ಎಂಐಟಿ ತಂಡಕ್ಕೆ ನ್ಯೂಜಿಲಂಡ್ ಟ್ರೋಫಿ
Team Udayavani, Dec 9, 2017, 12:51 PM IST
ಉಡುಪಿ: ಮಣಿಪಾಲ ಎಂಐಟಿಯ ವ್ಯಾಕ್ಸಿಬೆಡ್ ತಂಡವು ನ್ಯೂಜಿಲಂಡ್- ಇಂಡಿಯ ಸಸ್ಟೇನೆಬಿಲಿಟಿ ಚಾಲೆಂಜ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಎಂಐಟಿಯ ಧ್ರುವಸೂರಿ, ಸಾಯಿಶ್ರೀ ಅಕೋಂಡಿಯ ಮತ್ತು ಕ್ಯಾಂಟರ್‌ಬರಿ ವಿ.ವಿ.ಯ ನಿಕೊಲಸ್ ಸ್ಟೆನ್ ಅವರನ್ನು ಒಳಗೊಂಡ ತಂಡಕ್ಕೆ ಪ್ರತಿ ಮಗುವಿಗೂ ಲಸಿಕೆ ನೀಡುವ “ಮೊಬೈಲ್ ಹೆಲ್ತ್ ಕೇರ್’ ಸಂಶೋಧನೆಗಾಗಿ ಈ ಬಹುಮಾನ ಲಭಿಸಿದೆ. ನ್ಯೂಜಿಲಂಡ್‌ನ ವಿ.ವಿ., ಶಿಕ್ಷಣ ಇಲಾಖೆ ಈ ಸ್ಪರ್ಧೆಯನ್ನು ಏರ್ಪಡಿಸಿತ್ತು. ಹೊಸದಿಲ್ಲಿಯಲ್ಲಿ ಬಹುಮಾನ ವಿತರಣೆ ನಡೆಯಿತು.
ಸಂಶೋಧನ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಬಹುಮಾನ ಪಡೆದಿರುವುದಕ್ಕೆ ವಿ.ವಿ. ಕುಲಪತಿ ಡಾ| ಎಚ್. ವಿನೋದ್ ಭಟ್ ಸಂತಸ ವ್ಯಕ್ತಪಡಿಸಿದ್ದಾರೆ. “ನಾವು ಸಂಶೋಧನೆ ಮತ್ತು ಕ್ರಿಯಾಶೀಲತೆಗೆ ಪ್ರೋತ್ಸಾಹ ನೀಡುತ್ತೇವೆ’ ಎಂದು ಮುಖ್ಯ ಶೋಧ ಅಧಿಕಾರಿ ಡಾ| ಅರುಣ್ ಶಾನುಭಾಗ್ ತಿಳಿಸಿದ್ದಾರೆ.
ಧ್ರುವ ಅವರು ಏರೋನಾಟಿಕಲ್ ಎಂಜಿನಿಯ ರಿಂಗ್‌ನ ತೃತೀಯ ವರ್ಷದ ವಿದ್ಯಾರ್ಥಿ, ಸಾಯಿಶ್ರೀ ಬಯೋಮೆಡಿಕಲ್ ಎಂಜಿನಿಯರಿಂಗ್‌ನ ನಾಲ್ಕನೇ ವರ್ಷದ ವಿದ್ಯಾರ್ಥಿ. ಇವರಿಬ್ಬರೂ ನ್ಯೂಜಿಲಂಡ್ ವಿ.ವಿ.ಗಳಲ್ಲಿ ಮೂರು ವಾರ ಅಧ್ಯಯನ ನಡೆಸುವ ಅವಕಾಶ ಪಡೆಯುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.