![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Feb 27, 2021, 3:20 AM IST
ಕಾರ್ಕಳ: ಶಿಲ್ಪಕಲೆಗೆ ಹೆಸರಾದ ಊರು ಕಾರ್ಕಳ ಪ್ರವಾಸಿ ಕೇಂದ್ರವಾಗಿ ತೆರೆದುಕೊಂಡಂತೆಯೇ, ಇದನ್ನು ಇನ್ನಷ್ಟು ಪ್ರಮುಖ ಕೇಂದ್ರವನ್ನಾಗಿ ಮಾಡುವ ಯೋಜನೆಗಳು ಮುನ್ನೆಲೆಗೆ ಬಂದಿವೆ.
ಮೂರಂಶಗಳ ಯೋಜನೆ ಸಿದ್ಧ :
ಸುಸ್ಥಿರ ಪ್ರವಾಸೋದ್ಯಮಕ್ಕೆ ಪೂರಕವಾಗಿ ತಾಲೂಕನ್ನು ಅಭಿವೃದ್ಧಿಪಡಿಸಲು ಹತ್ತು ಹಲವು ಯೋಜನೆಗಳು ಈಗಾಗಲೇ ಜಾರಿಯಲ್ಲಿವೆ. ಇನ್ನಷ್ಟು ಆಗಬೇಕಾದ್ದಿವೆ. ಇದಕ್ಕಾಗಿ ಮೂರಂಶಗಳ ಯೋಜನೆಗೆ ವೇಗ ನೀಡಲು ಶಾಸಕರು ಯೋಜನೆ ರೂಪಿಸಿದ್ದು, ವರ್ಷದೊಳಗೆ ಅದಕ್ಕೊಂದು ಹೊಸ ಆಯಾಮ ಸಿಗುವ ನಿರೀಕ್ಷೆಯಿದೆ.
ಯಾವೆಲ್ಲ ಅಂಶಗಳು? :
ಇಕೋ ಟೂರಿಸಂ, ಟೆಂಪೋ ಟೂರಿಸಂ, ತುಳುನಾಡ ಸಂಸ್ಕೃತಿ ಎಂದು ಮೂರು ವಿಭಾಗಗಳಾಗಿ ಅಭಿವೃದ್ಧಿಪಡಿಸುವುದು, ಇಕೋ ಟೂರಿಸಂನಲ್ಲಿ ಪಾಕೃತಿಕ ವೀಕ್ಷಣೆ, ಟೆಂಪೋ ಟೂರಿಸಂನಲ್ಲಿ ಪ್ರೇಕ್ಷಣಿಯ ಸ್ಥಳಗಳ ದರ್ಶನ, ತುಳುನಾಡು ಸಂಸ್ಕೃತಿಯಲ್ಲಿ ಕಂಬಳ ಇತ್ಯಾದಿ ಸಂಸ್ಕೃತಿ ಪರಿಚಯಿಸುವುದು. ಪೂರಕ ಮೂಲ ಸೌಕರ್ಯ ಒದಗಿಸಿ ಅಭಿವೃದ್ಧಿಗೊಳಿಸುವುದು.
ಉತ್ತೇಜನದ ನಿರೀಕ್ಷೆ :
ಪ್ರವಾಸಿಗರ ಸುರಕ್ಷತೆ, ಟೂರ್ ಪರ್ಮಿಟ್, ಟೂರಿಸ್ಟ್ ಗೈಡ್ ವ್ಯವಸ್ಥೆ, ಪ್ರವಾಸಿ ಕೇಂದ್ರಗಳನ್ನು ಆಕರ್ಷಿಸುವುದು, ವಿನಾಯಿತಿ, ಸ್ಥಳಿಯ ಪ್ರವಾಸೋದ್ಯಮಕ್ಕೆ ಉತ್ತೇಜಿಸುವುದು, ಡೈನಿಂಗ್ ಔಟ್ ವಿತ್ ಇನ್ ಸಿಟಿ ಆಯೋಜಿಸುವುದು, ಸ್ಥಳೀಯ ವಾಗಿ ಪ್ರಚಾರಾಂದೋಲನಗಳನ್ನು ರೂಪಿಸುವುದು, ಎಲ್ಲ ಸ್ಥಳಗಳಿಗೂ ವಾಹನ ವ್ಯವಸ್ಥೆ, ಕಡಿಮೆ ದರದಲ್ಲಿ ವಸತಿ ಸಿಗುವಂತೆ ಮಾಡುವ ನಿರೀಕ್ಷೆ ಇದೆ.
ಉದ್ಯೋಗ ಸೃಷ್ಟಿ ಗುರಿ :
ಪ್ರವಾಸೋದ್ಯಮವಾಗಿ ಅಭಿವೃದ್ಧಿ ಪಡಿಸುವುದರ ಜತೆಗೆ ಉದ್ಯೋಗ ಸೃಷ್ಟಿ ಗುರಿ ಇದೆ. ಮಾರ್ಕೆಟಿಂಗ್, ಪ್ರಮೋಷನ್, ಕೌಶಲ ತರಬೇತಿ, ಉದ್ಯೋಗಿ ರಕ್ಷಣೆ, ಬಂಡವಾಳ ಹೂಡುವ ಉದ್ದಿಮೆದಾರರಿಗೆ ಬಡ್ಡಿ ರಹಿತ ಸಾಲ ನೀಡುವ ಮೂಲಕ ಪ್ರವಾಸೋದ್ಯಮ ರಕ್ಷಣೆ, ಪ್ರವಾಸಿ ಉದ್ಯೋಗಸ್ಥರಿಗೆ ಕನಿಷ್ಠ ವೇತನ ನಿಗದಿ, ಪರವಾನಿಗೆ ಶುಲ್ಕ ಕಡಿಮೆಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಸಚಿವರ ಮೇಲೆ ನಿರೀಕ್ಷೆ :
ಕಾರ್ಕಳ ಒಳಗೊಂಡ ಉಡುಪಿ ಜಿಲ್ಲೆ ಪ್ರವಾಸೋದ್ಯಮವಾಗಿ ಬೆಳೆಯುತ್ತಿದೆ. ಪ್ರವಾಸಿಗರಿಗೆ ಅನುಕೂಲ ಹೆಚ್ಚಿಸಲು ಪ್ರವಾಸೋದ್ಯಮ ಇಲಾಖೆ ಮೂಲಕ ಟೂರಿಸ್ಟ್ ಗೈಡ್ ವ್ಯವಸ್ಥೆ ಸಹಿತ ಇತರ ಸೌಕರ್ಯ ಒದಗಿಸಬೇಕಿದೆ. ಹೆಚ್ಚು ಪ್ರವಾಸಿಗರು ದೇಶ-ವಿದೇಶ, ಅನ್ಯ ರಾಜ್ಯ-ಜಿಲ್ಲೆಗಳಿಂದ ಬರುವಾಗ ಪ್ರವಾಸಿ ತಾಣ ಹುಡುಕುವ ಪ್ರಮೇಯ ಬರದಂತೆ ವ್ಯವಸ್ಥೆ ಕಲ್ಪಿಸಬೇಕಿದೆ. ಪ್ರವಾಸೋದ್ಯಮ ಸಚಿವರ ಮೇಲೆ ನಿರೀಕ್ಷೆ ಹೆಚ್ಚಿದೆ.
You seem to have an Ad Blocker on.
To continue reading, please turn it off or whitelist Udayavani.