ರಾ.ಹೆ. 66ರಲ್ಲಿ ಕಾಡುವ ರಸ್ತೆ ಹೊಂಡಗಳು
Team Udayavani, Jun 23, 2018, 6:00 AM IST
ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಮೂಳೂರು, ಕಾಪು, ಪಾಂಗಾಳ, ಕಟಪಾಡಿ, ಉದ್ಯಾವರದಲ್ಲಿ ರಸ್ತೆ ಮಧ್ಯದಲ್ಲಿ ಬೃಹತ್ ಹೊಂಡಗಳು ಬಿದ್ದಿದ್ದು, ಅಪಾಯಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ.
ಕಾಪು ಮೆಸ್ಕಾಂ ಮುಂಭಾಗ ಮತ್ತು ಫ್ಲೆ ಓವರ್ ಬಳಿ, ಮೂಳೂರು, ಪಾಂಗಾಳ ಕಟ್ಟಿಕೆರೆ ಬಳಿ, ಕಟಪಾಡಿ ಕಲ್ಲಾಪು ಸೇತುವೆ ಬಳಿ ಮತ್ತು ಉದ್ಯಾವರದಲ್ಲಿ ಹೆದ್ದಾರಿ ಮಧ್ಯ ಬಿದ್ದಿರುವ ಬೃಹದಾಕಾರಾದ ಹೊಂಡಗಳು ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿವೆ.
ದೊಡ್ಡದಾಗುತ್ತಿರುವ ಹೊಂಡಗಳು
ಹೆದ್ದಾರಿಯಲ್ಲಿನ ವಾಹನ ಒತ್ತಡದಿಂದಾಗಿ ಮತ್ತು ಮಳೆಯಿಂದಾಗಿ ಹೊಂಡ ದೊಡ್ಡದಾಗುತ್ತಾ ಹೋಗುತ್ತಿದೆ. ಒಂದು ವೇಳೆ ಹೊಂಡಗಳು ಮತ್ತಷ್ಟು ವಿಸ್ತರಣೆ ಗೊಂಡರೆ ಅಪಘಾತಕ್ಕೆ ಕಾರಣವಾಗುತ್ತದೆ. ಜತೆಗೆ ವಾಹನ ವೇಗಕ್ಕೂ ಹೊಂಡಗಳು ಅಡ್ಡಿಯಾಗುತ್ತಿವೆ. ಹೆದ್ದಾರಿಯಾದ್ದರಿಂದ ವಾಹನಗಳು ಸಾಕಷ್ಟು ವೇಗದಲ್ಲಿ ಸಾಗುತ್ತಿದ್ದು ಹೊಂಡ ಕಂಡುಬಂದಲ್ಲಿ ಬ್ರೇಕ್ ಹಾಕುವುದರಿಂದ ಅಪಘಾತಗಳಿಗೆ ಎಡೆಮಾಡುತ್ತದೆ.
ದುರಸ್ತಿಗೆ ಸೂಚನೆ
ಹೆದ್ದಾರಿಯಲ್ಲಿನ ಹೊಂಡಗಳನ್ನು ಮುಚ್ಚುವಂತೆ ಹೆದ್ದಾರಿ ಇಲಾಖೆಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಆದರೆ ಈವರೆಗೂ ಕ್ರಮ ಕೈಗೊಂಡಿಲ್ಲ.
– ನಿತ್ಯಾನಂದ ಗೌಡ, ಕಾಪು ಎಸ್‌ಐ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
MUST WATCH
ಹೊಸ ಸೇರ್ಪಡೆ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.