ ಪರಮಗುರಿಯಾಗಿಸಿಕೊಂಡ ನಾವುಂದ ಹಾಲು ಉತ್ಪಾದಕರ ಸಹಕಾರಿ ಸಂಘ ಮಾದರಿ ಸಂಘವಾಗಿ ಇಂದು ಬೆಳೆದು ನಿಂತಿದೆ. ಹೈನುಗಾರರು ಹಾಕುವ ಹಾಲಿಗೆ ಯೋಗ್ಯ ದರವನ್ನೂ ನೀಡಿ, ಈ ಮೂಲಕ ಸ್ಥಳೀಯ ಆರ್ಥಿಕತೆಗೆ ಆಧಾರವೂ ಆಗಿದೆ.

ಸಂಘವು 2 ಸಾವಿರ ರೂ. ಬಂಡವಾಳದೊಂದಿಗೆ 1980 ಆ.20ರಂದು ಬಾಡಿಗೆ ಕಟ್ಟಡದಲ್ಲಿ ಆರಂಭಗೊಂಡಿತು. ಟಿ.ಎ.ಪೈ ಅವರೇ ಇದರ ಉದ್ಘಾಟನೆಯನ್ನು ನೆರವೇರಿಸಿದ್ದು ಹೆಗ್ಗಳಿಕೆ. ಸಂಘದಲ್ಲಿ ಆರಂಭದಲ್ಲಿ 120 ಮಂದಿ ಸದಸ್ಯರಿದ್ದು, 50-60 ಲೀ. ಹಾಲು ಸಂಗ್ರಹವಾಗುತ್ತಿತ್ತು.

1160 ಲೀ. ಹಾಲು
18 ವರ್ಷಗಳ ಕಾಲ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದ ಸಂಘವು 1998 ಡಿ. 12ರಂದು ಸ್ವಂತ ಜಾಗದಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಇದು ಪ್ರಸುತ್ತ 260 ಮಂದಿ ಸದಸ್ಯರನ್ನು ಒಳಗೊಂಡಿದೆ. ಹಾಲು ಹಾಕುವ 170 ಮಂದಿ ಸದಸ್ಯರಿದ್ದಾರೆ. ನಿತ್ಯ ಸುಮಾರು 1160 ಲೀ.ಹಾಲು ಸಂಗ್ರವಾಗುತ್ತಿದೆ.

ಕಾರ್ಯಚಟುವಟಿಕೆ
ಸಂಘವು ದ.ಕ.ಸಹಕಾರಿ ಹಾಲು ಒಕ್ಕೂಟ ಮತ್ತು ಸರಕಾರದ ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲು ಶ್ರಮಿಸುತ್ತಿದ್ದು ಯಶಸ್ವಿನಿ ರೈತರ ಆರೋಗ್ಯ ವಿಮೆ, ಮಹಿಳಾ ಸಹಕಾರ ನಾಯಕತ್ವ ಯೋಜನೆ, ಜಾನುವಾರುಗಳಿಗೆ ಬೇಕಾದ ಪಶು ಆಹಾರ, ಹಸಿರು ಮೇವಿನ ಬೀಜ, ರೋಗ ನಿರೋಧಕ ಚುಚ್ಚು ಮದ್ದು, ಕೃತಕ ಗರ್ಭಧಾರಣೆ, ಲವಣ ಮಿಶ್ರಿತ ಆಹಾರವನ್ನು ಸಕಾಲದಲ್ಲಿ ಒದಗಿಸಲು ಶ್ರಮಿಸುತ್ತಿದೆ. ವೈಜ್ಞಾನಿಕ ಹೈನುಗಾರಿಕೆ ಬಗ್ಗೆ ಮಾಹಿತಿ, ರಾಸುಗಳು ಮರಣ ಹೊಂದಿದಾಗ ಸಂಘದಿಂದ ಪರಿಹಾರ, ಹಾಲು ಉತ್ಪಾದಕರಿಗೆ ಬೋನಸ್‌, ಪಶು ಇಲಾಖೆಯ ಸಹಾಯದಿಂದ ಕಾಲು ಬಾಯಿ ಲಸಿಕೆ ಹಾಕುವುದನ್ನೂ ಮಾಡುತ್ತಿದೆ.

ಪ್ರಾರಂಭದಲ್ಲಿ ನಾವುಂದ, ಮರವಂತೆ, ಬಡಾಕೆರೆ, ಹೇರೂರು ಗ್ರಾಮಗಳ ಕಾರ್ಯ ವ್ಯಾಪ್ತಿ ಹೊಂದಿದ್ದು, ಇದೀಗ ಮರವಂತೆ, ಬಡಾಕೆರೆ, ಅರೆಹೊಳೆ ಪ್ರತ್ಯೇಕ ಸಂಘಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಹಾಲಿ ನಾವುಂದ ಗ್ರಾಮಕ್ಕೆ ಮಾತ್ರ ಸೀಮಿತವಾಗಿದ್ದು ಅರೆಹೊಳೆ ಕ್ರಾಸ್‌ನಲ್ಲಿ ಉಪಕೇಂದ್ರ ಹೊಂದಿದೆ. ಸಂಘವು 2005-06ರಲ್ಲಿ ಬೆಳ್ಳಿಹಬ್ಬ ಆಚರಿಸಿದ್ದು ಇದರ ಸವಿ ನೆನಪಿಗಾಗಿ ಸಭಾಭವನ ನಿರ್ಮಿಸಲಾಗಿದೆ.

ಸಾಧಕ ಹಾಲು ಉತ್ಪಾದಕರು
ಸಂಘವು ಹೆಚ್ಚು ಗುಣಮಟ್ಟದ ಹಾಲು ಸಂಗ್ರಹಿಸುವ ಯೋಜನೆ ಹಮ್ಮಿಕೊಂಡಿದ್ದು ಹೈನುಗಾರರಿಗೆ ಇನ್ನಷ್ಟು ಹಾಲು ಉತ್ಪಾದಿಸಲು ಪ್ರೊತ್ಸಾಹ ನೀಡುತ್ತಿದೆ. ವರೋ ರೆಬೊಲೋ, ಲಲಿತಾ, ಮುತ್ತು ಸಂಘಕ್ಕೆ ಅತೀ ಹೆಚ್ಚು ಹಾಲು ನೀಡುತ್ತಿರುವ ಹೈನುಗಾರರಾಗಿದ್ದಾರೆ.

ಸಂಘದ ಸದಸ್ಯರ ಎಲ್ಲ ಜಾನುವಾರುಗಳನ್ನು ಮಿಮೆಗೆ ಒಳಪಡಿಸಲು ಪ್ರಯತ್ನಿಸಲಾಗುತ್ತಿದೆ. ಸಂಘದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಸದಸ್ಯರಿಗೆ ಪೂರಕ ಸೌಲಭ್ಯಗಳನ್ನು ವಿಸ್ತರಿಸಲಾಗುವುದು.
-ನಾರಾಯಣ ಪೂಜಾರಿ
ಅಧ್ಯಕ್ಷರು, ನಾವುಂದ ಹಾ.ಉ.ಸ.ಸಂಘ

ಅಧ್ಯಕ್ಷರು:
ಬಿ.ಎ.ಅಹಮದ್‌, ಎ.ನಾರಾಯಣ ರಾವ್‌, ಎಂ.ಎ.ಕಾದರ್‌, ಬಿ.ಎ.ಸೈಯ್ಯದ್‌, ಎಂ.ವಿನಾಯಕರಾವ್‌, ಹರಿಕೃಷ್ಣ ಕಾರಂತ, ವೆಂಕಟರಮಣ ಗಾಣಿಗ, ಪ್ರಭಾಕರ ಶೆಟ್ಟಿ, ನಾರಾಯಣ ಪೂಜಾರಿ (ಹಾಲಿ)
ಕಾರ್ಯದರ್ಶಿಗಳು:
ಬಿ.ಎಚ್‌.ಹಮಿದ್‌, ವಿನಯ ಕುಮಾರ, ಅಶೋಕ ನಾಯರಿ (ಹಾಲಿ)

-  ಕೃಷ್ಣ ಬಿಜೂರು

ಟಾಪ್ ನ್ಯೂಸ್

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

man-a

Udupi: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

10

Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ

9

Udupi: ಬಿಎಸ್ಸೆನ್ನೆಲ್‌ ಟವರ್‌ ನಿರ್ವಹಣೆ ಹೊಣೆ ಪಂಚಾಯತ್‌ ಹೆಗಲಿಗೆ

6(1

Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ

5

Kundapura: ಬಸ್‌ ತಂಗುದಾಣಗಳೇ ಮಾಯ; ಜನರು ಅಯೋಮಯ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Tamil film Maharaja to be released in China on November 29

Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್‌!

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Mallika Sherawat breaks up with French boyfriend

Actress: ಫ್ರೆಂಚ್‌ ಗೆಳೆಯನೊಂದಿಗೆ ಬ್ರೇಕ್‌ಅಪ್‌ ಆಗಿದೆ: ಮಲ್ಲಿಕಾ ಶೆರಾವತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.