ರಾ.ಹೆ. 66: ಅಪಾಯಕಾರಿಯಾಗಿ ವಿದ್ಯುತ್ ಕಂಬ ಸಾಗಾಟ
Team Udayavani, Apr 13, 2019, 6:51 AM IST
ರಾ.ಹೆ. 66ರ ಮೂಲಕ ಲಾರಿಯಲ್ಲಿ ಅಪಾಯಕಾರಿಯಾಗಿ ವಿದ್ಯುತ್ ಕಂಬ ಸಾಗಾಟ ಮಾಡುತ್ತಿರುವುದು.
ಕಾಪು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಾಯಕಾರಿಯಾಗಿ ಗುರುವಾರ ಮಧ್ಯಾಹ್ನ ಲಾರಿಯಲ್ಲಿ ವಿದ್ಯುತ್ ಕಂಬಗಳನ್ನು ಸಾಗಾಟ ಮಾಡಿದ್ದು, ಇದರಿಂದಾಗಿ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಯಿತು.
20ಕ್ಕೂ ಅಧಿಕ ಕಂಬಗಳು
ಉಡುಪಿಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಲಾರಿಯೊಂದರಲ್ಲಿ ಅಪಾಯಕಾರಿ ರೀತಿಯಲ್ಲಿ 20ಕ್ಕೂ ಅಧಿಕ ವಿದ್ಯುತ್ ಕಂಬಗಳನ್ನು ಜೋಡಿಸಿಕೊಂಡು, ಯಾವುದೇ ರೀತಿಯ ಮುನ್ಸೂಚನೆ ನೀಡುವ ಅಥವಾ ಸಾರ್ವಜನಿಕ ಎಚ್ಚರಿಕೆ ಫಲಕ ಅಳವಡಿಸದೇ ಸಾಗಾಟ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪಾಯಕಾರಿ ವಾಹನ ಚಾಲನೆ
ಕುಂದಾಪುರದಿಂದ ಮಂಗಳೂರಿ ನತ್ತ ತೆರಳಿದ ಲಾರಿ ಚಾಲಕನು, ಹಿಂಬದಿಯಲ್ಲಿ ಕಟ್ಟಿದ್ದ ಕಂಬಗಳು ರಸ್ತೆಗೆ ತಾಗುವಂತೆ ನೇತಾಡುತ್ತಿದ್ದರೂ ಕೂಡ ಗಮನಿಸಿಯೂ ಅಪಾಯಕಾರಿಯಾಗಿ ಚಲಾಯಿಸಿದ್ದನು.
ಸಹಾಯಕನ ಮನವಿಗೂ ನಿರ್ಲಕ್ಷ್ಯ
ಲಾರಿಯಲ್ಲಿ ಹೇರಲಾಗಿದ್ದ ವಿದ್ಯುತ್ ಕಂಬಗಳ ಜತೆಗೆ ಕುಳಿತಿದ್ದ ವ್ಯಕ್ತಿ (ಸಹಾಯಕ) ಯೋರ್ವ ಪದೇ ಪದೇ ಚಾಲಕನಿಗೆ ಎಚ್ಚರ ನೀಡುತ್ತಿದ್ದರೂ, ಚಾಲಕ ಲಾರಿಯನ್ನು ಒಂದೆಡೆ ನಿಲ್ಲಿಸಿ, ಪರಿಶೀಲನೆ ನಡೆಸದೆ ಲಾರಿ ಓಡಿಸುವ ಮೂಲಕ ರಸ್ತೆ ಸಂಚಾರ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾನೆ ಎನ್ನುವುದು ಹೈವೇ ಸಂಚಾರಿಗಳ ಆರೋಪವಾಗಿದೆ.
ಹಿಂದಿನ ವಾಹನಗಳ ಸಂಚಾರಕ್ಕೆ ಅಡಚಣೆ
ಹಿಂಭಾಗದಲ್ಲಿ ಜೋಡಿಸಲಾಗಿದ್ದ ವಿದ್ಯುತ್ ಕಂಬಗಳ ಭಾರ ತಾಳಲಾರದೆ ಲಾರಿ ಎಡಬದಿ ಮುರಿತಕ್ಕೊಳಗಾದಂತೆ ಸಂಚರಿಸಿದ್ದು, ಇದರಿಂದಾಗಿ ಲಾರಿಯ ಹಿಂದಿನಿಂದ ಸಂಚರಿಸಿದ ಮಂಗಳೂರು ಕಡೆಗೆ ತೆರಳುವ ವಾಹನಗಳು ಗರಿಷ್ಠ ಅಂತರ ಕಾಯ್ದುಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.