ಮೀನುಗಾರಿಕೆಯಲ್ಲಿ ಹೊಸ ವಿಧಾನ; ಉತ್ತಮ ಆದಾಯ

ಪಂಜರದಲ್ಲಿ ಮೀನು ಕೃಷಿಯತ್ತ ಮೀನುಗಾರರ ಚಿತ್ತ

Team Udayavani, Jan 7, 2020, 5:53 AM IST

26012UPPE4-12

ಕುರುಡಿ ಮೀನು ಸಾಕಣೆಯೊಂದಿಗೆ ಬೇರೆ ಮೀನುಗಳ ಸಾಕಣೆಗೆ ಪ್ರಯತ್ನ ಮಾಡಬಹುದು. (ಕೊಕ್ಕರ್‌, ಕೆಖಬೇರಿ, ಕೋಬಿಯಾ) ಸ್ಥಳೀಯವಾಗಿ ದೊರಕುವ ಸಣ್ಣ ಮೀನುಗಳ ನರ್ಸರಿ ಪಾಲನೆ ಮೀನು ಕೃಷಿಯಲ್ಲಿ ತೊಡಗಿಸಿ ಕೊಳ್ಳಬಹುದು. ಸಮಗ್ರ ಕೃಷಿ ಪದ್ಧತಿ ಯಲ್ಲಿ ಮೀನು ಕೃಷಿ ಕೈಗೊಂಡು ಉತ್ಪಾದನೆ ಹೆಚ್ಚಿಸಲು ಸಾಧ್ಯವಾಗುತ್ತದೆ.

ಉಪ್ಪುಂದ: ಮೀನುಗಾರಿಕೆ ಕ್ಷೇತ್ರದಲ್ಲಿ ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಮತ್ತು ಪೌಷ್ಠಿಕ ಆಹಾರದ ದೃಷ್ಟಿಯಿಂದ ಹೊಸ ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಮಾಡಲಾಗುತ್ತಿದೆ. ಅದರಂತೆ ಪಂಜರ ಮೀನು ಕೃಷಿ ಈಗ ಚಾಲ್ತಿಯಲ್ಲಿದೆ.

ಮಂಗಳೂರಿನ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನ ಸಂಸ್ಥೆ ಸಾಂಪ್ರದಾಯಿಕ ಮೀನುಗಾರರ ಆದಾಯ ವೃದ್ಧಿಗಾಗಿ ದಶಕಗಳ ಹಿಂದೆ ಪಂಜರದ ಮೀನು ಕೃಷಿಯನ್ನು ಪರಿಚಯಿಸಿತ್ತು.

ಜಪಾನ್‌ ಮೂಲ
ಸಮುದ್ರದಲ್ಲಿ ಪಂಜರದ ಕೃಷಿಯನ್ನು 1950ರಲ್ಲಿ ಪ್ರಥಮವಾಗಿ ಜಪಾನ್‌ ಪ್ರಾರಂಭಿಸಿತ್ತು. ಬಳಿಕ 1980ರಲ್ಲಿ ಉತ್ತರ ಯೂರೋಪ್‌ ಮತ್ತು ಉತ್ತರ ಅಮೇರಿಕಾ ಪಂಜರದಲ್ಲಿ ಸಾಲ್ಮನ್‌ ಮೀನು ಕೃಷಿಯನ್ನು ಪ್ರಾರಂಭಿಸಿತ್ತು. ಪ್ರಪಂಚಾದ್ಯಂತ ಸಮುದ್ರ ಪಂಜರ ಕೃಷಿಯಲ್ಲಿ ಶೇ.90ರಷ್ಟು ಕುರುಡಿ ಮತ್ತು ಸೀ ಬ್ರಿàಮ್‌ ತಳಿಯನ್ನು ಬಳಸಾಗುತ್ತಿದೆ.

ಭಾರತದಲ್ಲಿ ವಿಶಾಖಪಟ್ಟದಲ್ಲೇ ಮೊದಲು
ಭಾತರದಲ್ಲಿ ಮೊಟ್ಟ ಮೊದಲ ಬಾರಿಗೆ 2007ರಲ್ಲಿ ವಿಶಾಖಪಟ್ಟದಲ್ಲಿ ಸಿಎಮ್‌ಎಫ್‌ಆರ್‌ಐ ಅವರು ಪಂಜರದ ಮೀನು ಕೃಷಿಯನ್ನು ಪ್ರಾಯೋಗಿಕವಾಗಿ ನಡೆಸಿದರು. ಪ್ರಸ್ತುತ ಗುಜರಾತ್‌, ಮಹಾರಾಷ್ಟ್ರ, ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ಯಶಸ್ವಿಯಾಗಿ ನಡೆಸಲಾಗುತ್ತಿದೆ.

ಕರಾವಳಿಯಲ್ಲಿ ಪಂಜರ ಮೀನು ಕೃಷಿಯ ಮೂಲಕ ಉತ್ಪಾದನೆ ಹೆಚ್ಚಿಸುವಲ್ಲಿ ಮೀನುಗಾರಿಕೆ ಸಂಶೋಧನೆ ಸಂಸ್ಥೆ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. 2008ರಲ್ಲಿ ಈ ವಿಧಾನವನ್ನು ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದಲ್ಲಿ ಆರಂಭಿಸಿತ್ತು.

ಜಾಗ ಆಯ್ಕೆ ಹೇಗೆ?
ಪಂಜರ ಕೃಷಿಗೆ ಸಿಹಿ ನೀರು, ಸಮುದ್ರ, ಹಿನ್ನೀರು, , ಚೌಳು ನೀರು ಮತ್ತು ಅಳಿವೆಗಳು ಸೂಕ್ತ ವಾಗುತ್ತವೆ. ನೀರಿನ ಆಳ 3-5 ಮೀಟರ್‌ ಇರಬೇಕು. ನೀರಿನ ಒಳ ಹರಿವು ನಿರಂತರವಾಗಿದ್ದಲ್ಲಿ ಕರಗಿದ ಆಮ್ಲಜನಕ ಯೆಥೇಚ್ಚವಾಗಿ ದೊರಕುವುದಲ್ಲದೆ ಯಾವುದೇ ತ್ಯಾಜ್ಯ ಪಂಜರದಲ್ಲಿ ಉಳಿಯಲು ಬಿಡುವುದಿಲ್ಲ.

ಪಂಜರದ ನಿರ್ಮಾಣ
ಆಯತಾಕಾರದ 6.2 ಮೀ. ಗಾತ್ರದ ಜಿ.ಐ. ಪೈಪ್‌ಗ್ಳಿಂದ ತಯಾರಿಸಲಾದ ಪಂಜರವನ್ನು ಉಯೋಗಿಸಲು ಯೋಗ್ಯವಾಗಿರುತ್ತದೆ. ಪಂಜರದ ಹೊರ ಪದರ ನಿರ್ಮಾಣಕ್ಕೆ ಹೆಚ್‌.ಡಿ.ಪಿ.ಇ. ಮೆಷ್‌ 48ಎಂ.ಎಂ. ಬಳಸಲಾಗುತ್ತದೆ. ಒಳ ಪದರವನ್ನು ಮೆಷ್‌ 18 -20ಎಂ.ಎಂ. ಗಾತ್ರದ ನೆಟ್ಟನ್ನು ಉಪಯೋಗಿಸಲಾಗುತ್ತದೆ.

ಬೆಳೆಯುವ ತಳಿ
ಕುರುಡಿ ಮೀನು, ಕೆಂಬೇರಿ ಮೀನು, ಕೋಬಿಯಾ ಪ್ರಮುಖವಾದ ತಳಿಗಳು. ಆದರೆ ಎಲ್ಲಾ ತಳಿಗಳ ಮರಿಗಳು ಸಿಗುವುದಿಲ್ಲ. ಕುರುಡಿ ಮೀನು ಮರಿಗಳನ್ನು ರಾಜೀವ್‌ ಗಾಂಧಿ ಸೆಂಟರ್‌ ಫಾರ್‌ ಅಕ್ವಾ ಕಲ್ಚರ್‌ (ಆರ್‌ಜೆಸಿಎ) ವಿಶಾಖ ಪಟ್ಟಣ/ಚೆನ್ನೈನಲ್ಲಿ ಮಾತ್ರ ಲಭ್ಯವಿರುತ್ತದೆ. ಅಲ್ಲಿಂದ 2.5ಸೆಂ.ಮೀ.5.5ಸೆಂ.ಮೀ. ಗಾತ್ರದ ಮರಿಗಳನ್ನು ಖರೀದಿಸಲಾಗುತ್ತದೆ. ಮರಿಗಳ ಮೌಲ್ಯವು ಗಾತ್ರಕ್ಕೆ ತಕ್ಕಂತೆ ಇರುತ್ತದೆ. ಪ್ರತಿ ಮೀನಿಗೆ 1ರಿಂದ 4 ರೂ.ವರೆಗೆ ಇರುತ್ತದೆ.

ಕುರುಡಿ ಮೀನಿನ ವಿಶೇಷತೆಗಳು
ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ. ಅತಿ ಬೇಡಿಕೆ ಮತ್ತು ಬೆಲೆಯುಳ್ಳ ತಳಿ, ಹೆಚ್ಚು ಇಳುವರಿ, ಶೀಘ್ರ ಬೆಳವಣಿಗೆ, ಸ್ಥಳೀಯ ಆಹಾರಕ್ಕೆ ಹೊಂದಿಕ್ಕೊಳ್ಳತ್ತದೆ. 0-40ಪಿ.ಪಿ.ಟಿ. ವರೆಗೂ ಉಪ್ಪಿನಂಶ ತಡೆದುಕೊಳ್ಳಬಲ್ಲದು. ಸಿಹಿ ನೀರಿನಲ್ಲೂ ಸಾಕಬಹುದು.

ಮೀನುಗಳ ಪಾಲನೆ
ಸಣ್ಣ ಮೀನುಗಳನ್ನು ಪ್ರಥಮವಾಗಿ ನರ್ಸರಿ ಕೆರೆಗಳಲ್ಲಿ ಬಿತ್ತನೆ ಮಾಡಿ, ಸುಮಾರು 2ತಿಂಗಳ ಕಾಲ ಪ್ರತೀ 15 ದಿನಗಳಿಗೊಮ್ಮೆ ಗ್ರೇಡಿಂಗ್‌ ಮಾಡಿ ಬೆಳಸಲಾಗುತ್ತದೆ. ಕುರುಡಿ ಮೀನುಗಳಲ್ಲಿ ದೊಡ್ಡ ಗಾತ್ರದ ಮೀನು ಚಿಕ್ಕ ಗಾತ್ರದ ಮೀನು ಮರಿಗಳನ್ನು ತಿನ್ನು ವುದರಿಂದ ಗ್ರೇಡಿಂಗ್‌ ಮಾಡು ವುದು ಅತೀ ಅವಶ್ಯಕ. ಇಲ್ಲಿ 18-20 ಗ್ರಾಂ ಗಾತ್ರದ ವರೆಗೆ ಬೆಳಸಲಾಗುತ್ತದೆ. ಬಳಿಕ ಹಿನ್ನೀರಿನ ಪ್ರದೇಶದ ಒಂದು ಪಂಜರದಲ್ಲಿ 1000 ಮೀನು ಮರಿಗಳನ್ನು ಬಿತ್ತನೆ ಮಾಡಿ 16 ತಿಂಗಳು ಬೆಳೆಸಲಾಗುತ್ತದೆ.

ಉತ್ತಮ ಆದಾಯ
ಮೀನುಗಾರಿಕೆ ವೃತ್ತಿಯ ಜೊತೆಗೆ ಪಂಜರದ ಮೀನು ಕೃಷಿಯನ್ನು ಕೈಗೊಂಡಿದ್ದೇನೆ. ಆರಂಭದಲ್ಲಿ ಹತ್ತು ಸಾವಿರದಿಂದ ಪ್ರಾರಂಭಿಸಿ ಪ್ರಸ್ತುತ ರೂ.1.50ಲಕ್ಷ ಖರ್ಚ ಮಾಡಿ ಸುಮಾರು 4 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದೇನೆ. ಮೀನಿನ ಮರಿಗಳನ್ನು ಚೆನ್ನೈ, ಆಂಧ್ರಪ್ರದೇಶದಿಂದ ತರಬೇಕಿದೆ. ರಾಜ್ಯ ಸರಕಾರವು ಕರ್ನಾಟಕದಲ್ಲಿ ಮರಿ ಉತ್ಪನ್ನ ಕೇಂದ್ರ ನಿರ್ಮಾಣ ಮಾಡಿದರೆ ಮೀನುಗಾರರಿಗೆ ಅನುಕೂಲವಾಗುತ್ತದೆ.
– ರವೀಂದ್ರ ಖಾರ್ವಿ ಉಪ್ಪುಂದ, ರಾಷ್ಟ್ರ ಪ್ರಶಸ್ತಿ ವಿಜೇತ ಪಂಜರ ಮೀನು ಕೃಷಿಕ

ಆಹಾರ ಕ್ರಮ
ದಿನಕ್ಕೆರಡು ಬಾರಿ (ಬೆಳಗ್ಗೆ ಮತ್ತು ಸಂಜೆ) ಆಹಾರವನ್ನು ಕೊಡಬೇಕು. ಮೊದಲೆರಡು ತಿಂಗಳು ಸಿಗಡಿ ಆಹಾರ ಸ್ಟಾರrರ್‌ 1ಮತ್ತು 2ಕೊಡಲಾಗುತ್ತದೆ. ಅನಂತರ ಎರಡು ತಿಂಗಳು ಭೂತಾಯಿ ಮೀನು ಅಥವಾ ಇತರೆ ಮೀನುಗಳನ್ನು ಸಣ್ಣದಾಗಿ ಕತ್ತರಿಸಿ ನೀಡಲಾಗುತ್ತದೆ. ಮೀನಿನ ಬೆಳವಣಿಗೆಗೆ ಅನುಸಾರವಾಗಿ ಶೇ.2-3ರಷ್ಟು ಆಹಾರವನ್ನು ನೀಡಲಾ ಗುತ್ತದೆ. 6ತಿಂಗಳ ಬಳಿಕ ದೇಹದ ತೂಕದ ಶೇ.10ರಷ್ಟು ಪ್ರಮಾಣದಷ್ಟು ಆಹಾರ ನೀಡಬೇಕು.

– ಕೃಷ್ಣ ಬಿಜೂರು

ಟಾಪ್ ನ್ಯೂಸ್

Congress: ಪಕ್ಷ ಹೇಳಿದರೆ ತ್ಯಾಗ ಮಾಡಬೇಕು: ಸಚಿವ ದಿನೇಶ್‌ ಗುಂಡೂರಾವ್‌

Congress: ಪಕ್ಷ ಹೇಳಿದರೆ ತ್ಯಾಗ ಮಾಡಬೇಕು: ಸಚಿವ ದಿನೇಶ್‌ ಗುಂಡೂರಾವ್‌

BJP ನನ್ನನ್ನು ತುಳಿದಿದೆ ಎನ್ನುವುದು ತಪ್ಪು: ಈಶ್ವರಪ್ಪ

BJP ನನ್ನನ್ನು ತುಳಿದಿದೆ ಎನ್ನುವುದು ತಪ್ಪು: ಈಶ್ವರಪ್ಪ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

crime

Padubidri: ಸ್ಕೂಟಿಗೆ ಈಚರ್‌ ವಾಹನ ಢಿಕ್ಕಿ; ಸವಾರನಿಗೆ ಗಾಯ

11

Udupi: ಜಿಲ್ಲಾಧಿಕಾರಿ ಕಚೇರಿಯಲ್ಲೇ ನೆಟ್‌ವರ್ಕ್‌ ಸಮಸ್ಯೆ!

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

Congress: ಪಕ್ಷ ಹೇಳಿದರೆ ತ್ಯಾಗ ಮಾಡಬೇಕು: ಸಚಿವ ದಿನೇಶ್‌ ಗುಂಡೂರಾವ್‌

Congress: ಪಕ್ಷ ಹೇಳಿದರೆ ತ್ಯಾಗ ಮಾಡಬೇಕು: ಸಚಿವ ದಿನೇಶ್‌ ಗುಂಡೂರಾವ್‌

BJP ನನ್ನನ್ನು ತುಳಿದಿದೆ ಎನ್ನುವುದು ತಪ್ಪು: ಈಶ್ವರಪ್ಪ

BJP ನನ್ನನ್ನು ತುಳಿದಿದೆ ಎನ್ನುವುದು ತಪ್ಪು: ಈಶ್ವರಪ್ಪ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

14

Sullia: ಚರಂಡಿಯಲ್ಲಿ ಸಿಲುಕಿದ ಶಾಲಾ ವಾಹನ

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.