![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 29, 2018, 7:05 AM IST
ಮಲ್ಪೆ: ಮಲ್ಪೆ ಪಡುಕರೆಯಲ್ಲಿ ಓಡಾಡುತ್ತಿದ್ದ ನರ್ಮ್ ಬಸ್ಸು ತಿಂಗಳ ಹಿಂದೆ ಸ್ಥಗಿತಗೊಂಡಿದ್ದು ಅದು ಮತ್ತೆ ಸಂಚಾರ ಪುನರಾಂಭಿಸುವಂತೆ ಪಡುಕರೆಯ ಸಮಸ್ತ ನಾಗರಿಕರು ಜನಸ್ಪಂದನದ ನೇತೃತ್ವದಲ್ಲಿ ಸಾರಿಗೆ ಅಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿದ್ದಾರೆ.
ಯಾವುದೇ ಬಸ್ ಸಂಚಾರವಿಲ್ಲದ ಪಡುಕರೆಗೆ ಜನರಿಗೆ ಅತ್ಯವಶ್ಯ ಎನ್ನುವ ನೆಲೆಯಲ್ಲಿ ಪಡುಕರೆ ಯುವಕ ಮಂಡಲ ಹಾಗೂ ಜನಸ್ಪಂದನ ಪಡುಕರೆಯ ಮನವಿಯ ಮೇರೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ವಿಶೇಷ ಕಾಳಜಿಯಿಂದ ಎರಡು ನರ್ಮ್ ಬಸ್ ಸೇವೆಯು ಪ್ರಾರಂಭಗೊಂಡಿತ್ತು. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೆಲಸಕ್ಕೆ ಹೋಗುವವರಿಗೆ ಹಾಗೂ ಹಿರಿಯರಿಗೂ ತುಂಬಾ ಅನುಕೂಲಕರವಾಗಿತ್ತು. ಆದರೆ ಇತೀ¤ಚೆಗೆ ಕೆಲವು ತಿಂಗಳುಗಳಿಂದ ಒಂದು ನರ್ಮ್ ಬಸ್ ಸೇವೆ ಸ್ಥಗಿತಗೊಂಡಿದೆ.
ಇದರಿಂದ ಜನರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಅಲ್ಲದೆ ಪಡುಕರೆ ಯುವಕ ಮಂಡಲದ ಸಹಭಾಗಿತ್ವದಲ್ಲಿ ಮಹಿಳಾ ಮಂಡಲ ವತಿಯಿಂದ ಪಡುಕರೆ ಶ್ರೀ ಜ್ಞಾನೋದಯ ಭಜನಾ ಮಂದಿರ ಬಳಿ ನರ್ಮ್ ಬಸ್‌ಗಾಗಿ ಕಾಯುವ ಜನರಿಗೆ ಬಿಸಿಲು ಮತ್ತು ಮಳೆಯ ತೊಂದರೆಯಾಗುವ ದೃಷ್ಟಿಯಿಂದ ಸುಮಾರು 60000 ರೂ. ವೆಚ್ಚದಲ್ಲಿ ಉತ್ತಮವಾದ ಬಸ್ಸು ತಂಗುದಾಣ ನಿರ್ಮಾಣಗೊಳಿಸಲಾಗಿದೆ. ಕನಿಷ್ಟ 2 ನರ್ಮ್ ಬಸ್ಸು ಸಂಚಾರಗೊಳ್ಳದಿದ್ದಲ್ಲಿ ಈ ತಂಗುದಾಣವು ಅಷ್ಟು ಉಪಯೋಗವಾಗದು. ಆದುದರಿಂದ ಬೇರೆ ಯಾವುದೇ ಬಸ್ ಸಂಚಾರವಿಲ್ಲದ ಪಡುಕರೆಗೆ ಕೂಡಲೇ ಸ್ಥಗಿತಗೊಂಡಿರುವ ನರ್ಮ್ ಬಸ್ ಸಂಚಾರವನ್ನು ಪುನರಾಂಭಿಸುವಂತೆ ಪಡುಕರೆಯ ಸಮಸ್ತ ನಾಗರಿಕರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜನಸ್ಪಂದನ ಪಡುಕರೆಯ ಅಧ್ಯಕ್ಷ ಜಗನ್ನಾಥ ಕಡೆಕಾರ್, ಉಪಾಧ್ಯಕ್ಷ ಸುರೇಶ್ ಮೆಂಡನ್, ಕಾರ್ಯದರ್ಶಿ ಸುದರ್ಶನ್ ಸುವರ್ಣ, ಕೋಶಾಧಿಕಾರಿ ವಸಂತ್ ಸುವರ್ಣ, ಪದಾಧಿಕಾರಿಗಳಾದ ಅಶೋಕ್ ಸುವರ್ಣ, ಗಣೇಶ್ ಕುಂದರ್, ಆನಂದ ಕಾಂಚನ್, ಜಯಕರ ಅಮೀನ್, ಜನಾರ್ದನ್ ಬಂಗೇರ, ಸತೀಶ್ ಕೋಟ್ಯಾನ್, ಅವಿನಾಶ್ ಮೆಂಡನ್ ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.