Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Team Udayavani, Apr 29, 2024, 11:06 PM IST
ಬ್ರಹ್ಮಾವರ: ಬೇಸಗೆಯ ಸುಡು ಬೇಗೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರಿನ ಗೋ ಪ್ರೇಮಿ ಗುರುನಂದನ್ ಹೆಬ್ಬಾರ್ ಮತ್ತು ಅವರ ತಂಡದಿಂದ 3,000 ಕಿಲೋ ಕಲ್ಲಂಗಡಿ ಹಣ್ಣುಗಳನ್ನು ನೀಲಾವರ ಗೋ ಶಾಲೆಯ 1,700ಕ್ಕೂ ಹೆಚ್ಚು ಗೋವುಗಳಿಗೆ ಸಮರ್ಪಿಸ ಲಾಯಿತು.
ಗೋಶಾಲೆಯ ಪುಷ್ಕರಣಿ ಮಧ್ಯದಲ್ಲಿರುವ ಕಾಳಿಂಗಮರ್ಧನ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಮಕ್ಕಳು ಭಗವದ್ ಗೀತೆಯ ಶ್ಲೋಕಗಳನ್ನು ಪಠಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗುರುನಂದನ್ ತಂಡದವರು ಕಳೆದ 8 ವರ್ಷಗಳಿಂದ ಈ ಸೇವೆಯನ್ನು ಮಾಡುತ್ತ ಬರುತ್ತಿದ್ದಾರೆ ಎಂದು ಗೋ ಶಾಲೆಯ ವ್ಯವಸ್ಥಾಪಕ ಆಶ್ರಿತ್ ತಿಳಿಸಿದರು.
ಆರ್ಟ್ ಆಫ್ ಲಿವಿಂಗ್‌ನ ಸ್ವಯಂ ಸೇವಕರು ಕಲ್ಲಂಗಡಿ ಹಣ್ಣುಗಳನ್ನು ತುಂಡರಿಸಲು ಸಹಕರಿಸಿದರೆ, ಗೋಶಾಲೆಯ ಸಿಬಂದಿ ಹಣ್ಣುಗಳನ್ನು ಹಸುಗಳಿಗೆ ತಿನ್ನಿಸಿದರು. ಇದೇ ಸಂದರ್ಭ ಚಾಂತಾರು ವಿದ್ಯಾನಗರ ನಿವಾಸಿ ನಿವೃತ್ತ ಬ್ಯಾಂಕ್ ಅಧಿಕಾರಿ ಓರ್ವರು ಇತ್ತೀಚೆಗೆ 3,000 ಕಿಲೋ ಕುಂಬಳ ಕಾಯಿ ಗೋವುಗಳಿಗೆ ಸಮರ್ಪಸಿದ್ದನ್ನು ಗೋಶಾಲೆಯ ವ್ಯವಸ್ಥಾಪಕ ವಾಗೇಶ್ ಅಡಿಗ ಅವರು ನೆನಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
AjekarCase: ತನಿಖೆ ದಿಕ್ಕು ತಪ್ಪುತ್ತಿದೆ: ದಿಲೀಪ್ ತಂದೆ ವಿರುದ್ದ ಬಾಲಕೃಷ್ಣ ಮನೆಯವರ ಆರೋಪ
Katpadi: ಭತ್ತದ ತೆನೆಯಿಂದಲೇ ಆಟೋ ರಿಕ್ಷಾ ಅಲಂಕರಿಸಿ ಸಂಭ್ರಮಿಸಿದ ಚಾಲಕ
Udupi: ಗೀತಾರ್ಥ ಚಿಂತನೆ-83: ಅಪೇಕ್ಷಿತ-ಅನಪೇಕ್ಷಿತ ವಂಶವಾಹಿಗಳು
Congress Govt.,: ರಾಜ್ಯ ಸರಕಾರದ ವಿರುದ್ಧ ಮೂರು ಹಂತದ ಪ್ರತಿಭಟನೆ: ಕಿಶೋರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.