ಉಳಿಸಿಕೊಳ್ಳಬೇಕಿದೆ ತೆಂಕನಿಡಿಯೂರು ಗ್ರಾಮದ ಪೊಟ್ಟುಕೆರೆ
ಅಭಿವೃದ್ಧಿಪಡಿಸಿದರೆ ಈ ಭಾಗದ ಜನರಿಗೆ ಶಾಶ್ವತ ನೀರಿನ ಒರತೆ
Team Udayavani, Jun 11, 2019, 6:00 AM IST
ಮಲ್ಪೆ: ಒಂದು ಕಾಲದಲ್ಲಿ ಗ್ರಾಮ ನೂರಾರು ಎಕ್ರೆ ಕೃಷಿ ಭೂಮಿಗೆ ನೀರುಣಿಸುತ್ತಿದ್ದ ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಳಾರ್ಕಳಬೆಟ್ಟು ಸಮೀಪದ ಪೊಟ್ಟುಕೆರೆ ನಿರ್ವಹಣೆ ಇಲ್ಲದೆ ಹೂಳು ತುಂಬಿಕೊಂಡು ಬರಡಾಗಿದ್ದು, ಕೃಷಿ ಭೂಮಿಗೆ ನೀರು ಇಲ್ಲದಂತಾಗಿದೆ. ಇದರ ಒಂದು ಭಾಗ ಗ್ರಾ.ಪಂ.ಗೆ ಸೇರಿದರೆ ಇನ್ನೊಂದು ಭಾಗ ನಗರಸಭೆಗೆ ಸೇರಿದೆ.
ಅಕ್ಷರಶಃ ಪೊಟ್ಟುಕೆರೆ
ಗ್ರಾಮದ ಸುತ್ತಮುತ್ತ ಹಲವಾರು ಕೆರೆಗಳಿದ್ದರೂ ಪೊಟ್ಟುಕೆರೆ ಐತಿಹಾಸಿಕ ಹಿನ್ನೆಲೆಯೊಂದಿಗೆ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹೂಳಿನಿಂದಾಗಿ ಒರತೆಯಿಲ್ಲದೆ 30 ವರ್ಷಗಳಿಂದ ಇದು ಹೆಸರಿಗೆ ತಕ್ಕಂತೆ ಪೊಟ್ಟುಕೆರೆಯಾಗಿಯೇ ಉಳಿದಿದೆ. ಕೃಷಿಕರ ಸಂಖ್ಯೆಯೂ ಕಡಿಮೆಯಾಗಿದ್ದರಿಂದ ಈ ಕೆರೆಯನ್ನು ಉಳಿಸಿಕೊಳ್ಳುವ ಗೋಜಿಗೂ ಯಾರೂ ಮುಂದಾಗಿಲ್ಲ ಎನ್ನಲಾಗುತ್ತಿದೆ.
ಒತ್ತುವರಿ
ನಗರಸಭಾ ವ್ಯಾಪ್ತಿಯ ಗೋಪಾಲಪುರ ವಾರ್ಡ್ ಮತ್ತು ತೆಂಕನಿಡಿಯೂರು ಕೆಳಾರ್ಕಳಬೆಟ್ಟು ಗ್ರಾಮವನ್ನು ಸಂಧಿಸುವಲ್ಲಿ ಇರುವ ಈ ಕೆರೆ ಹಿಂದೆ 8 ಎಕ್ರೆಯಷ್ಟು ವಿಸ್ತೀರ್ಣ ಹೊಂದಿತ್ತು. ಇದೀಗ ಒತ್ತುವರಿಯಾಗಿ 3 ಎಕ್ರೆ (ತೆಂಕನಿಡಿಯೂರು ಗ್ರಾಮದ ಭಾಗದಲ್ಲಿ ಒಂದು ಎಕ್ರೆ, ಗೋಪಾಲಪುರ ವಾರ್ಡ್ 2 ಎಕ್ರೆ)ಯಷ್ಟು ಮಾತ್ರ ಉಳಿದಿದೆ.
ಪಾಳುಬಿದ್ದ ಕೃಷಿಭೂಮಿಗಳು
ಹಿಂದೆ ಮೇ ಕೊನೆಯವರೆಗೂ ಈ ಕೆರೆಯಲ್ಲಿ ನೀರು ತುಂಬಿಕೊಂಡಿದ್ದು 200 ಎಕ್ರೆ ಕೃಷಿ ಭೂಮಿಗೆ ಇದೇ ಕೆರೆಯ ನೀರನ್ನು ಉಪಯೋಗಿಸಿ ರೈತರು ಹಿಂಗಾರು ಬೆಳೆ ಬೆಳೆಯುತ್ತಿದ್ದರು. ಇಂದು ನೀರಿನ ಕೊರತೆಯಿಂದ ಕೃಷಿ ಭೂಮಿಯೂ ಪಾಳುಬಿದ್ದಿದೆ. ಕೆಲವು ವರ್ಷದ ಹಿಂದೆ ಪಂಚಾಯತ್ ವತಿಯಿಂದ ಬಾವಿಯನ್ನು ನಿರ್ಮಿಸಲಾಗಿದ್ದು ಈ ಬಾವಿಯ ನೀರು ಗ್ರಾಮಕ್ಕೆ ಪೂರೈಕೆಯಾಗುತ್ತಿದೆ.
ಕೆರೆ ಕೆರೆಯಾಗಿಯೇ ಉಳಿಯಲಿ
ಕೆರೆ ಅಭಿವೃದ್ಧಿ ಪಡಿಸಿದರೆ ಸಂಜೆ ಕಳೆಯಲು ಈ ಭಾಗದ ಜನರಿಗೆ ಉತ್ತಮ ಜಾಗ. ಈ ಕೆರೆಯಲ್ಲಿ ನೀರು ನಿಲ್ಲಿಸುವ ಕೆಲಸ ಮಾಡಿದರೆ ಸಮೀಪದ ನೂರಾರು ಬಾವಿಗಳಲ್ಲಿ ಸದಾ ನೀರು ತುಂಬುತ್ತದೆ. ಈ ಕೆರೆ ಕೆರೆಯಾಗಿಯೇ ಉಳಿಯಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆ.
ಪ್ರಾಮಾಣಿಕ ಪ್ರಯತ್ನ ಅಗತ್ಯ
ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ನೀರಿನ ಸಮಸ್ಯೆ ಎದುರಾಗಿದ್ದರೂ ಇಲ್ಲಿರುವ ಪೊಟ್ಟುಕೆರೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಯಾರೂ ಮುಂದಾಗಿಲ್ಲ. ಕೆರೆ ಅಭಿವೃದ್ಧಿ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಇಲಾಖೆಗೆ ಮನವಿ ಮಾಡಲಾಗುತ್ತಿದೆಯಾದರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೆರೆಯ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು.
-ಕೃಷ್ಣ ಶೆಟ್ಟಿ ಅಧ್ಯಕ್ಷರು, ತೆಂಕನಿಡಿಯೂರು ಗ್ರಾ. ಪಂ.
ಯೋಜನೆ ಇದೆ
ಕೆರೆಯ ಹೂಳೆತ್ತಿ ಅಂತರ್ಜಲ ವೃದ್ಧಿಸುವುದು ಮತ್ತು ಸುತ್ತ ದಂಡೆ ನಿರ್ಮಿಸಿ ವಾಕಿಂಗ್ ಟ್ರಾÂಕ್ ಮಾಡಿದ ಅಭಿವೃದ್ಧಿ ಪಡಿಸುವ ಯೋಜನೆ ಇದೆ. ಉಡುಪಿ ಶಾಸಕ ರಘುಪತಿ ಭಟ್, ಕೋಟ ಶ್ರೀನಿವಾಸ ಪೂಜಾರಿ ಅವರಲ್ಲಿ ಮನವಿ ಮಾಡಿದ್ದು ಭರವಸೆಯನ್ನು ನೀಡಿದ್ದಾರೆ.
-ಉಮೇಶ್ ಶೆಟ್ಟಿ,ಗೋಪಾಲಪುರ
-ನಟರಾಜ್ ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.