ಕಡೆಕಾರು: ಆಟಿಡೊಂಜಿ ದಿನ; ಸಮ್ಮಾನ
Team Udayavani, Aug 3, 2017, 6:45 AM IST
ಉಡುಪಿ: ಬಿಲ್ಲವ ಸೇವಾ ಸಂಘ ಕಡೆಕಾರು-ಕನ್ನರ್ಪಾಡಿ ಮತ್ತು ಇದರ ಮಹಿಳಾ ಘಟಕದ ನೇತೃತ್ವದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸೇವಾ ಸಂಘ ಕಡೆಕಾರು, ರೋಟರಿ ಕ್ಲಬ್ ಉದ್ಯಾವರ, ನಿಡಂಬೂರು ನವೋದಯ ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಕರಾವಳಿ ನ್ಪೋರ್ಟ್ಸ್ ಕ್ಲಬ್ ಕಡೆಕಾರು ಸಂಯುಕ್ತ ಆಶ್ರಯಲ್ಲಿ “ಆಟಿಡೊಂಜಿ ದಿನ ಕಾರ್ಯಕ್ರಮ’ವು ಕಡೆಕಾರು ಬಿಲ್ಲವ ಸೇವಾ ಸಂಘದ ನಾರಾಯಣಗುರು ಸಮುದಾಯ ಭವನದ ಸಭಾಂಗಣದಲ್ಲಿ ನೆರವೇರಿತು.
ರಮೇಶ್ ಕೆ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಉದ್ಯಾವರ ರೋಟರಿ ಅಧ್ಯಕ್ಷ ಪಿ. ತೇಜೇಶ್ವರ ರಾವ್ ಉದ್ಘಾಟಿಸಿದರು. ಜಗನ್ನಾಥ ಕೋಟೆ ಆಟಿ ತಿಂಗಳ ಮದಿಪು ನೀಡಿದರು. ನಾಟಿ ವೈದ್ಯ ಭಾಸ್ಕರ ಪುಜಾರಿ ಹಿರಿಯಡ್ಕ ಅವರು ಮನೆಮದ್ದುಗಳ ಬಗ್ಗೆ ತಿಳಿಸಿದರು. ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಊರಿನ ಹಿರಿಯರಾದ ಶಾರದಾ ಪೂಜಾರಿ, ಬೊಗ್ಗು, ಬೋಜ ಪೂಜಾರಿ ತಡ್ಡೇಮಾರ್ ಅವರಿಗೆ ಗೌರವಧನವಿತ್ತು ಸಮ್ಮಾನಿಸಲಾಯಿತು. ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಸಾಕಮ್ಮ, ಹಾಲು ಉತ್ಪಾದಕ ಮಹಿಳಾ ಸಹಕಾರಿ ಸೇವಾ ಸಂಘದ ಅಧ್ಯಕ್ಷೆ ವನಜಾ ಭಂಡಾರಿ, ಕರಾವಳಿ ನ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ದಿನೇಶ್ ಜಿ. ನಿಡಂಬೂರು, ನವೋದಯ ಸ್ವಸಹಾಯ ಸಂಘಗಳ ಒಕ್ಕೂಟ ಕಡೆಕಾರು ಇದರ ಎಸ್‌ಸಿಡಿಸಿಸಿ ಬ್ಯಾಂಕಿನ ಸ್ವಸಹಾಯ ಸಂಘಗಳ ಮೇಲ್ವಿಚಾರಕ ಚಂದ್ರಶೇಖರ್, ಸಂಘದ ನಿಕಟ ಪೂರ್ವಾಧ್ಯಕ್ಷ ತಾರಾನಾಥ ಆರ್. ಸುವರ್ಣ, ಕೋಶಾಧಿಕಾರಿ ರಾಜೇಶ್ ಡಿ. ಪಾಲನ್, ಕಾರ್ಯದರ್ಶಿ ಭಾಸ್ಕರ ಸುವರ್ಣ ಉಪಸ್ಥಿತರಿದ್ದರು. ಸುಮಾರು 70 ಮಂದಿ ಮಹಿಳಾ ಸದಸ್ಯರು ತಯಾರಿಸಿ ತಂದ ಆಟಿದ ತಿನಸುಗಳ ಪ್ರದರ್ಶನ ಮತ್ತು ಭೋಜನದ ವ್ಯವಸ್ಥೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.