ಹೊಸ ಕಟ್ಟಡ ನಿರ್ಮಾಣ: ಅಡ್ಡಿ ದೂರಾಗುವ ಸಂಭವ

60 ವರ್ಷಗಳ ಹಳೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ

Team Udayavani, Jan 31, 2020, 5:40 AM IST

2901BELMNE4

ಬೆಳ್ಮಣ್‌: ಸಮಸ್ಯೆಗಳ ಸರಮಾಲೆಯ ಜತೆಯಲ್ಲಿ 60 ವರ್ಷಗಳ ಹಳೆಯ ಕಟ್ಟಡದಲ್ಲೇ ರೋಗಿಗಳಿಗೆ ಉತ್ತಮ ಸೇವೆ ನೀಡುತ್ತ ಬಂದಿರುವ ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಈ ಹಿಂದೆ ಪಹಣಿ ಪತ್ರದ ಸಮಸ್ಯೆಯಿಂದ ಅಡ್ಡಿ ಉಂಟಾಗಿದ್ದು, ಪ್ರಸ್ತುತ ಸ್ಥಳೀಯ ಗ್ರಾಮ ಪಂಚಾಯತ್‌ ಆಡಳಿತದ ಶತ ಪ್ರಯತ್ನದಿಂದ ಸಮಸ್ಯೆ ಪರಿಹಾರವಾಗುವ ಎಲ್ಲ ಲಕ್ಷಣಗಳು ಇವೆ.

ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಪಹಣಿಪತ್ರದ ಗೊಂದಲ ಇದ್ದು ಕೂಡಲೇ ಸರಿಪಡಿಸಿ ಸಮಸ್ಯೆ ಪರಿಹರಿಸಬೇಕೆಂದು ಉಲ್ಲೇಖೀಸಿ ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಹಾಗೂ ಕಾರ್ಕಳ ತಹಶೀಲ್ದಾರ್‌ಅವರಿಗೆ ಮುಂಡ್ಕೂರು ಗ್ರಾಮ ಪಂಚಾಯತ್‌ ಸದಸ್ಯ ರಘುವೀರ ಶೆಣೈ ಅವರು ಬರೆದಿರುವ ಪತ್ರಕ್ಕೆ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಈ ಮೂಲಕ ಅತೀ ಶೀಘ್ರ ಪಹಣಿ ತಿದ್ದುಪಡಿ ನಡೆದು ಮುಂಡ್ಕೂರು ಗ್ರಾಮ ಪಂಚಾಯತ್‌ನ ಜನಸಾಮಾನ್ಯರ ಆರೋಗ್ಯ ಕಾಪಾಡುವ ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸರ್ವ ಸುಸಜ್ಜಿತ ನೂತನ ಕಟ್ಟಡ ಭಾಗ್ಯ ಲಭಿಸಲಿದೆ.

1,783 ಕುಟುಂಬ
ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸೇವೆ ಉತ್ತಮವಾಗಿದ್ದರೂ ಇಲ್ಲಿನ ಆಸ್ಪತ್ರೆಯ ಕಟ್ಟಡ ಮಾತ್ರ ಹಳೆಯದಾಗಿದೆ. ಮುಂಡ್ಕೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ 1,783 ಕುಟುಂಬಗಳ 7,781 ಮಂದಿಯ ಆರೋಗ್ಯ ಕಾಪಾಡುತ್ತ ಬಂದಿರುವ ಆಸ್ಪತ್ರೆಗೆ ಹೊಸ ಕಟ್ಟಡದ ಆವಶ್ಯಕತೆಯಿದ್ದು ಪಹಣಿ ಪತ್ರದ ಸಮಸ್ಯೆ ಎದುರಾಗಿತ್ತು.

ದೋಷದ ಮಾಹಿತಿ
ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆಯಲ್ಲಿ ಸರ್ವೆ ನಂಬ್ರ 340/1ಬಿ ರ 2.54 ಎಕರೆ ಸ್ಥಳದಲ್ಲಿ ಈ ಹಿಂದೆ 1960ರಲ್ಲಿ ನಿರ್ಮಾಣಗೊಂಡ ಈ ಆಸ್ಪತ್ರೆಯ ಜಾಗದ ಪಹಣಿ ಪತ್ರದ ಕಲಂ 9ರಲ್ಲಿ ಸರಕಾರ ಎಂದು ನಮೂದಾಗಿರುವುದು ಈ ಕಟ್ಟಡ ಪುನರ್‌ನಿರ್ಮಾಣ ಯೋಜನೆಗೆ ಅಡ್ಡಿಯಾಗಿತ್ತು. ಈ ಬಗ್ಗೆ ಮುಂಡ್ಕೂರು ಗ್ರಾಮ ಪಂಚಾಯತ್‌ ಆಡಳಿತ ಕಾರ್ಕಳ ಶಾಸಕರು ಹಾಗೂ ಜಿಲ್ಲಾ ಪಂಚಾಯತ್‌ಗೆ ಕಟ್ಟಡ ನಿರ್ಮಾಣದ ಬಗ್ಗೆ ಮನವಿ ಸಲ್ಲಿಸಿದಾಗ ಈ ದೋಷದ ಮಾಹಿತಿ ಲಭ್ಯವಾಗಿತ್ತು. ಪಹಣಿ ಪತ್ರದಲ್ಲಿ ಸರಕಾರ ಎಂಬ ಪದದ ಬದಲಿಗೆ ಆರೋಗ್ಯ ಇಲಾಖೆ ಎಂಬುದಾಗಿ ತಿದ್ದುಪಡಿ ಮಾಡಿ ನಮೂದಿಸುವಂತೆ ಪಂಚಾಯತ್‌ ಸದಸ್ಯ ರಘುವೀರ ಶೆಣೈ ಮನವಿ ಮಾಡಿದ್ದರು. ಈಗ ಎಲ್ಲ ಕಡೆಗಳಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದ್ದು ಮುಂಡ್ಕೂರಿನ ಜನತೆ ನೂತನ ಕಟ್ಟಡ ಭಾಗ್ಯಕ್ಕಾಗಿ ಕಾತರರಾಗಿದ್ದಾರೆ.

ಇನ್ನೂ ಹಲವು ಬೇಡಿಕೆಗಳು
ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ಕಟ್ಟಡದ ಜತೆಯಲ್ಲಿ ಹಲವಾರು ಬೇಡಿಕೆಗಳು ಈಡೇರಬೇಕಾಗಿದೆ. ಪ್ರತೀ ದಿನ ನೂರಕ್ಕೂ ಹೆಚ್ಚು ಜನಸಾಮಾನ್ಯರು ವೈದ್ಯಕೀಯ ಸೇವೆ, ಶುಶ್ರೂಷೆ ಹಾಗೂ ಮಾಹಿತಿಗಾಗಿ ಬರುತ್ತಿದ್ದು ಎಲ್ಲ ವ್ಯವಸ್ಥೆಗಳನ್ನೂ ಕಲ್ಪಿಸಲಾಗುತ್ತಿದೆ. ಹೈಟೆಕ್‌ ಆಸ್ಪತ್ರೆ ಗಳಲ್ಲಿ ಸಿಗುವ ಹೆಚ್ಚಿನ ಸೌಲಭ್ಯಗಳನ್ನು ಇಲ್ಲಿನ ವೈದ್ಯಾದಿಕಾರಿಗಳು ಹಾಗೂ ಸಿಬಂದಿ ನೀಡುತ್ತಿದ್ದರೂ ಹಲವಾರು ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. 4 ಉಪ ಕೇಂದ್ರಗಳಿರುವ ಈ ಆಸ್ಪತ್ರೆಯ ಮುಂಡ್ಕೂರು ಹಾಗೂ ಸಚ್ಚೇರಿಪೇಟೆ ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡ ಇದೆ. 4 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆ ಖಾಲಿ ಇದ್ದು, ಸದ್ಯಕ್ಕೆ 2 ಮಂದಿಯನ್ನಾದರೂ ನೀಡಿದರೆ ಉತ್ತಮ ಎನ್ನುವುದು ಜನರ ಅಹವಾಲು. ನೀರಿನ ವ್ಯವಸ್ಥೆಗೆ ಬೋರ್‌ವೆಲ್‌, ಸಿಬಂದಿಗೆ ವಸತಿಗೃಹದ ಆವಶ್ಯಕತೆಯಿದೆ.

ಕಾರ್ಕಳ ಶಾಸಕರು, ಉಡುಪಿ ಜಿಲ್ಲಾ ಪಂಚಾಯತ್‌, ಮುಂಡ್ಕೂರು ಗ್ರಾಮ ಪಂಚಾಯತ್‌ ಈ ಆಸ್ಪತ್ರೆಯ ನೂತನ ಕಟ್ಟಡದ ಬಗ್ಗೆ ಸಮಗ್ರ ಚಿಂತನ ನಡೆಸಲು ಸಕಾಲವಾಗಿದ್ದು, ಈಗಾಗಲೇ ಪಂಚಾಯತ್‌ ಆಡಳಿತ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಶೀಘ್ರವೇ ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ದೊರಕುವಲ್ಲಿ ಜನಪ್ರತಿನಿಧಿಗಳು ಅ ಧಿಕಾರಿಗಳು ಶ್ರಮಿಸಬೇಕಾಗಿದೆ.

60 ವರ್ಷ ಹಳೆಯದು
1960ರಲ್ಲಿ ನಿರ್ಮಾಣಗೊಂಡ ಈ ಆಸ್ಪತ್ರೆಯ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯಾ ಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿ ಧಿಗಳ ಮುತುವರ್ಜಿಯಲ್ಲಿ ಇಲಾಖೆಯ ನೆರವಿನಿಂದ ಕೆಲವೊಂದು ಬಾರಿ ನವೀಕರಣಗೊಂಡದ್ದು ಬಿಟ್ಟರೆ ಪೂರ್ಣ ಪ್ರಮಾಣದಲ್ಲಿ ಕಟ್ಟಡ ನಿರ್ಮಾಣಗೊಳ್ಳದೇ ಇರು ವುದು ಈ ಭಾಗದ ಜನಸಾಮಾನ್ಯರನ್ನು ಚಿಂತೆಗೀಡು ಮಾಡಿದೆ. ಈ ಹಿಂದೆ 2012ರಲ್ಲಿ ನಬಾರ್ಡ್‌ ಯೋಜನೆಯಡಿ ನೂತನ ಕಟ್ಟಡ ನಿರ್ಮಾಣದ ಚಿಂತನೆ ನಡೆಸಲಾಗಿತ್ತಾದರೂ ಆಸ್ಪತ್ರೆ ಇರುವ ಜಾಗದ ಪಹಣಿ ಪತ್ರದ ಗೊಂದಲ ಹೊಸ ಕಟ್ಟಡ ನಿರ್ಮಾಣದ ಆಸೆಗಳಿಗೆ ತಣ್ಣೀರೆರಚಿತ್ತು.

ಪಹಣಿಪತ್ರ ತಿದ್ದುಪಡಿ
ಶಾಸಕನ ನೆಲೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಲಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಕಂದಾಯ ಇಲಾಖೆಯ ಮೂಲಕ ಪಹಣಿಪತ್ರ ತಿದ್ದುಪಡಿ ಮಾಡಿಸಿ ಮುಂದಿನ ದಿನಗಳಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಎಲ್ಲ ಸಹಕಾರ ನೀಡಲಾಗುವುದು.
-ವಿ. ಸುನಿಲ್‌ ಕುಮಾರ್‌, ಶಾಸಕರು, ಕಾರ್ಕಳ

ಎಲ್ಲ ಸಹಕಾರ
ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಇರುವ ಎಲ್ಲ ನೆರವು ನೀಡಲಾಗುವುದು.
-ರೇಷ್ಮಾ ಉದಯ ಶೆಟ್ಟಿ,ಜಿಲ್ಲಾ ಪಂಚಾಯತ್‌ ಸದಸ್ಯೆ

ಸಕಾರಾತ್ಮಕ ಸ್ಪಂದನೆ
ಪಂಚಾಯತ್‌ ಪರವಾಗಿ ನೀಡಿದ್ದ ಪತ್ರಗಳಿಗೆ ಸಂಬಂಧಪಟ್ಟವರಿಂದ ಸಕಾರಾತ್ಮಕ ಪ್ರತ್ಯುತ್ತರ ಬಂದಿದೆ. ಈ ಬಗ್ಗೆ ಪಂಚಾಯತ್‌ ಆಡಳಿತ ಗಂಭೀರವಾಗಿ ಮುನ್ನಡೆಯಲಿದೆ.
-ರಘುವೀರ ಶೆಣೈ,ಮುಂಡ್ಕೂರು ಗ್ರಾಮ ಪಂಚಾಯತ್‌ ಸದಸ್ಯ

ನೂತನ ಕಟ್ಟಡ ಅಗತ್ಯ
ಆಸ್ಪತ್ರೆಯಲ್ಲಿ ಉತ್ತಮ ಸೇವೆ ದೊರಕುತ್ತಿದ್ದು ಇಲ್ಲಿಗೆ ನೂತನ ಕಟ್ಟಡದ ಆವಶ್ಯಕತೆ ಯಿದೆ. ಹಲವು ವರ್ಷಗಳಿಂದ ನೂತನ ಕಟ್ಟಡ ಬೇಡಿಕೆಯಿದ್ದರೂ ಪಹಣಿ ಪತ್ರದ ಸಮಸ್ಯೆಯಿಂದ ನೂತನ ಕಟ್ಟಡ ನಿರ್ಮಾಣಗೊಂಡಿಲ್ಲ. ಜನಪ್ರತಿನಿ ಧಿಗಳು ಈ ಬಗ್ಗೆ ಶ್ರಮ ವಹಿಸಿ ಕಟ್ಟಡ ನಿರ್ಮಾಣವಾಗುವತ್ತ ಮನ ಮಾಡಬೇಕಾಗಿದೆ.
-ರಮೇಶ್‌ ಶೆಟ್ಟಿ,ಗ್ರಾಮಸ್ಥರು

-ಶರತ್‌ ಶೆಟ್ಟಿ ಮುಂಡ್ಕೂರು

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

8

Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ

5-thekkatte

Thekkatte: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.