ಹೊಸಬಾಳು: ಮಳೆಗೆ ಕೊಚ್ಚಿಹೋದ ತಾತ್ಕಾಲಿಕ ಬದಲಿ ಸೇತುವೆ
ಯಡಮೊಗೆ, ಹೊಸಂಗಡಿ ಸಂಪರ್ಕ ಕಡಿತ; ಜನರು ಅತಂತ್ರ
Team Udayavani, Jul 8, 2019, 5:59 AM IST
ಸಿದ್ದಾಪುರ: ಹೊಸಂಗಡಿ ಹಾಗೂ ಯಡಮೊಗೆ ಸಂಪರ್ಕಿಸುವ ಹೊಸಬಾಳು ಬಳಿ ಕುಬ್ಜಾ ನದಿಯ ಸೇತುವೆ ಶಿಥಿಲಗೊಂಡ ಹಿನ್ನೆಲೆ ಮೋರಿ ಅಳವಡಿಸಿ, ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆಯೂ ಶುಕ್ರವಾರದ ಭಾರೀ ಮಳೆಗೆ ಕೊಚ್ಚಿ ಹೋಗಿದೆ. ಇದರಿಂದ ಹೊಸಂಗಡಿ ಹಾಗೂ ಯಡಮೊಗೆ ಸಂಪರ್ಕ ಕಡಿತಗೊಂಡಿದ್ದು, ಜನರು ಅತಂತ್ರರಾಗಿದ್ದಾರೆ.
40 ವರ್ಷ ಹಿಂದೆ ನಿರ್ಮಿಸಿದ ಹೊಸಬಾಳು ಹಳೆ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದರಿಂದ ಜಿ. ಪಂ. ಅನುದಾನದಡಿ ಸುಮಾರು 3.50 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ಪಕ್ಕದಲ್ಲೇ 12 ಪೈಪ್‌ಗ್ಳನ್ನು ಹಾಕಿ ಮೋರಿಯೊಂದನ್ನು ನಿರ್ಮಿಸಲಾಗಿತ್ತು. ಆದರೆ ಅದು ಸೇತುವೆಗಿಂತ ಕೆಳಮಟ್ಟದಲ್ಲಿರುವುದರಿಂದ ಧಾರಾಕಾರ ಮಳೆ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.
ಇದರಿಂದ ವಿದ್ಯಾರ್ಥಿಗಳು, ನಿತ್ಯ ಸಂಚಾರಿ ಗಳು, ಕಾರ್ಮಿಕರು ಯಡಮೊಗೆಯಿಂದ ಕಾರೂರು ಮಾರ್ಗವಾಗಿ ಕೆರೆಕಟ್ಟೆಗೆ ಬಂದು ಅಲ್ಲಿಂದ ಹೊಸಂಗಡಿಗೆ ಹೋಗಬೇಕಾಗಿದೆ.
ಆಗದ ಹೊಸ ಸೇತುವೆ
ಹೊಸಬಾಳು ಸೇತುವೆ ಶಿಥಿಲಗೊಂಡು ವರ್ಷ ಗಳೇ ಉರುಳಿವೆ. ಕಳೆದ ವರ್ಷ ಜಿಲ್ಲಾಧಿಕಾರಿ ಫ್ರಾನ್ಸಿಸ್ ಮೇರಿ ಹಾಗೂ ಜಿ.ಪಂ. ಸಿಇಒ ಶಿವಾನಂದ ಕಾಪಶಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಸೇತುವೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಫೆಬ್ರವರಿಯಲ್ಲಿ ಮೋರಿ ನಿರ್ಮಿಸಲಾಗಿತ್ತು. ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರಿಂದ ಕೇಂದ್ರದ ಸಿಆರ್‌ಎಫ್ ನಿಧಿಯಡಿ ಹೊಸ ಸೇತುವೆ ನಿರ್ಮಾಣಕ್ಕೆ ಇಲಾಖೆ ಮುಂದಾಗಿತ್ತು. ಆದರೆ ಆರು ತಿಂಗಳಲ್ಲಿ ಪಿಲ್ಲರ್‌ಗೆ ಹೊಂಡ ಮಾಡಿದ್ದು ಬಿಟ್ಟರೆ ಕಾಮಗಾರಿ ಮುಂದಡಿ ಇಟ್ಟಿಲ್ಲ. ಸೇತುವೆ ಕೈಗೂಡುವ ಲಕ್ಷಣವೂ ಇಲ್ಲ!
ಎಚ್ಚೆತ್ತುಕೊಳ್ಳಲಿಲ್ಲ
ಭಾರೀ ಪ್ರಮಾಣದ ಮಳೆಯಾದರೆ ಯಡಮೊಗೆ- ಹೊಸಂಗಡಿ ಸಂಪರ್ಕ ಕಡಿದುಕೊಳ್ಳುವ ಆತಂಕದ ಬಗ್ಗೆ ಉದಯವಾಣಿಯು ಈ ಹಿಂದೆಯೇ ಬೆಳಕು ಚೆಲ್ಲಿತ್ತು. ಆದರೆ ಅಧಿಕಾರಿಗಳು, ಜನಪ್ರತಿನಿಧಿ ಗಳು ಎಚ್ಚೆತ್ತುಕೊಳ್ಳದ್ದರಿಂದ ಜನರು ಸಮಸ್ಯೆ ಅನುಭವಿಸುವಂತಾಗಿದೆ.
ಮೋರಿ ನಿರ್ಮಾಣದಲ್ಲಿ ಹಣ ಗುಳುಂ?
ಸೇತುವೆ ಪಕ್ಕದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಸೇತುವೆಗೆ 3.50 ಲಕ್ಷ ರೂ. ಬಿಡುಗಡೆಯಾಗಿದ್ದು, ಆದರೆ ಈ ಕಾಮಗಾರಿಗೆ 1ರಿಂದ 1.50 ಲಕ್ಷ ರೂ. ವೆಚ್ಚ ಆಗಿದ್ದಿರಬಹುದು ಎಂದು ಅಂದಾಜಿಲಸಾಗಿದೆ. ಬಾಕಿ ಹಣ 2 ಲಕ್ಷ ರೂ. ದುರ್ಬಳಕೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪರ್ಯಾಯ ರಸ್ತೆ ದುರಸ್ತಿ ಮಾಡಿ
ಈ ಭಾಗದಿಂದ 150 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸಿದ್ದಾಪುರ, ಹೊಸಂಗಡಿ, ಶಂಕರನಾರಾಯಣ, ಕುಂದಾಪುರ ಕಡೆಯ ಕಾಲೇಜು ವ್ಯಾಸಂಗಕ್ಕೆ ತೆರಳುತ್ತಾರೆ. ಸದ್ಯ ಪರ್ಯಾಯವಾಗಿ ಕಾರೂರು ಮೂಲಕ ಕೆರೆಕಟ್ಟೆ ಹೊಸಂಗಡಿಗೆ ತೆರಳಬೇಕಿದೆ. ಆದರೆ ಈ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರವೇ ಕಷ್ಟಕರವಾಗಿದೆ. ಇದನ್ನಾದರೂ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Network Problem: ಹಲೋ…ಹಲೋ…ಹಲೋ ಟೆಸ್ಟಿಂಗ್!
Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Network Problem: ಹಲೋ…ಹಲೋ…ಹಲೋ ಟೆಸ್ಟಿಂಗ್!
Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ
Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.