ನೂತನ ಯತಿಗೆ ಇಂದು ಪಟ್ಟಾಭಿಷೇಕ

ಶ್ರೀ ಪಲಿಮಾರು ಮಠದಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವ

Team Udayavani, May 12, 2019, 10:45 AM IST

yathi

ಉಡುಪಿ: ಶ್ರೀ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ನಿಯೋಜಿತ ನೂತನ ಯತಿ ರವಿವಾರ ಮಧ್ಯಾಹ್ನ 12 ಗಂಟೆಯ ಶುಭ ಮುಹೂರ್ತದಲ್ಲಿ ಗುರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಮೂಲಕ ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷಿಕ್ತರಾಗಲಿದ್ದಾರೆ. ಇದೇ ವೇಳೆ ನೂತನ ಯತಿಗಳ ನಾಮಧೇಯವನ್ನೂ ಘೋಷಿಸಲಾಗುತ್ತದೆ.

ಮಂತ್ರೋಪದೇಶ
ಶನಿವಾರ ಬೆಳಗ್ಗೆ ಶಿಷ್ಯನಿಗೆ ಗುರುಗಳು ಅಷ್ಟಮಹಾಮಂತ್ರಗಳನ್ನು ಉಪ ದೇಶಿಸಿದರು. ಇದೇ ವೇಳೆ ವಾಯು ಸ್ತುತಿ ಪುರಶ್ಚರಣೆ ಹೋಮವನ್ನು ವೈದಿಕರು ನಡೆಸಿದರು.

ಗೋಷ್ಠಿಯಲ್ಲಿ ಸಂವಾದ
ಶನಿವಾರ ಸಂಜೆಯೂ ನೂತನ ಯತಿಗಳು ಶುಕ್ರವಾರ ಸಂಜೆಯಂತೆ “ನಾಸ್ತಿಕ್ಯವಾದ ನಿರಾಕರಣೆ, ವಿಷ್ಣು ಸರ್ವೋತ್ತಮತ್ವದ ಸಮರ್ಥನೆ’ ವಿಷಯವಾಗಿ ವಾಕ್ಯಾರ್ಥ ಗೋಷ್ಠಿಯ ಸಂವಾದದಲ್ಲಿ ಪಾಲ್ಗೊಂಡರು. ಶ್ರೀ ವಿದ್ಯಾಧೀಶತೀರ್ಥರು, ಶ್ರೀ ಈಶಪ್ರಿಯ ತೀರ್ಥರು ನೂತನ ಶ್ರೀಗಳ ವಾಕಟುತ್ವ ವೃದ್ಧಿಸಲಿ ಎಂದು ಹಾರೈಸಿದರು.

ರವಿವಾರ ಮಧ್ಯಾಹ್ನ 12ಕ್ಕೆ ಹಿರಿಯ ಸ್ವಾಮೀಜಿಯವರು ಶಿಷ್ಯನನ್ನು ಮಠದ ಉತ್ತರಾಧಿಕಾರಿಯಾಗಿಸುವ ಧಾರ್ಮಿಕ ಪ್ರಕ್ರಿಯೆಗಳನ್ನು ನಡೆಸು ವರು. ಸಾರ್ವಜನಿಕರು ವೀಕ್ಷಿಸಲು ಅನುವಾಗುವಂತೆ ರಾಜಾಂಗಣದಲ್ಲಿ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿದೆ.

ವಿವಿಧ ಪಾರಾಯಣ, ಪಠನ
ರವಿವಾರ ಬೆಳಗ್ಗೆ 10 ಗಂಟೆಯೊಳಗೆ ಹಿರಿಯ ಸ್ವಾಮೀಜಿ ಶ್ರೀಕೃಷ್ಣನಿಗೆ ನಿತ್ಯದ ಮಹಾ ಪೂಜೆಯನ್ನು ಪೂರೈಸ ಲಿದ್ದಾರೆ. ಇದೇ ವೇಳೆ ಶ್ರೀಕೃಷ್ಣ ಮಠದ ಗರ್ಭಗುಡಿ ಹೊರಪೌಳಿ, ರಾಜಾಂಗಣದಲ್ಲಿ ವೇದ, ಭಾಗವತ, ಮಹಾಭಾರತಾದಿ ಗ್ರಂಥಗಳ ಪಾರಾಯಣ, ಮಹಿಳೆಯರಿಂದ ಲಕ್ಷ್ಮೀಶೋಭಾನೆ ಪಠನ ನಡೆಯಲಿದೆ. ಸುಮಾರು 600 ವರ್ಷಗಳ ಹಿಂದೆ ಪಲಿಮಾರು ಮಠದ ಆರನೆಯ ಯತಿ ಶ್ರೀ ರಾಜರಾಜೇಶ್ವರತೀರ್ಥರು ರಚಿಸಿದ “ಮಂಗಲಾಷ್ಟಕ’ವನ್ನು ದೇಶಕ್ಕೆ ಒಳಿತಾಗಲೆಂದು ಹಾರೈಸಿ ಬಾಲಕರು ಪಠಿಸಲಿದ್ದಾರೆ. ಇದಕ್ಕೆ “ಮಂಗಲ ಭಾರತ ನಿರ್ಮಾಣ’ ಎಂದು ಹೆಸರಿಸಲಾಗಿದೆ.

ಇದೇ ದಿನ ರಾಜರಾಜೇಶ್ವರತೀರ್ಥರ ಗುರು ಶ್ರೀ ವಿದ್ಯಾಮೂರ್ತಿತೀರ್ಥರ ಆರಾಧನೋತ್ಸವವೂ ಆಗಿರುವುದ ರಿಂದ ಶಿಷ್ಯಸ್ವೀಕಾರದ ವೇಳೆ ಸಾಮೂಹಿಕ ಅಭಿಯಾನ ಕೈಗೆತ್ತಿಕೊಳ್ಳ ಲಾಗಿದೆ. “ಮಂಗಲಾಷ್ಟಕ’ ಕುರಿತು “ಉದಯವಾಣಿ’ ಸರಣಿ ಲೇಖನ ಗಳನ್ನು ಪ್ರಕಟಿಸಿದ್ದು, ಪುಸ್ತಕವಾಗಿ ಮಠದಿಂದ ಮುದ್ರಿಸಿ ಹಂಚಲಾಗಿದೆ.

ಟಾಪ್ ನ್ಯೂಸ್

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

courts

Udupi: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ ಸಾಬೀತು; ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

15-

Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.