![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 5, 2018, 6:00 AM IST
ಉಡುಪಿ: ನ್ಯಾಶನಲ್ ಇನ್‌ಸ್ಟಿಟ್ಯೂಶನಲ್ ರ್‍ಯಾಂಕಿಂಗ್ ಫ್ರೆಮ್‌ವರ್ಕ್ (ಎನ್‌ಐಆರ್‌ಎಫ್) ಪಟ್ಟಿಯಲ್ಲಿ ದೇಶದ ಖಾಸಗಿ ವಿಶ್ವವಿದ್ಯಾನಿಲಯಗಳ ಪೈಕಿ ಮಣಿಪಾಲದ ಮಾಹೆ 7ನೇ ರ್‍ಯಾಂಕ್ ಗಳಿಸಿದೆ ಎಂದು ಕೇಂದ್ರ ಮಾನವ ಸಂಪದ ಸಚಿವಾಲಯ ಘೋಷಿಸಿದೆ.
ಕೆಎಂಸಿ ಗ್ರೀನ್ಸ್‌ನಲ್ಲಿ ಮಂಗಳವಾರ ಜರಗಿದ “ಸಿಲ್ವರ್ ಉತ್ಸವ್ - 2018’ರ ಉದ್ಘಾಟನ ಸಮಾರಂಭದಲ್ಲಿ ಕುಲಪತಿ ಡಾ| ಎಚ್. ವಿನೋದ್ ಭಟ್ ಅವರು ಮಾತನಾಡಿ “ಈ ಹಿಂದಿನ ಎಲ್ಲ ಸಾಧನೆಗಳಿಗಿಂತ ಈ ಬಾರಿ ಉತ್ತಮ ಸಾಧನೆಯಾಗಿದೆ. ಮಾಹೆ ಖಾಸಗಿ ವಿ.ವಿ.ಗಳಲ್ಲಿ ದೇಶದಲ್ಲೇ 11ನೇ ಸ್ಥಾನಕ್ಕೆ ಹಾಗೂ ಸಮಗ್ರವಾಗಿ (ಖಾಸಗಿ ಮತ್ತು ಸರಕಾರಿ ವಿ.ವಿ.ಗಳು) 30ರಿಂದ 18ನೇ ಸ್ಥಾನಕ್ಕೇರಿದೆ. ಖಾಸಗಿ ವಿ.ವಿ.ಗಳಲ್ಲಿ ಮಾಹೆ ಕಳೆದ ವರ್ಷ 18ನೇ ಸ್ಥಾನ ದಲ್ಲಿತ್ತು. ಮುಂದಿನ ವರ್ಷಗಳಲ್ಲಿ ಮತ್ತಷ್ಟು ಉತ್ತಮ ಸಾಧನೆ ದಾಖಲಿಸಿ ಟಾಪ್ 10ರ ಸ್ಥಾನಕ್ಕೆ ನೆಗೆಯುವ ವಿಶ್ವಾಸವಿದೆ’ ಎಂದು ಹೇಳಿದರು.
ಮಣಿಪಾಲ ಕೆಎಂಸಿಗೆ 4ನೇ ರ್‍ಯಾಂಕ್
ಮಣಿಪಾಲದ ಕೆಎಂಸಿ ದೇಶದಲ್ಲಿ 4ನೇ ರ್‍ಯಾಂಕ್, ಮಂಗಳೂರಿನ ಕೆಎಂಸಿ 16ನೇ ರ್‍ಯಾಂಕ್, ಮಣಿಪಾಲ್ ಕಾಲೇಜ್ ಆಫ್ ಫಾರ್ಮಸುÂಟಿಕಲ್ ಸಾಯನ್ಸಸ್ (ಎಂಕಾಪ್ಸ್) 7ನೇ ರ್‍ಯಾಂಕ್ ಪಡೆದಿದೆ. ಎಂಐಟಿ 43ನೇ ರ್‍ಯಾಂಕ್‌ನಿಂದ 39ನೇ ಸ್ಥಾನಕ್ಕೇರಿದೆ. ಫೇಕಲ್ಟಿ ಆಫ್ ಆರ್ಕಿಟೆಕ್ಚರ್ ಕಾಲೇಜು 10ನೇ ರ್‍ಯಾಂಕ್ ಗಳಿಸಿದೆ.
ತಂಡದ ಶ್ರಮ
“ಎಲ್ಲ ಸಿಬಂದಿ ಮತ್ತು ವಿ.ವಿ ಆಡಳಿತ ಮಂಡಳಿಯು ತಂಡವಾಗಿ ಮಾಡಿದ ಕೆಲಸದಿಂದ ಈ ಸಾಧನೆ ಸಾಧ್ಯವಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಹೊಸ ಹೊಸ ಸಂಶೋಧನೆ, ಬೋಧನಾ ವಿಧಾನಗಳ ಅಳವಡಿಕೆಯೊಂದಿಗೆ ವೈದ್ಯ ಕೀಯ ಶಿಕ್ಷಣದಲ್ಲಿ ತನ್ನ ಗುಣಮಟ್ಟ ವನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದೆ’ ಎಂದು ಕೆಎಂಸಿ ಡೀನ್ ಡಾ| ಪ್ರಜ್ಞಾ ರಾವ್ ಹೇಳಿದರು.
ಕೆಎಂಸಿ ಮಂಗಳೂರಿನ ಡೀನ್ ಡಾ| ವೆಂಕಟ್ರಾಯ ಪ್ರಭು ಅವರು ಮಾತನಾಡಿ, “ಕೆಎಂಸಿ ಮಂಗಳೂರು ಸದಾ ಉತ್ತಮ ಗುಣ ಮಟ್ಟದ ವೈದ್ಯಕೀಯ ಶಿಕ್ಷಣಕ್ಕೆ ಹೆಸರುವಾಸಿ ಯಾಗಿದೆ. ಈಗ ಎನ್‌ಐಆರ್‌ಎಫ್ ರ್‍ಯಾಂಕಿಂಗ್ ಇದನ್ನು ದೃಢಪಡಿಸಿದೆ’ ಎಂದು ಹೇಳಿದರು.
ಎಂಕಾಪ್ಸ್ ಪ್ರಾಂಶು ಪಾಲ ಡಾ| ಸಿ. ಮಲ್ಲಿಕಾರ್ಜುನ ರಾವ್ ಅವರು ಮಾತನಾಡಿ “ಸಂಸ್ಥೆ ಈ ಬಾರಿ 6.67 ಅಂಕಗಳನ್ನು ಹೆಚ್ಚು ಪಡೆದಿದೆ’ ಎಂದು ಹೇಳಿದರು.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.