ಉಡುಪಿಗೆ ಹೊಸ ಉಪ ವಿಭಾಗ ಕಚೇರಿ: ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ


Team Udayavani, Jun 12, 2019, 6:10 AM IST

udupi

ಉಡುಪಿ: ಜಿಲ್ಲೆಯ ಏಕೈಕ ಕುಂದಾಪುರ ಉಪವಿಭಾಗಕ್ಕೆ ಏಳು ತಾಲ್ಲೂಕುಗಳಿಂದ ಭಾರೀ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದೊಂದಿಗೆ ಆಡಳಿತಾತ್ಮಕವಾಗಿ ಎರಡು ಉಪವಿಭಾಗ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹೊಸ ಉಪವಿಭಾಗ ರಚನೆ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಸ್ವಾತಂತ್ರ್ಯ ಪೂರ್ವದ ಉಪವಿಭಾಗ
ಕುಂದಾಪುರ ಉಪವಿಭಾಗ ಸ್ವಾತಂತ್ರ್ಯ ಪೂರ್ವದಿಂದಲೂ ಅಸ್ತಿತ್ವದಲ್ಲಿದ್ದ ಆಡಳಿತಾತ್ಮಕ ಉಪವಿಭಾಗವಾಗಿದೆ. ಬ್ರಿಟಿಷರ ಆಡಳಿತ ಸಮಯದಲ್ಲಿ ಕುಂದಾಪುರ ತಾಲೂಕು ಉ.ಕ. ಜಿಲ್ಲೆ ವ್ಯಾಪ್ತಿಯಲ್ಲಿತ್ತು. ಆ ಸಂದರ್ಭ ಉ.ಕ., ದ.ಕ. ಒಂದೇ ಜಿಲ್ಲೆಯಾಗಿ ಮದ್ರಾಸ್‌ ಪ್ರಾಂತ್ಯಕ್ಕೆ ಒಳಪಟ್ಟಿತ್ತು. 1862ರಲ್ಲಿ ದ.ಕ. ಪ್ರತ್ಯೇಕ ಜಿಲ್ಲೆಯಾಗಿ ಮದ್ರಾಸ್‌ ಪ್ರಾಂತ್ಯದಲ್ಲಿ ಉಳಿದಿತ್ತು. ಆ ಸಂದರ್ಭ ಕುಂದಾಪುರ ತಾಲೂಕು ದ.ಕ. ಜಿಲ್ಲೆಗೆ ಸೇರ್ಪಡೆಯಾಗಿತ್ತು.

1927ರಲ್ಲಿ ಸಹಾಯಕ ಕಮಿಷನರ್‌ ನೇಮಕ!
ದ.ಕ. ಜಿಲ್ಲೆಯ ಕಂದಾಯ ಆಡಳಿತ ಅನುಕೂಲಕ್ಕಾಗಿ 1927ರ ಪೂರ್ವ ಜಿಲ್ಲೆಯನ್ನು ಪುತ್ತೂರು, ಮಂಗಳೂರು, ಕುಂದಾಪುರ ಉಪವಿಭಾಗಳಾಗಿ ವಿಂಗಡಿಸಲಾಯಿತು. ಕುಂದಾಪುರ ಉಪವಿಭಾಗಕ್ಕೆ ಕುಂದಾಪುರ, ಉಡುಪಿ, ಕಾರ್ಕಳ ಜತೆ ಸೇರಿಸಿ ಸಹಾಯಕ ಕಮಿಷನರ್‌ ನೇಮಿಸಲಾಗಿತ್ತು.

ಜಿಲ್ಲೆಯಾದ ಬಳಿಕ ಪ್ರಥಮ ಪ್ರಸ್ತಾವ
1997 ಆಗಸ್ಟ್‌ 25ರಂದು ಉಡುಪಿ ಜಿಲ್ಲೆ ರಚನೆಯಾಗಿತ್ತು. ಆ ಸಂದರ್ಭ ಕುಂದಾಪುರ ಉಪವಿಭಾಗ ಉಡುಪಿ ಜಿಲ್ಲೆಯ ವ್ಯಾಪ್ತಿಗೆ ಸೇರ್ಪಡೆಯಾಗಿತ್ತು. ಇದೀಗ 22 ವರ್ಷಗಳ ಬಳಿಕ ಜಿಲ್ಲೆಯಿಂದ ಹೊಸ ಉಪವಿಭಾಗ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಒಂದು ಉಡುಪಿ ನಗರಸಭೆ ಅಧಿವೇಶನದಲ್ಲಿ ಕುಂದಾಪುರ ಉಪವಿಭಾಗೀಯ ಕಚೇರಿಯನ್ನು ಉಡುಪಿಗೆ ಸ್ಥಳಾಂತರಿಸಬೇಕೆಂಬ ನಿರ್ಣಯವಾಗಿತ್ತು. ಬಳಿಕ ಅಲ್ಲಿಯೇ ಬಿದ್ದು ಹೋಯಿತು. ಈಗಿನ ಬೇಡಿಕೆ ಕುಂದಾಪುರದ ಜತೆಗೆ ಉಡುಪಿಗೆ ಪ್ರತ್ಯೇಕ ಉಪವಿಭಾಗ.

ಅತ್ಯಧಿಕ ಕಡತ ವಿಲೇವಾರಿ ಬಾಕಿ
ಇಡೀ ರಾಜ್ಯದಲ್ಲಿ ಕುಂದಾಪುರ ಎಸಿ ಕೋರ್ಟ್‌ ನಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳು ಇತ್ಯರ್ಥ ಬಾಕಿಯಿವೆ. ವರ್ಷಕ್ಕೆ ಸರಾಸರಿ 4,55,876 ಅರ್ಜಿಗಳು ಸ್ವೀಕೃತವಾಗುತ್ತಿದ್ದು, ಕಾರ್ಯ ದೊತ್ತಡದಿಂದ ಎಲ್ಲ ಕಡತಗಳು ವಿಲೇವಾರಿ ಯಾಗುತ್ತಿಲ್ಲ. ಜಿಲ್ಲೆಗೆ ಒಂದೇ ಉಪವಿಭಾಗ ಇರುವುದರಿಂದ ಕಡತಗಳ ವಿಲೇವಾರಿ ನಿಧಾನವಾಗುತ್ತಿದೆ.

ಉಪ ವಿಭಾಗದ ಕಾರ್ಯ
7 ತಾಲೂಕುಗಳ ಖಾತಾ ಬದಲಾವಣೆ ತಿದ್ದುಪಡಿ ಸಂಬಂಧಿಸಿದ ಮೇಲ್ಮನವಿ ಪ್ರಾಧಿಕಾರ ಉಪವಿಭಾಗದ್ದಾಗಿರುತ್ತದೆ. ಜಾಗದ ನಕ್ಷೆ ಹಾಗೂ ಆರ್‌ಟಿಸಿ ತಾಳೆಯಾಗದ ಪ್ರಕರಣಗಳ ವಿಚಾರಣೆ, ಸಣ್ಣಪುಟ್ಟ ತಿದ್ದುಪಡಿಯಾದ ಪಹಣಿಗೆ ಅವರೇ ಎಸಿ ಅನುಮೋದನೆ ಮಾಡಬೇಕಾಗಿದೆ. ಅಲ್ಲದೇ ರಾಜ್ಯ, ಕೇಂದ್ರ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಜಿಲ್ಲೆಯ ಭೂಸ್ವಾಧೀನ ಕೆಲಸ ಸೇರಿದಂತೆ ವಿವಿಧ ಕೆಲಸಗಳ ಜವಾಬ್ದಾರಿ ಉಪವಿಭಾಗದ ಸಹಾಯಕ ಕಮಿಷನರ್‌ ಮೇಲಿದೆ.

ಶೀಘ್ರ ವಿಲೇವಾರಿ
ಕುಂದಾಪುರ ಉಪ ವಿಭಾಗಕ್ಕೆ ಏಳು ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಕೆಲಸದ ಒತ್ತಡದಿಂದ ಸರಿಯಾದ ಸಮಯಕ್ಕೆ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಹೊಸ ಉಪ ವಿಭಾಗವಾದರೆ ಮುಂದಿನ ದಿನದಲ್ಲಿ ಕಡತಗಳು ಶೀಘ್ರವಾಗಿ ವಿಲೇವಾರಿಯಾಗಲಿವೆೆ.
-ಡಾ| ಎಸ್‌.ಎಸ್‌. ಮಧುಕೇಶ್ವರ್‌, ಸಹಾಯಕ ಕಮಿಷನರ್‌, ಉಪ ವಿಭಾಗ ಕುಂದಾಪುರ

ಒಂದು ದಿನ ಮೀಸಲಿಡಬೇಕು
ಜನರು ಕುಂದಾಪುರದಲ್ಲಿ ಇರುವ ಉಪವಿಭಾಗ ಕಚೇರಿಯ ನಿಮಿತ್ತ ತೆರಳಬೇಕಾದರೆ ಒಂದು ದಿನ ಮೀಸಲಿಡಬೇಕು. ಕುಂದಾಪುರಕ್ಕೆ ತೆರಳಬೇಕಾದರೆ ಕಾರ್ಕಳದವರು 69 ಕಿ.ಮೀ., ಉಡುಪಿಯವರು 38 ಕಿ.ಮೀ., ಕಾಪುವಿನವರು 51 ಕಿ.ಮೀ., ಹೆಬ್ರಿಯವರು 55 ಕಿ.ಮೀ. ಕ್ರಮಿಸಬೇಕಾಗುತ್ತದೆ.

3 ತಾ| ಸೇರ್ಪಡೆ ಸಾಧ್ಯತೆ
ಉಡುಪಿಯಲ್ಲಿ 10 ಕೋ.ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧದಲ್ಲಿ ಹೊಸ ಉಪವಿಭಾಗ ಪ್ರಾರಂಭಿಸುವ ಚಿಂತನೆಯಿದೆ. ಈ ಉಪವಿಭಾಗಕ್ಕೆ ಕಾಪು, ಕಾರ್ಕಳ, ಹೆಬ್ರಿ ತಾಲೂಕು ಸೇರಿಸುವ ಸಾಧ್ಯತೆಯಿದೆ.

– ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

8-udupi

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

DK SHI NEW

DCM; ಸಂಪನ್ಮೂಲ ಕ್ರೋಡೀಕರಣ ಸಮಿತಿ ಜತೆ ಸಭೆ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

Police

Kasragodu: ನರ್ಸಿಂಗ್‌ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್‌ ತನಿಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.