ಕಾರ್ಕಳ ಮುನಿಯಾಲಿನ ವ್ಯಕ್ತಿಗಿಲ್ಲ ಕೊರೊನಾ ಸೋಂಕು: ದೂರವಾದ ಆತಂಕ
Team Udayavani, Mar 7, 2020, 5:00 PM IST
ಉಡುಪಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿನ ಶಂಕೆಯಿಂದ ದಾಖಲಾಗಿದ್ದ ವ್ಯಕ್ತಿಯ ವೈದ್ಯಕೀಯ ಪರೀಕ್ಷಾ ವರದಿ ಆಸ್ಪತ್ರೆ ತಲುಪಿದೆ. ನೆಗೆಟಿವ್ ರಿಪೋರ್ಟ್ ಬಂದಿರುವುದು ಆತಂಕ ದೂರವಾಗಿದೆ.
ಮಾ. 4ರಂದು ಇಸ್ರೇಲ್ ಪ್ರವಾಸ ಮುಗಿಸಿ ಮರಳಿರುವ ಮುನಿಯಾಲಿನ 75 ವರ್ಷದ ವ್ಯಕ್ತಿ ಕೆಮ್ಮು ಹಾಗೂ ಶೀತದ ತೊಂದರೆಯಿಂದ ಬಳಲುತ್ತಿರುವ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಅವರ ಮನೆಗೆ ಭೇಟಿ ನೀಡಿ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಪತಿಯ ಜತೆಗೆ ಇಸ್ರೇಲ್ಗೆ ತೆರೆಳಿದ ಪತ್ನಿಯ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬಂದಿಲ್ಲ.
ಆಸ್ಪತ್ರೆಗೆ ದಾಖಲಾದ ನಂತರ ವ್ಯಕ್ತಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿತ್ತು. ಅವರ ಗಂಟಲಿನ ದ್ರವ (ಥ್ರೋಟ್ ಸ್ವಾಬ್) ನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವರದಿ ಜಿಲ್ಲಾಸ್ಪತ್ರೆ ವೈದ್ಯರ ಕೈ ಸೇರಿದ್ದು, ಆತಂಕ ನಿವಾರಣೆಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.