Hindu Samajotsava ಸಾಮಾಜಿಕ, ಧಾರ್ಮಿಕ ಪ್ರಜ್ಞೆ ಜತೆಗೆ ರಾಜಕೀಯ ಶಕ್ತಿಯೂ ಅಗತ್ಯ
ಶೌರ್ಯ ಜಾಗರಣ ರಥಯಾತ್ರೆ ಸಮಾರೋಪ, ಹಿಂದೂ ಸಮಾಜೋತ್ಸವ ಸಂಪನ್ನ
Team Udayavani, Oct 11, 2023, 12:35 AM IST
ಉಡುಪಿ: ಸನಾತನ ಧರ್ಮ, ಸಂಸ್ಕೃತಿಯನ್ನು ವಿರೋಧಿಸುವ ಪರಕೀಯರ ಬಿರುಗಾಳಿಗೆ ಎದೆಯೊಡ್ಡಿ ನಿಲ್ಲುವ ರಾಜಕೀಯ ಪ್ರಜ್ಞೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಬೀದಿ ಹೋರಾಟದಿಂದ ಇದು ಸಾಧ್ಯವಿಲ್ಲ. ಧರ್ಮ, ಸಂಸ್ಕೃತಿ, ನಮ್ಮತನ ಗೌರವಿಸುವ ಸರಕಾರ ತರುವಲ್ಲಿ ಹೋರಾಟವೂ ಇರಬೇಕು ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ಜಿಲ್ಲಾ ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಮಂಗಳವಾರ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆದ ಹಿಂದೂ ಸಮಾಜೋತ್ಸವ ಹಾಗೂ ಶೌರ್ಯ ಜಾಗರಣ ರಥಯಾತ್ರೆ ಸಮಾರೋಪದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ನಾವೆಲ್ಲರೂ ಶಾಂತಿ ಪ್ರಿಯರು. ಧರ್ಮದ ಪ್ರತಿಪಾದಕರು ಹಾಗೂ ಶ್ರೀರಾಮ ದೇವರ ಆದರ್ಶ ಪಾಲಿಸುವ ವರು. ಕಲ್ಲೆಸೆಯುವ, ಕೊಳ್ಳೆ ಹೊಡೆಯುವ ಅಥವಾ ತಲೆ ಒಡೆಯುವವರು ನಾವಲ್ಲ. ಪ್ರಸ್ತುತ ನಮ್ಮ ಮನೆಯೊಳಗೆ ಬಂದು ಮಕ್ಕಳನ್ನು ಎತ್ತಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ನಾವೆಲ್ಲರೂ ಒಟ್ಟಾಗಿ ಪ್ರತಿಭಟಿಸಿ, ಲವ್ ಜೆಹಾದ್ ವಿರುದ್ಧ ಹೋರಾಟ ನಡೆಸಬೇಕು ಎಂದರು.
ಸನಾತನ ಧರ್ಮ ತಲೆ ಎತ್ತುವಂತೆ ಮಾಡಿದ್ದು ಹಾಗೂ ಶ್ರೀರಾಮ ಜನ್ಮಭೂಮಿ ಹೋರಾಟದ ಹಿಂದಿನ ಶಕ್ತಿ ವಿಹಿಂಪ, ಬಜರಂಗದಳ. ಸನಾತನ ಧರ್ಮದ ವಿರುದ್ಧ ಎದ್ದಿರುವ ಬಿರು ಗಾಳಿಯನ್ನು ತಡೆದು ನಿಲ್ಲಿಸಬೇಕು. ಧಾರ್ಮಿಕ, ಸಾಮಾಜಿಕ ನಲೆಯಲ್ಲಿ ಒಂದಾದರೆ ಸಾಲದು. ರಾಜಕೀಯ ಪ್ರಜ್ಞೆಯೂ ಬೇಕು. ಕಾರ್ಯಸಾಧನೆಗೆ ಉತ್ತಮ ಸರಕಾರವನ್ನು ತರಬೇಕು ಎಂದು ಹೇಳಿದರು.
ಸಂಕಲ್ಪ ಮುಖ್ಯ
ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಮಹತ್ ಕಾರ್ಯ ಸಾಧನೆಗೆ ಸಂಕಲ್ಪ ಅತಿ ಮುಖ್ಯ. ಭಾರತದ ಶಕ್ತಿ ಬೆಳೆಯುತ್ತಿದೆ. ಕೆಲವರ ಶಕ್ತಿ ಕುಂಬಳ ಕಾಯಿಯಂತೆ ಒಳಗೊಳಗೆ ಕೊಳೆಯುತ್ತಿದೆ. ಭಾರತವು ಮತ್ತೂಮ್ಮೆ ಜಗದ್ಗುರುವಾಗಲಿದೆ. ನಮ್ಮ ಮೇಲೆ ಆಗಬಹುದಾದ ಆಕ್ರಮಣ ಗಳನ್ನು ಸಂಘಟಿತರಾಗಿ ತಡೆಯಬೇಕು ಎಂದು ಸಲಹೆ ನೀಡಿದರು.
ಲವ್ ಜೆಹಾದ್‌ಗೆ ಸಮರ್ಥ ಉತ್ತರ
ಬೋಪಾಲ್‌ನ ಮಹಾಮಂಡ ಲೇಶ್ವರ ಶ್ರೀ ಅಖೀಲೇಶ್ವರಾನಂದ ಗಿರಿ ಮಹಾರಾಜ್ ಮಾತನಾಡಿ, ಭಾರತ
ವನ್ನು ಒಡೆಯುವ ಶಕ್ತಿಗಳ ವಿರುದ್ಧ ದೇಶದ ಸಮಗ್ರತೆಗಾಗಿ ನಿರಂತರ ಸಂಘಟಿತ ಸಂಘರ್ಷ ಮಾಡುತ್ತಿರುತ್ತೇವೆ. ಲವ್ ಜೆಹಾದ್‌ಗೆ ಹಿಂದೂ ಸಮಾಜ ಸರಿಯಾದ ಉತ್ತರ ನೀಡಬೇಕು. ಸನಾತನ ಎನ್ನುವುದು ಜಾತಿ, ವರ್ಣವಲ್ಲ. ಅದು ಜೀವನ ಮೌಲ್ಯ ಎಂದು ಹಿಂದೂ ಸಮಾಜ ಸಂಘಟಿತವಾಗಬೇಕಾದ ಅಗತ್ಯಗಳ ಬಗ್ಗೆ ವಿವರಿಸಿದರು.
ಆರೆಸ್ಸೆಸ್‌ನ ಪ್ರಾಂತ ಸಹಕಾರ್ಯ ವಾಹ ಪಿ.ಎಸ್. ಪ್ರಕಾಶ್ ಮಾತನಾಡಿ, ಶೌರ್ಯ ರಹಿತ ಸಮಾಜಕ್ಕೆ ಸಾವು ನಿಶ್ಚಿತ. ಹಿಂದೂ ಸಮಾಜ ಶೌರ್ಯವಂತ ಸಮಾಜ. ನಾವೀಗ ಶಾರೀರಿಕ ಹಾಗೂ ವೈಚಾರಿಕ ಆಕ್ರಮಣವನ್ನು ತಡೆಯಬೇಕು. ಭಾರತದ ಗೆಲುವಿನ ಇತಿಹಾಸವನ್ನು ಮಕ್ಕಳಿಗೆ ತಿಳಿಸಬೇಕು ಎಂದು ತಿಳಿಸಿದರು.
ದೇಶ ರಕ್ಷಣೆ ಅಗತ್ಯ
ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಮನೋಹರ ಶೆಟ್ಟಿ ಮಾತನಾಡಿ, ನಮ್ಮ ದೇಶವನ್ನು ನಾವು ಕಾಪಾಡಿಕೊಳ್ಳಬೇಕು. ನಾವಾಗಿ ಯಾರಿಗೂ ತೊಂದರ ನೀಡ ಬಾರದು. ಆದರೆ ನಮಗೆ ತೊಂದರೆ ಕೊಡುವವರಿಗೆ ಸ್ಪಷ್ಟ ಉತ್ತರ ನೀಡಲೇ ಬೇಕು. ಜಾತಿ, ಮತ ಭೇದ ಮರೆತು ನಾವೆಲ್ಲರೂ ಒಂದಾಗಬೇಕು ಎಂದು ಹೇಳಿದರು.
ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್. ಮಾತನಾಡಿ, ಇಡೀ ರಾಜ್ಯವೇ ಹಿಂದುತ್ವದ ಭದ್ರಕೋಟೆಯಾಗಲಿದೆ. ಬಜರಂಗದಳ ಎಲ್ಲ ಸವಾಲುಗಳನ್ನು ಎದುರಿಸಲು ಸಿದ್ಧವಿದೆ. ಜೆಹಾದಿ ಮಾನಸಿಕತೆಯನ್ನು ಹೇಗೆ ಹೋಗ ಲಾಸಡಿಸಬೇಕು ಎಂಬುದು ಗೊತ್ತಿದೆ. ಈ ರಾಷ್ಟ್ರವನ್ನು ಜಿಹಾದಿ ಮಾನಸಿಕತೆಗೆ ಹೋಗಲೂ ಬಿಡುವುದಿಲ್ಲ ಎಂದರು.
ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಡಾ| ಎಂ.ಬಿ. ಪುರಾಣಿಕ್, ಉದ್ಯಮಿಗಳಾದ ಗಣೇಶ್ ಹೆಗ್ಡೆ, ಹರಿಯಪ್ಪ ಕೋಟ್ಯಾನ್, ಕಡ್ತಳ ವಿಶ್ವನಾಥ ಪೂಜಾರಿ ಪುಣೆ, ರಮೇಶ್ ಬಂಗೇರ, ರವೀಂದ್ರ ಶೆಟ್ಟಿ ಬಜಗೋಳಿ, ವಿಹಿಂಪ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಬಜರಂಗ ದಳ ರಾಷ್ಟ್ರೀಯ ಸಹ ಸಂಚಾಲಕ ಸೂರ್ಯನಾರಾಯಣ, ಪ್ರಮುಖರಾದ ಮಹಾಬಲ ಹೆಗಡೆ, ಪೂರ್ಣಿಮಾ ಸುರೇಶ್ ಉಪಸ್ಥಿತರಿದ್ದರು.
ಜಿಲ್ಲಾ ಸಂಯೋಜಕ ಚೇತನ್ ಪರಲ್ಕೆ ಸ್ವಾಗತಿಸಿದರು. ಅಜಿತ್ ಹಾಗೂ ಭಾಗ್ಯಶ್ರೀ ಐತಾಳ ನಿರೂಪಿಸಿದರು.
ಕೇಸರಿ ಬಾವುಟಕ್ಕೆ 10 ಲಕ್ಷ ರೂ. ಬಾಂಡ್!
ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಪ್ರಸ್ತಾವನೆಗೈದು, ಕೇಸರಿ ಬಾವುಟ ಕಟ್ಟಲು ಪೊಲೀಸರು 10 ಲ.ರೂ.ಗಳ ಬಾಂಡ್ ಬರೆಸಿಕೊಂಡಿದ್ದಾರೆ. ಮುಂದೆ ಮನೆ ಮನೆಯಲ್ಲೂ ಕೇಸರಿ ಬಾವುಟ ಹಾರಿಸಲಿದ್ದೇವೆ. ಕೇಸರಿ ಬಾವುಟ ಹಾರಿಸಲು ಬಾಂಡ್ ಬರೆದುಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಜೋಡುಕಟ್ಟೆಯಿಂದ ಭವ್ಯ ಶೋಭಾಯಾತ್ರೆ
ಶೌರ್ಯ ಜಾಗರಣ ರಥಯಾತ್ರೆಯನ್ನು ಜೋಡುಕಟ್ಟೆಯಲ್ಲಿ ಸ್ವಾಗತಿಸಲಾಯಿತು. ಅಲ್ಲಿಂದ ಆರಂಭಗೊಂಡ ಶೋಭಾಯಾತ್ರೆ ಕೋರ್ಟ್ ರಸ್ತೆ, ಕೆ.ಎಂ.ಮಾರ್ಗ, ಸರ್ವಿಸ್ ಬಸ್, ಸಿಟಿ ಬಸ್ ನಿಲ್ದಾಣ, ಕಲ್ಸಂಕ, ಕಡಿಯಾಳಿ ಮಾರ್ಗವಾಗಿ ಎಂಜಿಎಂ ಮೈದಾನ ಪ್ರವೇಶಿಸಿದೆ. ಮೈದಾನದ ಸುತ್ತ ಕೇಸರಿ ಪತಾಕಿ, ಬಾವುಟದಿಂದ ಅಲಂಕರಿಸಲಾಗಿತ್ತು. ಪ್ರವೇಶದ್ವಾರದಲ್ಲಿ ಭಗತ್ ಸಿಂಗ್, ಸ್ವಾಮಿ ವಿವೇಕಾನಂದ, ವೀರ ಸಾವರ್ಕರ್, ಚಂದ್ರ ಶೇಖರ್ ಅಜಾದ್, ಛತ್ರಪತಿ ಶಿವಾಜಿ ಮಹಾರಾಜ್ ಮೊದಲಾದ ಮಹನೀಯರ ಭಾವಚಿತ್ರ ಅಳವಡಿಸಲಾಗಿತ್ತು. ಕಲಾವಿದ ಜಗದೀಶ್ ಪುತ್ತೂರು ಮತ್ತು ತಂಡದಿಂದ ದೇಶಭಕ್ತಿಗೀತೆ ಗಾಯನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.