ಕಾರ್ಕಳದ ಮುಳುಗು ಸೇತುವೆಗಳಿಗೆ ಮುಕ್ತಿ: ಸುನಿಲ್ ಕುಮಾರ್
Team Udayavani, Jun 27, 2018, 2:05 AM IST
ಅಜೆಕಾರು: ಕಾರ್ಕಳ ತಾಲೂಕಿನ ಜಿಲ್ಲಾ ಹೆದ್ದಾರಿಯಲ್ಲಿದ್ದ ಎಲ್ಲಾ ಮುಳುಗು ಸೇತುವೆಗಳಿಗೆ ಮುಕ್ತಿ ನೀಡಿ ವಿಶಾಲ ಸೇತುವೆಗಳನ್ನು ನಿರ್ಮಿಸಲಾಗಿದ್ದು ಕ್ಷೇತ್ರದ ಜನತೆಯ ಬಹುದಶಕಗಳ ಬೇಡಿಕೆ ಈಡೇರಿಸಲಾಗಿದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು. ಅವರು ಕಡ್ತಲ ತೀರ್ತೊಟ್ಟಿನಲ್ಲಿ 2.40 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಉದ್ಘಾಟಿಸಿ ಮಾತನಾಡಿದರು.
ವಿಶಾಲ ಸೇತುವೆ
ಕಾರ್ಕಳ ತಾಲೂಕಿನ ಜಿಲ್ಲಾ ಹೆದ್ದಾರಿಗಳಲ್ಲಿದ್ದ ಬೋಳ ಕಾಂತಾವರ ಮುಳುಗು ಸೇತುವೆ, ದುರ್ಗಾ ಮುಳುಗು ಸೇತುವೆ, ಮಾಳ ಹುಕ್ರಟ್ಟೆ ಮುಳುಗು ಸೇತುವೆ, ತೀರ್ತೊಟ್ಟು ಮುಳುಗು ಸೇತುವೆಗಳಿಂದ ಸ್ಥಳೀಯ ಜನರು ಮಳೆಗಾಲದಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದರು. ಸ್ಥಳೀಯರ ಬೇಡಿಕೆಯಂತೆ ಎಲ್ಲ 4 ಮುಳುಗು ಸೇತುವೆಗಳನ್ನು ತೆರವುಗೊಳಿಸಿ ವಿಶಾಲ ಸೇತುವೆ ನಿರ್ಮಿಸಲಾಗಿದೆ ಎಂದರು.
ಶೀಘ್ರದಲ್ಲಿಯೇ ಟೆಂಡರ್
ಕಡ್ತಲ ಪಂಚಾಯತ್ ವ್ಯಾಪ್ತಿಯ ಇನ್ನೊಂದು ಸೇತುವೆಯಾದ ದರ್ಬುಜೆ ಸೇತುವೆಯು ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಮುಗಿದು ಅಕ್ಟೋಬರ್ ವೇಳೆಗೆ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರು. ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿ ಕಳೆದ 5 ವರ್ಷಗಳ ಅವಧಿಯಲ್ಲಿ ಕಾರ್ಕಳ ತಾಲೂಕಿನಲ್ಲಿ ದಾಖಲೆಯ ಪ್ರಮಾಣದಲ್ಲಿ ಕಿಂಡಿ ಅಣೆಕಟ್ಟು, ಸೇತುವೆ, ರಸ್ತೆ ನಿರ್ಮಿಸಲಾಗಿದ್ದು ಮುಂದಿನ ದಿನಗಳಲ್ಲಿಯೂ ಶಾಸಕರ ಹೆಚ್ಚಿನ ಮುತುವರ್ಜಿಯೊಂದಿಗೆ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದರು.
ಮುಳುಗು ಸೇತುವೆಗೆ ಮುಕ್ತಿ
ಜಿ. ಪಂ. ಸದಸ್ಯೆ ಜ್ಯೋತಿ ಹರೀಶ್ ಮಾತನಾಡಿ, ದಶಕಗಳಿಂದ ಸ್ಥಳೀಯ ಜನರು ಮಳೆಗಾಲದಲ್ಲಿ ತೀವ್ರ ಅಪಾಯಕಾರಿಯಾಗಿ ಸಂಚಾರ ಮಾಡುತ್ತಿದ್ದ ತೀರ್ತೊಟ್ಟು ಮುಳುಗು ಸೇತುವೆಗೆ ಮುಕ್ತಿ ಕೊಟ್ಟು ಭರವಸೆಯಂತೆ ವಿಶಾಲ ಸೇತುವೆ ನಿರ್ಮಿಸಿಕೊಟ್ಟಿದ್ದಾರೆ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸತೀಶ್ ಶೆಟ್ಟಿ ಮುಟ್ಲುಪಾಡಿ, ತಾ. ಪಂ. ಸದಸ್ಯ ಹರೀಶ್ ನಾಯಕ್, ಉದ್ಯಮಿಗಳಾದ ಯೋಗೀಶ್ ಮಲ್ಯ, ದಿನೇಶ್ ಪೈ, ಕಡ್ತಲ ಗ್ರಾ. ಪಂ. ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ, ಮರ್ಣೆ ಪಂಚಾಯತ್ ಅಧ್ಯಕ್ಷ ದಿನೇಶ್ ಕುಮಾರ್, ಗುತ್ತಿಗೆದಾರರಾದ ಕೆದೂರು ಸದಾನಂದ ಶೆಟ್ಟಿ, ನಿವೃತ್ತ ಅರಣ್ಯ ಇಲಾಖೆ ಅಧಿಕಾರಿ ಪೂವಪ್ಪ, ಕ್ಯಾಂಪ್ಕೋ ನಿರ್ದೇಶಕ ದಯಾನಂದ ಹೆಗ್ಡೆ, ಎಂಜಿನಿಯರ್ ಸುಂದರ್ ಹೆಗ್ಡೆ, ಅಜೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಭವಾನಿ ಶಂಕರ್ ಮೊದಲಾದವರು ಉಪಸ್ಥಿತರಿದ್ದರು.
ಕಡ್ತಲ ಪಿಡಿಒ ವಿಜಯ, ಮರ್ಣೆ ಪಿಡಿಒ ಪುರಂದರ, ಉದ್ಯಮಿ ಮಂಜುನಾಥ್, ಎಪಿಎಂಸಿ ಸದಸ್ಯ ರತ್ನಾಕರ ಅಮೀನ್, ಕಂದಾಯ ಅಧಿಕಾರಿಗಳಾದ ಮಂಜುನಾಥ್ ನಾಯಕ್, ಅಜೆಕಾರು ಪೊಲೀಸ್ ಠಾಣಾಧಿಕಾರಿ ರೋಸರಿಯೋ ಡಿ’ಸೋಜಾ, ಉದ್ಯಮಿ ಅಲ್ಫೋನ್ಸ್ ಡಿ’ಸೋಜಾ, ವಲಯ ಲಯನ್ಸ್ ಅಧ್ಯಕ್ಷ ಹರೀಶ್ ಅಧಿಕಾರಿ, ಡಾ| ಪ್ರಮೋದ್‌ಕುಮಾರ್ ಹೆಗ್ಡೆ, ಡಾ| ಸುದರ್ಶನ್ ಹೆಬ್ಟಾರ್, ಸಂಪತ್ ಕುಮಾರ್, ಜಗದೀಶ್ ಹೆಗ್ಡೆ, ಸಮೃದ್ಧಿ ಪ್ರಕಾಶ್ ಶೆಟ್ಟಿ ಸತೀಶ್ ಪೂಜಾರಿ, ವ್ಯವಸಾಯ ಸೇವಾ ಸಹಕಾರಿ ಸಂಘದ ವ್ಯವಸ್ಥಾಪಕರಾದ ಶೋಭಾ ಶೆಟ್ಟಿ ಹಾಗೂ ಉಭಯ ಪಂಚಾಯತ್‌ಗಳ ಸದಸ್ಯರು ಉಪಸ್ಥಿತರಿದ್ದರು. ಉದ್ಯಮಿ ನಂದಕುಮಾರ್ ಹೆಗ್ಡೆ ನಿರೂಪಿಸಿದರು. ಅರುಣ್ ಕುಮಾರ್ ಹೆಗ್ಡೆ ಸ್ವಾಗತಿಸಿದರು. ದಯಾನಂದ ಹೆಗ್ಡೆ ಪ್ರಸ್ತಾವಿಸಿ, ಹರೀಶ್ ನಾಯಕ್ ವಂದಿಸಿದರು.
ಶಾಸಕರು, ಎಂಜಿನಿಯರ್ ಗೆ ಸಮ್ಮಾನ
ಮರ್ಣೆ ಹಾಗೂ ಕಡ್ತಲ ಪಂಚಾಯತ್ ಗಳನ್ನು ಸಂಪರ್ಕಿಸುವ ಪ್ರಮುಖ ಸೇತುವೆ ಯಾದ ತೀರ್ತೊಟ್ಟು ಸೇತುವೆಗೆ ಅನುದಾನ ಒದಗಿಸಿ ಸ್ಥಳೀಯ ಜನತೆಯ ಬಹುದಿನದ ಬೇಡಿಕೆ ಈಡೇರಿಸಿದ ಶಾಸಕ ಸುನಿಲ್ ಕುಮಾರ್, 3 ತಿಂಗಳ ಒಳಗೆ ಗುಣಮಟ್ಟ ಕಾಯ್ದುಕೊಂಡು ಸೂಕ್ತ ಸಮಯದಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟ ಗುತ್ತಿಗೆದಾರ ಕೆದೂರು ಸದಾನಂದ ಶೆಟ್ಟಿಯವರನ್ನು ಉಭಯ ಪಂಚಾಯತ್ ಗಳ ವತಿಯಿಂದ ಸಮ್ಮಾನಿಸಲಾಯಿತು. ಲೋಕೋಪಯೋಗಿ ಇಲಾಖೆಯ ಇಂಜಿನೀಯರ್ ಸುಂದರ್ ಹೆಗ್ಡೆ ಅವರನ್ನೂ ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.