ವಿಕಾಸದ ನಿರೀಕ್ಷೆಯಲ್ಲಿ ನೂತನ ಕಾಪು ತಾಲೂಕು
Team Udayavani, Mar 13, 2018, 6:15 AM IST
ಅಲ್ಪ ಅವಧಿಯಲ್ಲೇ ತಾಲೂಕಾಗಿ ಮೇಲ್ದರ್ಜೆಗೇರಿದ ಕಾಪು ಈಗ ಅಭಿವೃದ್ಧಿ ಶಕೆಯ ನಿರೀಕೆÒಯಲ್ಲಿದೆ.ಉಡುಪಿ ಜಿಲ್ಲೆಯ ಪ್ರಮುಖ ಪ್ರದೇಶ ಕಾಪು ಹಲವು ವಿಭಾಗಗಳಲ್ಲಿ ಗುರುತಿಸಿಕೊಂಡಿದ್ದು, ಇವುಗಳಿಗೆ ಪೂರಕವಾದ ಯೋಜನೆಗಳ ಅಗತ್ಯ ಹೊಂದಿದೆ.
ಕಾಪು: ಪ್ರವಾಸೋದ್ಯಮ, ಧಾರ್ಮಿಕ, ಶೈಕ್ಷಣಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಕಾಪು ಈಗ ತಾಲೂಕಾಗಿ ಮೇಲ್ದರ್ಜೆಗೇರಿದೆ.
ತಾಲೂಕು ಅಸ್ತಿತ್ವಕ್ಕೆ ಬಂದು ತಿಂಗಳು ಕಳೆದಿದ್ದು, ಅಭಿವೃದ್ಧಿ ಹಾದಿಯನ್ನು ಎದುರು ನೋಡುತ್ತಿದೆ. ಈಗಿರುವ ಕಂದಾಯ ಇಲಾಖೆಯನ್ನೇ ಕೇಂದ್ರೀವಾಗಿರಿಸಿ, ತಾಲೂಕು ಚಟುವಟಿಕೆಗಳು ನಡೆಯುತ್ತಿವೆ.
ಇನ್ನೂ ನೂತನ ತಹಶೀಲ್ದಾರರ ನೇಮಕ ಆಗಬೇಕಿದ್ದು, ಉಡುಪಿ ತಹಶೀಲ್ದಾರರೇ ಪ್ರಭಾರ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಹಂತದಲ್ಲಿ ಇಬ್ಬರು ಉಪ ತಹಶೀಲ್ದಾರರು ಮತ್ತು 7 ಮಂದಿ ಸಿಬಂದಿಯ ನೇಮಕವಾಗಿದೆ.
ಕನಿಷ್ಠ ಅವಧಿಯಲ್ಲೇ ಸಿಕ್ಕ ಯಶಸ್ಸು
ತಾಲೂಕು ರಚನೆ ಹಿಂದೆ ಸುದೀರ್ಘ ಹೋರಾಟದ ಹಿನ್ನೆಲೆಯೇನೂ ಇಲ್ಲ. 2013ರ ವಿಧಾನಸಭಾ ಚುನಾವಣೆ ವೇಳೆ ತಾಲೂಕು ಕುರಿತಾಗಿ ಶಾಸಕ ವಿನಯ್ ಕುಮಾರ್ ಸೊರಕೆ ಪ್ರಸ್ತಾವಿಸಿದ್ದರು. ಬಳಿಕ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಸ್ಥಳೀಯ ಸಂಘ ಸಂಸ್ಥೆಗಳ ಬೆಂಬಲ ಪಡೆದು ತಾಲೂಕಿನ ಬಗ್ಗೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ವ್ಯಾಪ್ತಿಯ ಗ್ರಾಮಗಳು
ಕಾಪು ಹೋಬಳಿಯ 16 ಗ್ರಾಮ ಪಂಚಾಯತ್‌ಗಳು ಮತ್ತು ಪುರಸಭೆ ತಾಲೂಕಿನ ವ್ಯಾಪ್ತಿಗೆ ಬರಲಿವೆ. ಏಣಗುಡ್ಡೆ, ಮೂಡಬೆಟ್ಟು, ಕೋಟೆ, ಮಟ್ಟು, ಉಳಿಯಾರಗೋಳಿ, ಪಡು, ಮೂಳೂರು, ಮಲ್ಲಾರು, ಪಾಂಗಾಳ, ಇನ್ನಂಜೆ, ಕಟ್ಟಿಂಗೇರಿ, ಶಿರ್ವ, ಬೆಳ್ಳೆ, ಕುರ್ಕಾಲು, ಹೇರೂರು, ಮಜೂರು, ಪಾದೂರು, ಸಾಂತೂರು, ಪಿಲಾರು, ಕಳತ್ತೂರು, ಕುತ್ಯಾರು, ನಡಾಲು, ಪಾದೆಬೆಟ್ಟು, ಹೆಜಮಾಡಿ, ನಂದಿಕೂರು, ಪಲಿಮಾರು, ತೆಂಕ, ಬಡಾ, ಎಲ್ಲೂರು ತಾಲೂಕಿನೊಳಗೆ ಬರಲಿವೆ. 2011ರ ಜನಗಣತಿಯ ಪ್ರಕಾರ ತಾಲೂಕಿನ ಒಟ್ಟು ಜನಸಂಖ್ಯೆ 1,41,098. ಇದರಲ್ಲಿ ಪುರುಷರು – 66,696, ಮಹಿಳೆಯರು – 74,402 ಇದ್ದಾರೆ.
ಹೊಸದಾಗಿ 17 ಹುದ್ದೆ ಮಂಜೂರು
ನೂತನ ತಾಲೂಕಿಗೆ 17 ಹುದ್ದೆ ಮಂಜೂರಾಗಿದೆ. ಇದರಲ್ಲಿ ತಹಶೀಲ್ದಾರ್ ಹುದ್ದೆ-2 (ಗ್ರೇಡ್-1, ಗ್ರೇಡ್-2), ಶಿರಸ್ತೇದಾರ-2, ಪ್ರಥಮ ದರ್ಜೆ ಸಹಾಯಕ-3, ಆಹಾರ ನಿರೀಕ್ಷಕ-1, ದ್ವಿತೀಯ ದರ್ಜೆ ಸಹಾಯಕ-4 ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಬೆರಚ್ಚುಗಾರ-1, ಗ್ರೂಪ್ ಡಿ ದರ್ಜೆ ನೌಕರ-3, ವಾಹನ ಚಾಲಕ-1 ಹೀಗೆ 17 ಹುದ್ದೆ ಸೃಷ್ಟಿಮಾಡಿ ಸರಕಾರ ಆದೇಶ ಹೊರಡಿಸಿದೆ.
ತುರ್ತು ಅಗತ್ಯಗಳು
ತಾಲೂಕಿಗೆ ಪೂರಕವಾಗಿ ಸರಕಾರಿ ಕಚೇರಿಗಳು ಮತ್ತು ಅಧಿಕಾರಿಗಳ ಸಂಖ್ಯೆ ಕಡಿಮೆಯಿದ್ದು ನಿಯೋಜನೆ ಇನ್ನೂ ಆಗಬೇಕಿದೆ. ಪುರಸಭೆಯಾಗಿರುವ ಕಾಪು ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪಂಚಾಯತ್ ಮಟ್ಟಕ್ಕೆ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ ತಾಲೂಕು ವ್ಯಾಪ್ತಿಯನ್ನು ಗಮನದಲ್ಲಿಟ್ಟು ಯೋಜನೆಗಳ ಅನುಷ್ಠಾನ ಆಗಬೇಕಿದೆ. ಕುಡಿಯುವ ನೀರಿನ ಶಾಶ್ವತ ಯೋಜನೆ, ಆರೋಗ್ಯ ಇಲಾಖೆಗೆ ಸಂಬಂಧಿತ ಯೋಜನೆಗಳು, ಸಬ್ ರಿಜಿಸ್ಟ್ರಾರ್ ಕಛೇರಿ, ಕೃಷಿ ಮಾರುಕಟ್ಟೆ, ಕೃಷಿ ಮತ್ತು ತೋಟಗಾರಿಕಾ ಇಲಾಖೆ, ಸಿಆರ್‌ಝಡ್, ಅರಣ್ಯ ಇಲಾಖೆ, ಮೀನುಗಾರಿಕಾ ಇಲಾಖೆಗೆ ಸಂಬಂಧಿತ ಯೋಜನೆಗಳು ಬರಬೇಕಿದೆ.
ಅಭಿವೃದ್ಧಿ ನಿರೀಕ್ಷೆ
ಉಡುಪಿ ತಾಲೂಕಿನಿಂದ ಪ್ರತ್ಯೇಕವಾಗಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಬಳಿಕ ಕಾಪು ಸರ್ವಾಂಗೀಣ ಅಭಿವೃದ್ಧಿಯನ್ನು ಎದುರು ನೋಡುತ್ತಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶವನ್ನು ಗುರಿಯಾಗಿಸಿ ಅನೇಕ ಕೆಲಸಗಳು ನಡೆಯಬೇಕಿದೆ. ಈ ಮೂಲಕ ಸುಸ್ಥಿರ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಇದರಿಂದ ತಾಲೂಕಿನಲ್ಲಿ ಭೂಮಿಯ ಮೌಲ್ಯ ಏರಿಕೆ ಮಾರುಕಟ್ಟೆ ವಹಿವಾಟು, ಶೈಕ್ಷಣಿಕ ಬೆಳವಣಿಗೆ, ನಗರ, ಪ್ರವಾಸೋದ್ಯಮ ಅಭಿವೃದ್ಧಿಯೂ ಆಗಲಿದೆ.
ಈಗಿರುವ ತಾ| ಮಟ್ಟದ ಕಚೇರಿ
· ತಾಲೂಕು ಕಚೆೇರಿ – ಪ್ರಭಾರ ತಹಶೀಲ್ದಾರ್ /ಉಪ ತಹಶೀಲ್ದಾರ್
· ಪೊಲೀಸ್ ವೃತ್ತ ನಿರೀಕ್ಷಕರು,
· ಪೊಲೀಸ್ ಉಪ ನಿರೀಕ್ಷಕರು
· ಪೊಲೀಸ್ ಉಪನಿರೀಕ್ಷಕರು, ಶಿರ್ವ
· ಪೊಲೀಸ್ ಉಪನಿರೀಕ್ಷಕರು, ಪಡುಬಿದ್ರಿ
· ಮೆಸ್ಕಾಂ ಕಚೇರಿ
· ಬಿ.ಎಸ್.ಎನ್.ಎಲ್, ಕಚೇರಿ
· ಪ್ರಧಾನ ಅಂಚೆ ಕಚೇರಿ
· ಹೋಬಳಿ ಮಟ್ಟದ ಕೃಷಿ ಕೇಂದ್ರ
· ಪಶು ವೈದ್ಯಕೀಯ ಆಸ್ಪತ್ರೆ
ಭೌಗೋಳಿಕ ವಿಸ್ತೀರ್ಣ
ಕಾಪು ಪುರಸಭೆ ಮತ್ತು 16 ಗ್ರಾ.ಪಂ.ಗಳನ್ನು ಸೇರಿಸಿ ಕೊಂಡು ಕಾಪು ತಾಲೂಕನ್ನು ರಚಿಸಲಾಗಿದ್ದು, 26 ಕಂದಾಯ ಗ್ರಾಮಗಳು ಇದರೊಳಗೆ ಬರುತ್ತವೆ. ಪ್ರಸ್ತಾವಿತ ಕಾಪು ತಾಲೂಕಿನ ಭೌಗೋಳಿಕ ವಿಸೀ¤ರ್ಣ 54,435.34 ಎಕ್ರೆ. ಇಲ್ಲಿನ ಸಾಗುವಳಿ, ಸಾಗುವಳಿ ಯಲ್ಲದ ಭೂಮಿಯ ಬಗ್ಗೆ ಇಲಾಖಾವರು ಲೆಕ್ಕಾಚಾರ ಇನ್ನೂ ಚಾಲ್ತಿಯಲ್ಲಿದ್ದು, ಒಟ್ಟು 1,69,626.20 ರೂ.ಭೂ ಕಂದಾಯ ಸರಕಾರಕ್ಕೆ ದೊರೆಯುತ್ತದೆ.
ನೂತನ ತಾಲೂಕಿಗೆ ಮಂಜೂರಾಗಬೇಕಿರುವ ತಾಲೂಕು ಮಟ್ಟದ ಕಚೇರಿಗಳು
· ಕಾರ್ಯನಿರ್ವಹಣಾಧಿಕಾರಿ, ತಾಲೂಕು ಪಂಚಾಯತ್
· ಉಪ ನಿರ್ದೇಶಕರು, ಪಶು ಸಂಗೋಪನ ಇಲಾಖೆ
· ಜಂಟಿ ನಿರ್ದೇಶಕರು, ಕೈಗಾರಿಕಾ ಇಲಾಖೆ
· ಕಾರ್ಯನಿರ್ವಾಹಕ ಎಂಜಿನಿಯರ್, ಜಲಾನಯನ ಇಲಾಖೆ
· ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆ
· ಕಾರ್ಯದರ್ಶಿ, ಪಿ.ಸಿ.ಆರ್.ಡಿ. ಇಲಾಖೆ
· ಹಿಂದುಳಿದ ವರ್ಗಗಳ ಅಧಿಕಾರಿ, ಬಿಸಿಎಂ ಇಲಾಖೆ
· ಉಪನಿಬಂಧಕರು, ಸಹಕಾರ ಇಲಾಖೆ
· ಕಾರ್ಯದರ್ಶಿ, ಟಿ.ಎ.ಪಿ.ಸಿ.ಎಂ.ಎಸ್. ಇಲಾಖೆ
· ಉಪನಿರ್ದೇಶಕರು, ಕೃಷಿ ಇಲಾಖೆ
· ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ
· ಮ್ಯಾನೇಜರ್, ಎ.ಎಂ.ಎಫ್ ಇಲಾಖೆ
· ಕಾರ್ಮಿಕ ಅಧಿಕಾರಿ, ಕಾರ್ಮಿಕ ಇಲಾಖೆ
· ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ
· ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗ
· ಶಿಶು ಅಭಿವೃದ್ಧಿ ಅಧಿಕಾರಿ, ಶಿಶು ಅಭಿವೃದ್ಧಿ ಇಲಾಖೆ
· ತಾಲೂಕು ಆರೋಗ್ಯ ಅಧಿಕಾರಿ, ಆರೋಗ್ಯ ಇಲಾಖೆ
· ಕ್ಷೇತ್ರ ಶಿಕ್ಷಣ ಅಧಿಕಾರಿ, ಶಿಕ್ಷಣ ಇಲಾಖೆ
· ಉಪ ನಿರ್ದೇಶಕರು, ಅಕ್ಷರ ದಾಸೋಹ
· ತಾಲೂಕು ಸಮಾಜ ಕಲ್ಯಾಣ ಅಧಿಕಾರಿ
· ವಲಯ ಅರಣ್ಯಾಧಿಕಾರಿ, ಅರಣ್ಯ ಇಲಾಖೆ
· ವಲಯ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ಇಲಾಖೆ
· ಕಾರ್ಯನಿರ್ವಾಹಕ ಎಂಜಿನಿಯರ್, ಮೆಸ್ಕಾಂ
· ಉಪನೋಂದಣಾಧಿಕಾರಿ
· ಖಜಾನಾಧಿಕಾರಿ, ಉಪ ಖಜಾನೆ ಇಲಾಖೆ
· ಅಗ್ನಿ ಶಾಮಕ ಅಧಿಕಾರಿ, ಅಗ್ನಿಶಾಮಕ ಇಲಾಖೆ
· ಯುವಜನ ಸಬಲೀಕರಣ ಮತ್ತು ಕ್ರೀಡಾ ಅಧಿಕಾರಿ, ಯುವಜನ ಸೇವಾ ಇಲಾಖೆ
· ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಮೀನುಗಾರಿಕಾ ಇಲಾಖೆ
· ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ
ಸಲಹೆ ನೀಡಿ
“ಪ್ರಗತಿ ಪಥ’ ನಮ್ಮ ಊರಿನ ಪ್ರಗತಿಯ ಗತಿ ಗುರುತಿಸುವ ಪ್ರಯತ್ನ. ಕಾಪು ತಾಲೂಕು ಪ್ರಗತಿ ಕುರಿತು ಸಲಹೆಗಳಿದ್ದರೆ ನಮ್ಮ ವಾಟ್ಸಾಪ್ ನಂಬರ್ 91485 94259ಗೆ ಕಳಿಸಿ. ಸೂಕ್ತವಾದುದನ್ನು ಪ್ರಕಟಿಸುತ್ತೇವೆ. ನಿಮ್ಮ ಹೆಸರು, ಊರು ಹಾಗೂ ಭಾವಚಿತ್ರವಿರಲಿ.
– ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.