ನಾಳೆಯಿಂದ ಕರಾವಳಿಯಾದ್ಯಂತ ನೇಮೊದ ಬೂಳ್ಯ ಪ್ರದರ್ಶನ
Team Udayavani, Sep 21, 2017, 11:09 AM IST
ಮಂಗಳೂರು/ಉಡುಪಿ: ಭೂತಾರಾಧನೆಗೆ ಸಂಬಂಧಿಸಿದ ಪರತಿ ಮಂಗಣೆ ಪಾಡ್ದನ ಆಧಾರಿತ “ನೇಮೊದ ಬೂಳ್ಯ’ ತುಳು ಚಿತ್ರ ಸೆ. 22ರಂದು ಕರಾವಳಿಯಾದ್ಯಂತ ತೆರೆ ಕಾಣಲಿದೆ.
ಮಂಗಳೂರಲ್ಲಿ ಬಿಗ್‌ಸಿನೆಮಾ, ಪಿವಿಆರ್, ಸಿನೆಪೊಲಿಸ್, ಉಡುಪಿಯಲ್ಲಿ ಡಯಾನಾ, ಮೂಡಬಿದಿರೆಯಲ್ಲಿ ಅಮರಶ್ರೀ, ಪುತ್ತೂರಲ್ಲಿ ಅರುಣಾ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರ ನಿರ್ಮಾಪಕ ಕುದ್ರಾಡಿ ಗುತ್ತು ಚಂದ್ರಶೇಖರ ಮಾಡ ತಿಳಿಸಿದ್ದಾರೆ. ಕುದ್ರಾಡಿ ಕುಲದೇವತಾ ಕ್ರಿಯೇಷನ್ಸ್ ಲಾಂಛನದಲ್ಲಿ ಶಬರಿ ಚಂದ್ರಶೇಖರ್ ಮಾಡ ಅರ್ಪಿಸುವ ಬಿ.ಕೆ. ಗಂಗಾಧರ ಕಿರೋಡಿಯನ್ ನಿರ್ದೇಶನದ ನೇಮೊದ ಬೂಳ್ಯ ಸೆನ್ಸಾರ್ ಮಂಡಳಿಯ ಮೆಚ್ಚುಗೆ ಗಳಿಸಿದೆ.
ವಿ. ಮನೋಹರ್ ಸಾಹಿತ್ಯ ಮತ್ತು ಸಂಗೀತ ಒದಗಿಸಿದ್ದಾರೆ. ಉಮಾಪತಿ ಬೆಂಗಳೂರು ಕೆಮರಾ, ಪ್ರಕಾಶ್ ಕಾರಿಂಜ ಸಂಕಲನವಿದ್ದು, ಪ್ರತಾಪ್ ಸಾಲ್ಯಾನ್ ಕದ್ರಿ ಸಹನಿರ್ದೇಶಕರಾಗಿದ್ದಾರೆ. ನೃತ್ಯ ಮದನ್ ಹರಿಣಿ, ಪ್ರೀತಂ ಶೆಟ್ಟಿ, ಕಿರುತೆರೆ ನಟಿ ರಜನಿ, ಪ್ರದೀಪ್ ಚಂದ್ರ ಮುಖ್ಯ ಪಾತ್ರದಲ್ಲಿದ್ದಾರೆ. ಮನೋಹರ್ ವಿಠಲ್, ರಮೇಶ್ ಭಟ್, ಮಂಡ್ಯ ರಮೇಶ್, ರಘುರಾಮ ಶೆಟ್ಟಿ, ರಮೇಶ್ ಕಲ್ಲಡ್ಕ, ಆರ್. ಎನ್. ಶೆಟ್ಟಿ, ಕಳವಾರ್, ಮೋಹನ್ ಬೋಳಾರ್, ಎನ್.ಎಸ್. ರೈ, ರಾಧಾಕೃಷ್ಣ ಕುಂಬ್ಳೆ, ತಾರಾನಾಥ ಉರ್ವ, ಸುರೇಶ್ ನಿಟ್ಟೆ, ಸುರೇಶ್ ದೇವಾಡಿಗ, ಜಯಶೀಲ ಮರೋಳಿ, ವೀಣಾ ಜಯಂತ್, ರತ್ನಾವತಿ ಜೆ. ಬೈಕಾಡಿ, ಪವಿತ್ರಾ ಶೆಟ್ಟಿ ಸಹಕಲಾವಿದರಾಗಿದ್ದಾರೆ.
ಉಡುಪಿ ವರದಿ
ಉಡುಪಿಯಲ್ಲಿ ಪ್ರತಿಮಾ ಕುಂದಾಪುರ ಅವರು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾಹಿತಿ ನೀಡಿದರು.
ಪೂಜಲ್ಲೇ ಮುಡಿತೊಂದು… ಹಾಡನ್ನು ಫಣೇಂದ್ರ ಕೃಷ್ಣ ಹಾಗೂ ನಾಗಚಂದ್ರಿಕಾ ಭಟ್ ಹಾಡಿದ್ದಾರೆ. ಓ ಮದನ ಮೋಕೆದ ಮದಿಮಾಲೆ… ಹಾಡನ್ನು ಬದ್ರೀಪ್ರಸಾದ್, ಲೇ ಲೇಯೇ ಲೇಯೇ ಹಾಡನ್ನು ನಾಗಚಂದ್ರಿಕಾ ಭಟ್, ಕಣ್ಣ್ ಡ್ ನೆತ್ತೆರೆಜ್ಜಾಂದಿ… ಹಾಡನ್ನು ಚಿಂತನ್ ಕಾಸ್, ದೈವೋನ್ ನಂಬೋಡು…. ಹಾಡನ್ನು ಶಶಾಂಕ್ ಶೇಷಗಿರಿ ಹಾಗೂ ಡೆನ್ನಾಡೆನ್ನಾನಡೆನ್ನ ಹಾಡನ್ನು ಪ್ರತಿಮಾ ಭಟ್ ಹಾಡಿದ್ದಾರೆ.
ರಂಗಭೂಮಿ ನಟ ಶ್ರೀಪಾದ ಹೆಗಡೆ, ನಾಯಕ ನಟ ಪ್ರೀತಮ್ ಶೆಟ್ಟಿ, ನಟಿ ಪವಿತ್ರಾ ಶೆಟ್ಟಿ ಕಟಪಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಸತ್ಯ ಘಟನೆಯಾಧಾರಿತ
200 ವರ್ಷಗಳ ಹಿಂದೆ ಪುತ್ತೂರಿನ ಬೆಟ್ಟಂಪಾಡಿಯಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿದ “ಪರತಿ ಮಂಗಣೆ’ ಪಾಡ್ದನವನ್ನು “ನೇಮೊದ ಬೂಳ್ಯ’ ಹೆಸರಿನಲ್ಲಿ ಸಿನೆಮಾ ರೂಪಕ್ಕೆ ಇಳಿಸಲಾಗಿದೆ. ಕರಾವಳಿಯ ಪರಿಸರದ ನಡುವೆ ಹಾಡುಗಳನ್ನು ಚಿತ್ರೀಕರಿಸಲಾಗಿದೆ.
ಚಂದ್ರಶೇಖರ ಮಾಡ , ನಿರ್ಮಾಪಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.