ರಾ.ಹೆ. 169ಎ ಕಾಮಗಾರಿ: ಜನರಿಗೆ ದಿಗ್ಬಂಧನ ಭೀತಿ!
ಎತ್ತರ -ತಗ್ಗು ರಸ್ತೆಯಿಂದ ಸಂಪರ್ಕ ಕಳೆದುಕೊಂಡ ಉಪ ರಸ್ತೆಗಳು
Team Udayavani, May 10, 2019, 6:10 AM IST
ಉಡುಪಿ: ಮಣಿಪಾಲ – ಉಡುಪಿ ರಾ.ಹೆ. 169ಎ ಚತುಷ್ಪಥ ಕಾಮಗಾರಿ ಅವೈಜ್ಞಾನಿಕವಾಗಿ ನಡೆ ಯುತ್ತಿರುವುದರಿಂದ ರಸ್ತೆ ಅಸುಪಾಸಿನ ಮನೆಗಳು ಅತಂತ್ರಗೊಂಡಿವೆ.
ರಸ್ತೆ ವಿಸ್ತರಣೆಯ ಕಾಮಗಾರಿ ನಡೆಯುವಾಗ ಉಡುಪಿ-ಮಣಿಪಾಲ ಮಾರ್ಗದ ಕೆಲವು ಪ್ರದೇಶಗಳಲ್ಲಿ ರಸ್ತೆಯನ್ನು ಏಳೆಂಟು ಅಡಿ ಎತ್ತರ ಹಾಗೂ ಮಣಿಪಾಲ-ಉಡುಪಿ ಮಾರ್ಗದಲ್ಲಿ ಅದೇ ಕೆಲವು ಅಡಿ ತಗ್ಗು ಮಾಡಲಾಗಿದೆ. ಇದರಿಂದಾಗಿ ಹೆದ್ದಾರಿಯಿಂದ ವಿವಿಧ ಪ್ರದೇಶ ಗಳಿಗೆ ಸಂಪರ್ಕ ಕಲ್ಪಿಸುವ ಉಪರಸ್ತೆ ಗಳು ಸಂಪೂರ್ಣ ಸಂಪರ್ಕ ಕಳೆದು ಕೊಂಡಿವೆ.
ಉಡುಪಿ ಮಣಿಪಾಲ ರಾ.ಹೆ. ಮಾರ್ಗದಲ್ಲಿ ಹತ್ತಾರು ಉಪರಸ್ತೆಗಳಿವೆ. ಅವುಗಳು ನೇರವಾಗಿ ಹೆದ್ದಾರಿ ಸಂಪರ್ಕಿಸುತ್ತವೆ. ಕೊಂಚ ಎಚ್ಚರ ತಪ್ಪಿದರೂ ವಾಹನ ಸವಾರ ಅವೈಜ್ಞಾನಿಕವಾಗಿ ನಿರ್ಮಿಸಿದ ಎತ್ತರ ತಗ್ಗು ರಸ್ತೆಯಿಂದ ಅಪಾಯಕ್ಕೆ ಸಿಲುಕುವುದು ಖಚಿತ.
ಗೃಹ ದಿಗ್ಬಂಧನ
ಅಸುಪಾಸಿನ ಜಾಗ ಕೊರೆದು ರಸ್ತೆ ವಿಸ್ತರಣೆ ಮಾಡಲಾಗಿದೆ. ಇದರಿಂದಾಗಿ ರಸ್ತೆಯ ಸಮೀಪ ವಾಸಿಸುವರಿಗೆ ಗೃಹ ದಿಗ್ಬಂಧನದ ರೀತಿ ಆಗಿದೆ. ಕೆಲವೊಂದು ಮನೆಗಳು ರಸ್ತೆಯಿಂದ ಕೆಲವು ಅಡಿ ಕೆಳಗೆ ಇನ್ನೂ ಕೆಲವೊಂದು ಮನೆಗಳು ರಸ್ತೆಗಿಂತ ಕೆಲವು ಅಡಿ ಎತ್ತರ ದಲ್ಲಿರುವುದರಿಂದ ರಸ್ತೆಗೆ ಬರುವ ಅವಕಾಶ ವಿಲ್ಲವಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿಲ್ಲ. ಮಳೆಗಾಲಕ್ಕಿಂತ ಮೊದಲು ಈ ಕಾಮಗಾರಿ ಮುಗಿಯದಿದ್ದಲ್ಲಿ ಮತ್ತಷ್ಟು ಸಮಸ್ಯೆಯಾಗುವುದು ಖಚಿತ.
ಹೆದ್ದಾರಿ ಸಂಪರ್ಕಕ್ಕೆ ತೊಂದರೆ
ಅವೈಜ್ಞಾನಿಕ ಕಾಮಗಾರಿಯಿಂದ ಸ್ಥಳೀಯರಿಗೆ ತೊಂದರೆಯಾಗಿದೆ. ಮಕ್ಕಳು ಮನೆಯಿಂದ ಹೊರಗೆ ಹೋಗುವಂತಿಲ್ಲ. ಹೆದ್ದಾರಿ ಸಂಪರ್ಕಿಸ ಬೇಕಾದರೆ ದೊಡ್ಡ ಸಾಹಸ ಮಾಡಬೇಕಾಗಿದೆ. ಸ್ಥಳೀಯರ ಅಭಿಪ್ರಾಯ ತೆಗೆದುಕೊಳ್ಳದೆ ಯಾರೋ ಮಾಡಿರುವ ಪ್ರಾಜೆಕ್ಟ್ ಡಿಸೈನ್‌ಗೆ ಯಾರೋ ಒಪ್ಪಿಗೆ
ನೀಡಿದಂತೆ ಇದೆ.
– ಡಾ| ಸುರೇಶ್ ಶೆಣೈ, ಲಕ್ಷ್ಮೀಂದ್ರನಗರ ನಿವಾಸಿ
ಕಾಮಗಾರಿ ಅನಂತರ ಕೂಡುರಸ್ತೆ ನಿರ್ಮಾಣ
ರಸ್ತೆ ಕಾಮಗಾರಿ, ಡ್ರೈನೇಜ್ ಕಾಮಗಾರಿ ಸಂಪೂರ್ಣ ಮುಗಿದ ತತ್‌ಕ್ಷಣ ಕೂಡು ರಸ್ತೆಗಳನ್ನು ಮಾಡಿಕೊಡಲಾಗುತ್ತದೆ.
– ಮಂಜುನಾಥ ನಾಯಕ್, ಎಂಜಿನಿಯರ್ ರಾ.ಹೆ.
ಹಿಂದಿನಂತೆ ಎಲ್ಲೆಂದರಲ್ಲಿ ದಾಟುವಂತಿಲ್ಲ
ಸಾರ್ವಜನಿಕರು ಹಿಂದಿನಂತೆ ರಾ.ಹೆ. ಎಲ್ಲೆಂದರಲ್ಲಿ ದಾಟುವಂತಿಲ್ಲ. ಎಚ್ಚರಿಕೆ ವಹಿಸಿದೆ ದಾಟಲು ಪ್ರಯತ್ನಿಸಿದರೆ ಅಪಾಯ ಖಂಡಿತ.
– ವಿನಾಯಕ ಕಾಮತ್, ಇಂದ್ರಾಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ
Network Problem: ಇಲ್ಲಿ ಟವರ್ ಇದೆ, ಆದರೆ ನೆಟ್ವರ್ಕ್ ಸಿಗಲ್ಲ!
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.