ಹೆಬ್ರಿ: ಅಭಿವೃದ್ಧಿ ಕಾಣದ ನೀರಾಣಿ -ಕುಚ್ಚಾರು ಮುಖ್ಯ ರಸ್ತೆ
Team Udayavani, Jul 4, 2018, 2:50 AM IST
ಹೆಬ್ರಿ: ಕಬ್ಬಿನಾಲೆ ಗ್ರಾಮದ ನೀರಾಣಿ -ಕುಚ್ಚಾರು ಮುಖ್ಯ ರಸ್ತೆಯು ಹಲವಾರು ವರ್ಷಗಳಿಂದ ದುರಸ್ತಿ ಕಾಣದೆ ಸಂಪೂರ್ಣ ಹದಗೆಟ್ಟಿದ್ದು, ಶೀಘ್ರ ದುರಸ್ತಿಗೊಳಿಸುವಂತೆ ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ. ರಸ್ತೆಗೆ ಹಾಕಿದ್ದ ಜಲ್ಲಿ ಮಣ್ಣು ಮಳೆಯ ನೀರಿನಲ್ಲಿ ಕೊಚ್ಚಿಹೋಗಿದ್ದು ನಡೆದುಕೊಂಡು ಹೋಗುವುದು ಕೂಡ ಕಷ್ಟಕರವಾಗಿದೆ. ತೀರ ಹದಗೆಟ್ಟ ರಸ್ತೆಯನ್ನು ಗ್ರಾ.ಪಂ. ಹಾಗೂ ಗ್ರಾಮಸ್ಥರ ಸಹಕಾರದಿಂದ ಕಳೆದ ಬೇಸಿಗೆಯಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಲಾಗಿತ್ತು. ಆದರೆ ಮಳೆಗೆ ಈ ಬಾರಿ ರಸ್ತೆ ಮತ್ತೆ ಕೊಚ್ಚಿಹೋಗಿದೆ.
ಸಂಪರ್ಕ ಕಡಿತಗೊಳ್ಳುವ ಭೀತಿ
ರಸ್ತೆಯ ಬದಿಯಲ್ಲಿ ಒಂದೆಡೆ ರಸ್ತೆಗೆ ವಾಲಿರುವ ಅಪಾಯಕಾರಿ ಮರಗಳಿದ್ದು ಯಾವುದೇ ಸಂದರ್ಭ ಬೀಳಬಹುದಾಗಿದೆ. ಅಲ್ಲದೆ ವಿಪರೀತ ಮಳೆಗೆ ಗುಡ್ಡಗಳು ಕುಸಿಯುತ್ತಿದ್ದು ಸಂಪರ್ಕ ಕಡಿತಗೊಳ್ಳುವ ಭೀತಿಯಲ್ಲಿ ಈ ಭಾಗದ ಜನರಿದ್ದಾರೆ.
ಕಾಂಕ್ರೀಟ್ ಒಂದೇ ಪರಿಹಾರ
ಈ ಭಾಗದ ಪ್ರದೇಶ ಗುಡ್ಡ – ಕಾಡುಗಳಿಂದ ಆವೃತವಾಗಿದ್ದು ವಿಪರೀತ ಮಳೆ ಸುರಿಯುವ ಪರಿಣಾಮ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ರಸ್ತೆ ಕಾಂಕ್ರೀಟೀಕರಣಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸಂಪೂರ್ಣ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕನಿಷ್ಠ 2ರಿಂದ 3 ಕೋಟಿ ರೂ. ಅನುದಾನದ ಆವಶ್ಯಕತೆ ಇದೆ.
ಎರಡು ಗ್ರಾಮಗಳ ಅಭಿವೃದ್ಧಿ
ಈ ರಸ್ತೆಯು ಗ್ರಾಮದ ಮುಖ್ಯ ರಸ್ತೆಯಾಗಿದ್ದು ದುರಸ್ತಿಗೊಂಡಲ್ಲಿ ಇದಕ್ಕೆ ಹೊಂದಿಕೊಂಡಿರುವ ಹಲವಾರು ಕೂಡುರಸ್ತೆಗಳ ಸಂಪರ್ಕವಾಗಿ ಆ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ನಾಡಾ³ಲು ಗ್ರಾಮಕ್ಕೆ ಇದೇ ಸಂಪರ್ಕ ರಸ್ತೆಯಾದ್ದರಿಂದ ರಸ್ತೆ ಅಭಿವೃದ್ಧಿಯಾದಲ್ಲಿ ನಾಡ್ಪಾಲು ಹಾಗೂ ಕಬ್ಬಿನಾಲೆ ಎರಡೂ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಆ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡ ಸೇರಿದಂತೆ ಮಲೆಕುಡಿಯರು ಹೆಚ್ಚಾಗಿ ವಾಸವಿದ್ದು ಶಾಸಕರು ತಮ್ಮ ಶಾಸನಬದ್ಧ ಅನುದಾನ /ಸರಕಾರದ ವಿಶೇಷ ಅನುದಾನ /ಪ್ರಾಕೃತಿಕ ವಿಕೋಪ ಅನುದಾನ ಆಥವಾ ಲೋಕಸಭಾ ಸದಸ್ಯರ ಅನುದಾನ ಅಥವಾ ಲೋಕಸಭಾ ಸದಸ್ಯರ ಅನುದಾನ ಮೂಲಕವಾದರೂ ಅನುದಾನವನ್ನು ಬಿಡುಗಡೆಗೊಳಿಸಿ ಈ ಭಾಗದ ಹಲವು ವರ್ಷಗಳ ಬೇಡಿಕೆಯಾದ ರಸ್ತೆ ದುರಸ್ತಿಯನ್ನು ಶೀಘ್ರಗೊಳಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕೆಂದು ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ ವಿನಂತಿಸಿದ್ದಾರೆ.
ಪ್ರಸ್ತಾವನೆ ಸಲ್ಲಿಸಲಾಗಿದೆ
ಈ ಭಾಗದ ರಸ್ತೆಯ ಡಾಮರೀಕರಣಗೊಳಿಸಲು ಈಗಾಗಲೇ ಶಾಸಕರು 25ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸುವಂತೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಅನುದಾನ ಬಿಡುಗಡೆಗೊಂಡ ಕೂಡಲೇ ಕಾಮಗಾರಿ ಆರಂಭವಾಗಲಿದೆ.
– ಜ್ಯೋತಿ ಹರೀಶ್, ಜಿ.ಪಂ. ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.