ಜಾಲಾಡಿಗೆ ಹೊಸ ಕಿಂಡಿ ಅಣೆಕಟ್ಟು ಮಂಜೂರು: ಸುಕುಮಾರ ಶೆಟ್ಟಿ
Team Udayavani, Jan 28, 2019, 7:21 PM IST
ಹೆಮ್ಮಾಡಿ: ಕಟ್ಬೆಲೂ¤ರು ಹಾಗೂ ಹೆಮ್ಮಾಡಿ ಗ್ರಾಮಗಳ ನೂರಾರು ಎಕ್ರೆ ಕೃಷಿ ಪ್ರದೇಶಕ್ಕೆ ವರದಾನವಾಗುವ ಸಲುವಾಗಿ ಜಾಲಾಡಿಗೆ 50 ಲಕ್ಷ ರೂ. ವೆಚ್ಚದಲ್ಲಿ ಹೊಸ ಕಿಂಡಿ ಅಣೆಕಟ್ಟು ಮಂಜೂರಾಗಿದೆ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ “ಉದಯವಾಣಿ’ಗೆ ತಿಳಿಸಿದ್ದಾರೆ.
ಕೃಷಿಕರಿಗೆ ಸಮಸ್ಯೆ
ಜಾಲಾಡಿ, ಹೊಸಕಳಿಯ ನೂರಾರು ಎಕ್ರೆ ಕೃಷಿ ಪ್ರದೇಶಕ್ಕೆ ಉಪ್ಪು ನೀರು ಬಾರದಂತೆ ತಡೆಯುವಲ್ಲಿ ಅನುಕೂಲವಾಗಿದ್ದ ಜಾಲಾಡಿಯ ಕಿಂಡಿ ಅಣೆಕಟ್ಟು ರವಿವಾರ ಕುಸಿದು ಬಿದ್ದಿದೆ. ಪರಿಣಾಮ ಕೃಷಿ ಪ್ರದೇಶಕ್ಕೆ ಉಪ್ಪು ನೀರು ನುಗ್ಗಿದ್ದು, ಕೃಷಿಕರಿಗೆ ಸಮಸ್ಯೆಯಾಗಿದೆ.
ಈ ಬಗ್ಗೆ ಪತ್ರಿಕೆಯಲ್ಲಿ ಜ. 28ರಂದು ವರದಿ ಪ್ರಕಟಗೊಂಡಿತ್ತು. ಜಾಲಾಡಿಗೆ ದೊಡ್ಡ ಕಿಂಡಿ ಅಣೆಕಟ್ಟು ಬೇಕು ಎನ್ನುವ ಕೃಷಿಕರ ಮನವಿಗೆ ಸ್ಪಂದಿಸಿ, 50 ಲಕ್ಷ ರೂ. ಅನುದಾನ ಮೀಸಲಿರಿಸಲಾಗಿದೆ. ಟೆಂಡರ್ ಬಾಕಿ ಇದ್ದು, ಅದಾದ ಕೂಡಲೇ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.
ತಾತ್ಕಾಲಿಕ ತಡೆ
ಈಗ ರೈತರೆಲ್ಲ ಸೇರಿ ಮಣ್ಣಿನ ಚೀಲಗಳನ್ನು ಇಟ್ಟು ಉಪ್ಪು ನೀರು ಕೃಷಿ ಪ್ರದೇಶಕ್ಕೆ ನುಗ್ಗದಂತೆ ತಾತ್ಕಾಲಿಕವಾಗಿ ತಡೆಯಲಾಗಿದೆ. ಆದರೆ ಇದು ಹೆಚ್ಚು ದಿನ ಉಳಿಯುವುದು ಕಷ್ಟ. ಇದರಿಂದ ಉಪ್ಪು ನೀರು ಕೃಷಿ ಭೂಮಿಗೆೆ ಯಾವಾಗ ನುಗ್ಗುತ್ತದೋ ಎಂಬ ಆತಂಕದಲ್ಲೇ ಕೃಷಿಕರು ದಿನ ಕಳೆಯುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pinarayi Vijayan: ಸಿಂಗ್ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ
Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ
Malpe: ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ
ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.